AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bus Strike 9ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ; ಮೋಂಬತ್ತಿ ಬೆಳಗಿಸಿ ನೌಕರರ ಚಳವಳಿ

ಕಳೆದ ಎಂಟು ದಿನಗಳಿಂದ ಮುಷ್ಕರ ಮಾಡಿದ್ದಾಯ್ತು. ಮೆಜೆಸ್ಟಿಕ್​ನಲ್ಲಿ ಬೊಂಡ ಬಜ್ಜಿ‌ ಸೇಲ್ ಮಾಡಿ ನೋಡಿದ್ರು. ಡಿಸಿ ಕಚೇರಿ ಮುಂದೆ ಹೆಂಡ್ತಿ ಮಕ್ಕಳೊಂದಿಗೆ ತಟ್ಟೆ ಲೋಟ ತಟ್ಟೆ ಬಾರ್ಸಿದ್ದಾಯ್ತು. ಯುಗಾದಿ ದಿನವೇ ಭಿಕ್ಷೆ ಬೇಡಿಯು ಆಯ್ತು. ಆದ್ರೆ ಸರ್ಕಾರ ಮಾತ್ರ ಕರಗುತ್ತಿಲ್ಲ. ಹೀಗಾಗಿ ಇವತ್ತು ತಮ್ಮ ಬಾಳಲ್ಲಿ ಕವಿದಿರುವ ಕತ್ತಲು ಓಡಿಸಲು ಪ್ಲ್ಯಾನ್ ಮಾಡಿದ್ದಾರೆ.

Bus Strike 9ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ; ಮೋಂಬತ್ತಿ ಬೆಳಗಿಸಿ ನೌಕರರ ಚಳವಳಿ
ಕೋಡಿಹಳ್ಳಿ ಚಂದ್ರಶೇಖರ್
ಆಯೇಷಾ ಬಾನು
|

Updated on:Apr 15, 2021 | 11:32 AM

Share

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ದಿನೇದಿನೆ ತೀವ್ರ ಗೊಳ್ಳುತ್ತಿದೆ. ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕದ ಸರ್ಕಾರದ ವಿರುದ್ಧ ಒಂದಲ್ಲ ಒಂದು ಚಳವಳಿಯನ್ನ ನೌಕರರು ಮಾಡುತ್ತಿದ್ದಾರೆ. ಆದ್ರೆ ನೌಕರರ ಬೇಡಿಕೆಗೆ ಸರ್ಕಾರ ಮಣೆ ಹಾಕುತ್ತಿಲ್ಲ. ನೌಕರರು ಸಹ 6ನೇ ವೇತನ ಆಯೋಗ ಪಟ್ಟು ಬಿಡ್ತಿಲ್ಲ. ಹೀಗಾಗಿ ಇಬ್ಬರ ನಡುವಿನ ಕಿತ್ತಾಟದಲ್ಲಿ ಪ್ರಯಾಣಿಕರು ಮಾತ್ರ ಸಂಕಷ್ಟ ಅನುಭವಿಸ್ತಿದ್ದಾರೆ.

9ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ ಸಾರಿಗೆ ನೌಕರರ ಬತ್ತಳಿಕೆಯಲ್ಲಿದ್ದ ಎಲ್ಲಾ ಅಸ್ತ್ರಗಳು ಖಾಲಿಗುತ್ತಿದ್ದು, ಜಯ ಮಾತ್ರ ಸಿಗ್ತಿಲ್ಲ. ಹಬ್ಬದ ದಿನವೇ ಬಿಕ್ಷೆ ಬೇಡಿರುವ ಸಾರಿಗೆ ನೌಕರರು ಇಂದು ಸಂಜೆ ಆರು ಗಂಟೆಗೆ ದೀಪ ಬೆಳಗುವ ಮೂಲಕ ಆರನೇ ವೇತನ ಜಾರಿ ಮಾಡಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದಕ್ಕೂ ಸರ್ಕಾರ ಮಣಿಯಲ್ಲಿಲ್ಲ ಅಂದರೆ ರಾಜ್ಯದ 224 ಶಾಸಕರ ಮನೆ ಮುಂದೆ ಧರಣಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ಬದುಕನ್ನು ಕತ್ತಲಾಗಿಸಿರುವುದನ್ನು ಖಂಡಿಸಿ ಸಾರಿಗೆ ನೌಕರರು ಮೊಂಬತ್ತಿ ಬೆಳಗಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ರು.

ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದು ಆರನೇ ವೇತನ ಆಯೋಗ ಶಿಫಾರಸ್ಸಿಗೆ ಸೂಚನೆ ನೀಡಬೇಕು. ರಾಜ್ಯ ಸರ್ಕಾರ ಸಮಾನ ವೇತನ ನೀಡ್ತಾಯಿಲ್ಲ. ನಮ್ಮನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಾರೆ. ವೇತನ ತಾರತಮ್ಯವನ್ನ ಪ್ರಧಾನ ಮಂತ್ರಿ ಬಗೆಹರಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಹಾಗೇ ಸಾರಿಗೆ ನೌಕರನ ಮಗನಾಗಿರುವ ರಾಕಿಂಗ್ ಸ್ಟಾರ್ ಯಶ್ ಗೂ ಪತ್ರ ಬರೆದು, ನಿಮ್ಮ ತಂದೆ ಕೂಡ ಸಾರಿಗೆ ನೌಕರರಾಗಿದ್ದರು. ಈ ಕುರಿತು ನಿಮ್ಮ ಜೊತೆ ಅನುಭವ, ನೋವು ಹಂಚಿಕೊಂಡಿರಬಹುದು. ನೀವು ಸಮಾಜಸೇವೆಯಲ್ಲಿ ಗುರುತಿಸಿ ಕೊಂಡಿದ್ದೀರಿ. ನಮಗೆ‌ ನೀವು ಬೆಂಬಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇತ್ತ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರು ಮಾತನಾಡಿ ನೀವೇನೆ ಬಲ ಪ್ರಯೋಗ ಮಾಡಿದರೂ ನಾವು ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಅತ್ತ ಸರ್ಕಾರ ಕೊಡ್ತಿಲ್ಲ. ಇತ್ತ ಬಿಗಿಪಟ್ಟು ಹಿಡಿದು ಕುಳಿತಿರುವ ಸಾರಿಗೆ ನೌಕರರು ಮುಷ್ಕರ ಕೈ ಬಿಡ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಬಸ್ ಇಲ್ಲದೇ ಪರದಾಡುವಂತಾಗಿದೆ.

ಮುಷ್ಕರನಿರತ ನೌಕರರ ಮೇಲೆ ಬಿಎಂಟಿಸಿಯಿಂದ ಶಿಸ್ತು ಕ್ರಮ ಇನ್ನು ರಾಜ್ಯದಲ್ಲಿ ಮುಷ್ಕರನಿರತ ನೌಕರರ ಮೇಲೆ ಬಿಎಂಟಿಸಿಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ತವ್ಯಕ್ಕೆ ಗೈರಾದ ನೌಕರರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಈಗಾಗಲೇ ಅನೇಕ ನೌಕರರು ಅಮಾನತುಗೊಂಡಿದ್ದು ನಿನ್ನೆ 221 ಚಾಲಕರು, ನಿರ್ವಾಹಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ 8 ದಿನದಲ್ಲಿ ಒಟ್ಟು 495 ನೌಕರರ ಮೇಲೆ ಶಿಸ್ತಿನ ಅಸ್ತ್ರ ಪ್ರಯೋಗಿಸಲಾಗಿದೆ. ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ ಬಿಎಂಟಿಸಿ ಕ್ರಮ ಕೈಗೊಳ್ಳುತ್ತಿದೆ.

ಇದನ್ನೂ ಓದಿ: KSRTC BMTC Strike: ಸಾರಿಗೆ ಸಿಬ್ಬಂದಿಯಿಂದ 60 ಬಸ್​ಗಳ ಮೇಲೆ ದಾಳಿ; ಪೊಲೀಸ್ ಕ್ರಮ ಗ್ಯಾರೆಂಟಿ ಎಂದ ಸಚಿವ ಲಕ್ಷ್ಮಣ ಸವದಿ

(Bus Strike Transport Employees Protest Reach to 9th Day And They Plans For Candle Protest)

Published On - 7:47 am, Thu, 15 April 21

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್