Talguppa Railway Station: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋದ ಯುವಕನ ಕಾಲು ತುಂಡು

ಗಂಭೀರವಾಗಿ ಗಾಯಗೊಂಡಿರುವ ನವೀನ್ನನ್ನು ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ್ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟ್ಟಿದ್ದ. ನಿನ್ನೆ ರಾತ್ರಿ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ನವೀನ್ ಕಾಲು ಕಳೆದುಕೊಂಡಿದ್ದಾನೆ.

Talguppa Railway Station: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋದ ಯುವಕನ ಕಾಲು ತುಂಡು
ಗಂಭೀರಗೊಂಡ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ
Edited By:

Updated on: Jun 29, 2021 | 12:00 PM

ಶಿವಮೊಗ್ಗ: ಚಲಿಸುತ್ತಿದ್ದ ರೈಲಿಗೆ ಕಾಲು ಸಿಕ್ಕಿ ಯುವಕನೊಬ್ಬನ ಕಾಲು ತುಂಡಾಗಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಕಾರವಾರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕವಚೂರು ಗ್ರಾಮದ ನವೀನ್ ಎಂಬ ಸುಮಾರು 18 ವರ್ಷದ ಯುವಕನ ಕಾಲು ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ತುಂಡಾಗಿದೆ. ತಾಳಗುಪ್ಪ ರೈಲ್ವೆ ನಿಲ್ದಾಣದಿಂದ ಬೆಂಗಳೂರು ರೈಲು ಹತ್ತುವಾಗ ಪ್ಲಾಟ್ ಫಾರ್ಮ್ ಜಾರುತ್ತಿರುವ ಹಿನ್ನೆಲೆ ಕಾಲು ಜಾರಿ ರೈಲಿಗೆ ಯುವಕನ ಕಾಲು ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಗಂಭೀರವಾಗಿ ಗಾಯಗೊಂಡಿರುವ ನವೀನ್ನನ್ನು ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ್ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟ್ಟಿದ್ದ. ನಿನ್ನೆ ರಾತ್ರಿ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ನವೀನ್ ಕಾಲು ಕಳೆದುಕೊಂಡಿದ್ದಾನೆ. ಮಳೆ ನೀರಿನಿಂದ ಪ್ಲಾರ್ಟ್ ಫಾರ್ಮ್ ಜಾರಿದ ಕಾರಣ ಯುವಕನ ಕಾಲು ರೈಲಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ರೈಲಿಗೆ ಸಿಕ್ಕ ಪರಿಣಾಮ ಯುವಕನ ಕಾಲು ತುಂಡಾಗಿ ಬೇರೆ ಕಡೆ ಬಿದ್ದಿತ್ತು. ಆತನ ಕೈಗೆ ಕೂಡಾ ಗಂಭೀರ ಗಾಯವಾಗಿದೆ. ನವೀನ್ ಜೊತೆಗೆ ಇನ್ನೊಬ್ಬ ಯುವಕನಿದ್ದನಂತೆ. ನವೀನ್ ಕಾಲು ರೈಲಿಗೆ ಸಿಕ್ಕುತ್ತಿದ್ದಂತೆ ಆತ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.

ಬಾರದ ಕುಟುಂಬಸ್ಥರು
ಘಟನೆ ವೇಳೆ ಸ್ಥಳೀಯ ಓಕಾಂರಪ್ಪ ಎಂಬುವವರು ಯುವಕನ್ನು ಸಾಗರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಕೈ ಮತ್ತು ಕಾಲು ಕಟ್ ಆಗಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ಸಾಗರ ಆಸ್ಪತ್ರೆಯಲ್ಲಿ ತುಂಡಾಗಿರುವ ಕಾಲು ಮತ್ತು ಕೈ ಜೋಡಿಸುವುದಕ್ಕೆ ವ್ಯವಸ್ಥೆ ಮತ್ತು ಚಿಕಿತ್ಸೆ ಸಮಸ್ಯೆ ಎದುರಾಗಿತ್ತು. ಕೊನೆಗೆ ಸಾಗರ ತಾಲೂಕಿನ ಜನರ ಸಹಾಯಕ್ಕೆ ವಾಟ್ಸ್ಆ್ಯಪ್ ಮೂಲಕ ಮನವಿ ಮಾಡಿದ್ದರು. ಈ ಘಟನೆ ನಡೆದ ಸುಮಾರು ಹೊತ್ತು ಕುಟುಂಬಸ್ಥರು ಯಾರು ಬರಲೇ ಇಲ್ಲ. ಕನಿಷ್ಠ ಮೊಬೈಲ್ ಕಾಲ್ ಮಾಡಿ ವಿಚಾರಸಲಿಲ್ಲ.

ಈ ನಡುವೆ ಸಾಗರ ನಗರ ಸಭೆ ಸದಸ್ಯ ಸಂತೋಷ ಆರ್ ಶೇಟ್ ಮತ್ತು ಮಾಜಿ ತಾ.ಪಂ ಉಪಾದ್ಯಕ್ಷ ಅಶೋಕ ಮರಗಿ ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಖಾಸಗಿ ಅಂಬುಲೇನ್ಸ್ ಚಾಲಕರಾದ ಸಂದೀಪ್, ಸುಹೈಲ್ ಯುವಕನ್ನು ಮಂಗಳೂರು ವೆನ್​ಲಾಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಇಂದು ಬೆಳಗ್ಗೆ ದಾಖಲು ಮಾಡಿದ್ದಾರೆ. ಮಂಗಳೂರಿಗೆ ದಾಖಲು ಆಗಿ ವೈದ್ಯರು ಯುವಕನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಘಟನೆ ನಡೆದು ಅನೇಕ ಘಂಟೆಗಳು ಉರುಳಿದ ಹಿನ್ನೆಲೆಯಲ್ಲಿ ತುಂಡಾಗಿರುವ ಬಲಗೈ ಮತ್ತು ಬಲಗಾಲು ಜೋಡಣೆ ಮಾಡಲು ವೈದ್ಯರಿಗೆ ಸಾಧ್ಯವಾಗಿಲ್ಲ.

ಸದ್ಯ ಮಂಗಳೂರು ಆಸ್ಪತ್ರೆಗೂ ಯುವಕನ ಕುಟುಂಬಸ್ಥರು ಯಾರು ಇಲ್ಲಿಯವರೆಗೆ ಬಂದಿಲ್ಲ. ಯುವಕನಿಗೆ ತಂದೆ ತಾಯಿ ಇಬ್ಬರು ಇಲ್ಲವಂತೆ. ಈ ಹಿನ್ನೆಲೆಯಲ್ಲಿ ರಾತ್ರಿಯಿಂದ ಇಲ್ಲಿಯವರೆಗೆ ತಾಳಗುಪ್ಪದ ಓಂಕಾರಪ್ಪ ಅವರು ಜೊತೆಗಿದ್ದು, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಮೂಲಕ ಓಂಕಾರಪ್ಪ ಆ್ಯಂಬುಲೆನ್ಸ್ ಚಾಲಕ ಸಂದೀಪ್, ಸುಹೈಲ್  ಇವರೆಲ್ಲರು ಮಾನವೀಯತೆ ಮೆರೆಯುವ ಮೂಲಕ ಅನಾಥ ಯುವಕನ ಜೀವ ಉಳಿಸಲು ಯಶಸ್ವಿಯಾಗಿದ್ದಾರೆ

ಇದನ್ನೂ ಓದಿ

ಜಮ್ಮುವಿನಲ್ಲಿ ಹೆಚ್ಚಿದ ಉಗ್ರ ಚಟುವಟಿಕೆ; ನಿನ್ನೆ ಎರಡು ಡ್ರೋನ್​ ಪತ್ತೆಯಾದ ಬೆನ್ನಲ್ಲೇ ಇಂದು ಸುಂಜ್ವಾನಾದಲ್ಲಿ ಇನ್ನೊಂದು ಡ್ರೋನ್​ ಹಾರಾಟ

BS Yediyurappa: ಯಾವುದೇ ಗೊಂದಲ ಬೇಡ, ಶಿಕ್ಷಣ ಸಚಿವರು ಘೋಷಿಸಿದಂತೆ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಯುತ್ತದೆ: ಸಿಎಂ ಟ್ವೀಟ್

(siddapura young man leg was injured when a moving train boarded at Talguppa Railway Station)

Published On - 10:35 am, Tue, 29 June 21