ಬ್ಲ್ಯಾಕ್​​ ಫಂಗಸ್ ಕಾಟದಿಂದ ರಾಜ್ಯಕ್ಕೆ ಎದುರಾಯ್ತು ಮತ್ತೊಂದು ಕಂಟಕ, ಲಕ್ಷಾಂತರ ರೂ ಬೆಲೆಯ ದುಬಾರಿ ಇಂಜೆಕ್ಷನ್ ಸಿಗ್ತಿಲ್ಲ

Black Fungus Infection: ಬ್ಯ್ಲಾಕ್ ಫಂಗಸ್​ ಬರೋದು ಗೊತ್ತಿದ್ರೂ ಇದ್ರ ಚಿಕಿತ್ಸೆಗೆ ಸರ್ಕಾರ ಒತ್ತು ಕೊಟ್ಟಿಲ್ಲ. ಇದೀಗ ದಿಢೀರ್​ ರಾಜ್ಯಕ್ಕೆ ಕಾಲಿಟ್ಟಿರೋ ಬ್ಲ್ಯಾಕ್​​ ಫಂಗಸ್​​ನಿಂದ ಲಿಪೊಸೋಮಲ್​​ ಆ್ಯಂಪೊಟೆರಿಸಿನ್​ ಬಿ ಇಂಜೆಕ್ಷನ್ ಸಿಗದೆ ಆತಂಕ ಎದುರಾಗಿದೆ ಎಂಬ ಮಾಹಿತಿ ಕರ್ನಾಟಕ ಡ್ರಗ್​ ಕಂಟ್ರೋಲ್​​ ರೂಮ್​ ನಿಂದ ಹೊರಬಿದ್ದಿದೆ.

ಬ್ಲ್ಯಾಕ್​​ ಫಂಗಸ್ ಕಾಟದಿಂದ ರಾಜ್ಯಕ್ಕೆ ಎದುರಾಯ್ತು ಮತ್ತೊಂದು ಕಂಟಕ, ಲಕ್ಷಾಂತರ ರೂ ಬೆಲೆಯ ದುಬಾರಿ ಇಂಜೆಕ್ಷನ್ ಸಿಗ್ತಿಲ್ಲ
ಬ್ಲ್ಯಾಕ್​​ ಫಂಗಸ್ ಕಾಟದಿಂದ ರಾಜ್ಯಕ್ಕೆ ಎದುರಾಯ್ತು ಮತ್ತೊಂದು ಕಂಟಕ, ಲಕ್ಷಾಂತರ ರೂ ಬೆಲೆಯ ದುಬಾರಿ ಇಂಜೆಕ್ಷನ್ ಸಿಗ್ತಿಲ್ಲ
sadhu srinath

|

May 17, 2021 | 9:58 AM

ಬೆಂಗಳೂರು: ಶತಮಾನದ ಮಹಾಮಾರಿ ಕೊರೊನಾ ಕಾಟದ ಮಧ್ಯೆ ಧುತ್ತನೆ ಎದುರಾಗಿರುವ ಬ್ಲ್ಯಾಕ್​​ ಫಂಗಸ್ ಸಮಸ್ಯೆಯಿಂದ ರಾಜ್ಯಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಬ್ಲ್ಯಾಕ್​​ ಫಂಗಸ್ ಆರೋಗ್ಯ ಸಮಸ್ಯೆ ನೀಗಲು ಅಗತ್ಯವಿರುವ ಇಂಜೆಕ್ಷನ್ ತುಂಬಾ ದುಬಾರಿಯಾಗಿದ್ದು, ಬೇಡಿಕೆ ಹೆಚ್ಚಿದ್ದರಿಂದ ಈಗ ಅದೂ ಸಿಗ್ತಿಲ್ಲ ಎಂಬಂತಾಗಿದೆ. ಕೋವಿಡ್ ಕಾಟದ ಮಧ್ಯೆ ಈಗಾಗೇ ರಾಜ್ಯ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿದೆ. ಹೀಗಿರುವಾಗ ವ್ಯಾಕ್ಸಿನ್​ ಕೊರತೆ, ​ರೆಮ್​​ಡಿಸಿವಿರ್​, ಟೊಸಿಲಿಜುಮಾಬ್, ಆಕ್ಸಿಜನ್ ಕೊರತೆ ಬೆನ್ನಲ್ಲೆ ರಾಜ್ಯಕ್ಕೆ ಈ ದೊಡ್ಡ ಸಮಸ್ಯೆ ಎದುರಾಗಿದೆ.

ಲಿಪೊಸೋಮಲ್​​ ಆ್ಯಂಪೊಟೆರಿಸಿನ್​ ಬಿ ಇಂಜೆಕ್ಷನ್​​​ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. Liposomal Amphotericin b injection ಬ್ಲ್ಯಾಕ್​​ ಫಂಗಸ್​​ಗೆ ನೀಡುವ ಔಷಧವಾಗಿದೆ. ರಾಜ್ಯದಲ್ಲಿ ಈಗಾಗಲೇ ಅಧಿಕೃತವಾಗಿ 50ಕ್ಕೂ ಹೆಚ್ಚಿನ ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ಕಾಣಿಸಿಕೊಂಡಿವೆ. ವೈದ್ಯರು ಬ್ಲ್ಯಾಕ್​​ ಫಂಗಸ್ ಚಿಕಿತ್ಸೆಗೆ ಲಿಪೊಸೋಮಲ್​​ ಆ್ಯಂಪೊಟೆರಿಸಿನ್​ ಬಿ ಇಂಜೆಕ್ಷನ್​​ ಸೂಚಿಸ್ತಿದ್ದಾರೆ.

ಒಬ್ಬ ರೋಗಿಗೆ ಕನಿಷ್ಠ 50 ಡೋಸ್ ಇಂಜೆಕ್ಷನ್ ಕೊಡಬೇಕಾಗತ್ತೆ. ಒಂದು ಡೋಸ್ ನ ಬೆಲೆ 6,500 ರೂಪಾಯಿ. ಅಂದ್ರೆ 6500 X 50 = 3,25,000. ಅಲ್ಲಿಗೆ ಒಬ್ಬ ಬ್ಲಾಕ್ ಫಂಗಸ್ ಸೋಂಕಿತನಿಗೆ 3 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಸದ್ಯ ಈ ಇಂಜೆಕ್ಷನ್​ ರಾಜ್ಯದಲ್ಲಿ ಎಲ್ಲೂ ಸ್ಟಾಕ್​​ ಇಲ್ಲ! ಮುಂಜಾಗ್ರತಾ ಕ್ರಮವಾಗಿ ಸಿದ್ಥಮಾಡಿಕೊಳ್ಳಬೇಕಿದ್ದ ಸರ್ಕಾರದಿಂದ ನಿರ್ಲಕ್ಷ್ಯವಾಗಿದೆ ಅನ್ನುತ್ತಿದೆ ವೈದ್ಯಲೋಕ.

ಬ್ಯ್ಲಾಕ್ ಫಂಗಸ್​ ಬರೋದು ಗೊತ್ತಿದ್ರೂ ಇದ್ರ ಚಿಕಿತ್ಸೆಗೆ ಸರ್ಕಾರ ಒತ್ತು ಕೊಟ್ಟಿಲ್ಲ. ಇದೀಗ ದಿಢೀರ್​ ರಾಜ್ಯಕ್ಕೆ ಕಾಲಿಟ್ಟಿರೋ ಬ್ಲ್ಯಾಕ್​​ ಫಂಗಸ್​​ನಿಂದ ಲಿಪೊಸೋಮಲ್​​ ಆ್ಯಂಪೊಟೆರಿಸಿನ್​ ಬಿ ಇಂಜೆಕ್ಷನ್ ಸಿಗದೆ ಆತಂಕ ಎದುರಾಗಿದೆ ಎಂಬ ಮಾಹಿತಿ ಕರ್ನಾಟಕ ಡ್ರಗ್​ ಕಂಟ್ರೋಲ್​​ ರೂಮ್​ ನಿಂದ ಹೊರಬಿದ್ದಿದೆ.

ಕೆಲವು ಖಾಸಗೀ ಮೆಡಿಸಿನ್​​ ಕಂಪನಿಗಳಲ್ಲಿ ಲಭ್ಯವಿರೊ ಬಗ್ಗೆ ಪರಿಶೀಲಿಸ್ತಿದ್ದೇವೆ. ಇಂದು ರಾಜ್ಯಕ್ಕೆ ಈ ಇಂಜೆಕ್ಷನ್ ಸಿಗುವ ಸಾಧ್ಯತೆ ಇದೆ. ಖಾಸಗೀ ಕಂಪನಿಗಳಿಂದ ತರಿಸಿ ರಾಜ್ಕಕ್ಕೆ ಸಪ್ಲೈ ಮಾಡಲಾಗುತ್ತೆ ಎಂದು ಮಾಹಿತಿಯೂ ಕೇಳಿಬಂದಿದೆ.

(shortage of Liposomal Amphotericin b injection a remedy for Black Fungus Infection due to oxygen intake during coronavirus infection) ಬ್ಲ್ಯಾಕ್ ಫಂಗಸ್​ಗೆ ಬೆಂಗಳೂರಿನಲ್ಲಿ ಇಬ್ಬರು ಬಲಿ.. ಒಬ್ಬ ವ್ಯಕ್ತಿಗೆ 2-4 ಲಕ್ಷ ವೆಚ್ಚವಾಗಲಿದೆ ಎಂದ ಸುಧಾಕರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada