ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ನಡೆಸಿ -ಸಿದ್ದರಾಮಯ್ಯ ಆಗ್ರಹ

| Updated By: ಆಯೇಷಾ ಬಾನು

Updated on: Nov 18, 2021 | 5:22 PM

ನಮ್ಮ ಅವಧಿಯನ್ನೂ ಸೇರಿಸಿ ನ್ಯಾಯಾಂಗ ತನಿಖೆಗೆ ಕೊಡಿ. ಯಾರು ತಪ್ಪು ಮಾಡಿದ್ದಾರೆ ಗೊತ್ತಾಗುತ್ತದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿ ಹಗರಣದ ಬಗ್ಗೆ ತನಿಖೆಗೆ ಕೊಡಿ ಎಂದು ಸಿದ್ದರಾಮಯ್ಯ ಆಗ್ರ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ನಡೆಸಿ -ಸಿದ್ದರಾಮಯ್ಯ ಆಗ್ರಹ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿ ಬಿಜೆಪಿ-ಕಾಂಗ್ರೆಸ್ ನಡುವೆ ಗದ್ದಾಟ ನಡೆಯುತ್ತಿದೆ. ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ಪ್ರಯತ್ನಗಳು ಮುಂದುವರೆದಿದೆ. ಬಿಟ್ ಕಾಯಿನ್ ಹಗರಣ ಯಾರ ಕಾಲದಲ್ಲಾದ್ರೂ ಆಗಿರಲಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಮ್ಮ ಅವಧಿಯನ್ನೂ ಸೇರಿಸಿ ನ್ಯಾಯಾಂಗ ತನಿಖೆಗೆ ಕೊಡಿ. ಯಾರು ತಪ್ಪು ಮಾಡಿದ್ದಾರೆ ಗೊತ್ತಾಗುತ್ತದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿ ಹಗರಣದ ಬಗ್ಗೆ ತನಿಖೆಗೆ ಕೊಡಿ. ರಾಕೇಶ್ ಈಗ ಬದುಕಿಲ್ಲ. ಅದರ ಬಗ್ಗೆ ಮಾತನಾಡಲ್ಲ. ಸತ್ತವರ ಬಗ್ಗೆ ಮಾತನಾಡುವವರಿಗೆ ಮಾನ ಮರ್ಯಾದೆ ಇಲ್ಲಾ. ಬಿಜೆಪಿಯವರು ಸುಮ್ಮನೆ ಹಗರಣದ ಬಗ್ಗೆ ಮಾತಾಡ್ತಿದ್ದಾರಾ? ಯಾಕೆ ಎಲ್ಲರೂ ಇದರ ಬಗ್ಗೆ ರಿಯಾಕ್ಟ್ ಮಾಡುತ್ತಿದ್ದಾರೆ? ಹಾಗಾದ್ರೆ ಏನೋ ಇದೆ ಅಂತಾಯ್ತಲ್ಲ, ಬೆಂಕಿ ಇಲ್ಲದೆ ಹೊಗೆಯಾಡುತ್ತಾ? ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುತ್ತಿರುವುದು ಯಾಕೆ? ಸುಪ್ರಿಂಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಆಗಲಿ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಎಲ್ಲವೂ ತನಿಖೆ ಆಗಲಿ 2013ರಿಂದಲೂ ತನಿಖೆ ನಡೆಸಲಿ ಆದರೆ ನ್ಯಾಯಾಂಗ ತನಿಖೆ ಆಗಲೇಬೇಕು ಎಂದರು. ಇನ್ನು ಶ್ರೀಕಿ ಬಳಸಿಕೊಂಡು ನಲಪಾಡ್ ಯುವ ಕಾಂಗ್ರೆಸ್ ಚುನಾವಣಾ ವೆಬ್ ಸೈಟ್ ಹ್ಯಾಕ್ ಮಾಡಿಸಿದ್ದರು ಎಂಬ ಗೃಹ ಸಚಿವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಹ್ಯಾಕಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ತನಿಖೆ ನಡೆಸಲಿ ಎಲ್ಲ ಸತ್ಯವು ಬರಲಿದೆ ಎಂದರು.

ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಯಾರು ತಪ್ಪಿತಸ್ಥರು ಎಂದು ತನಿಖೆ ಮಾಡಿ. ತಪ್ಪಿತಸ್ಥರು ನಾವೋ, ನೀವೋ ಗೊತ್ತಾಗುತ್ತೆ. ಟ್ವೀಟ್ ಮಾಡುವುದರಿಂದ ಸತ್ಯ ಗೊತ್ತಾಗುತ್ತೆ? ಸಿಎಂನ ಎಲ್ಲಾ ಸಚಿವರು ಡಿಫೈನ್ ಮಾಡಿಕೊಳ್ತಿದ್ದಾರೆ. ಈಗಿನ ಸಿಎಂ ಗೃಹ ಸಚಿವರಾಗಿದ್ರು. ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಅಂತ ಹೇಳಲ್ಲ. ಸಾಕ್ಷಿ ಇಲ್ಲದೆ ಏನನ್ನೂ ಹೇಳಬಾರದು. ಸುಳ್ಳು ಆರೋಪಗಳನ್ನ ಮಾಡಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಟ್​ಕಾಯಿನ್ ಬಗ್ಗೆ ಕಾಂಗ್ರೆಸ್ ನಾಯಕರು ಮಾಹಿತಿ ಕೊಟ್ಟರೆ ಅದನ್ನೇ ಆಧರಿಸಿ ತನಿಖೆ: ಯಡಿಯೂರಪ್ಪ ಭರವಸೆ
ಇದನ್ನೂ ಓದಿ: ಬಿಟ್​ಕಾಯಿನ್ ತನಿಖೆ ಸರಿಯಾಗಿ ನಡೆದರೆ ರಾಜ್ಯಕ್ಕೆ 3ನೇ ಸಿಎಂ ಹೇಳಿಕೆಗೆ ಬದ್ಧ: ಪ್ರಿಯಾಂಕ್ ಖರ್ಗೆ ಸವಾಲು

Published On - 4:02 pm, Thu, 18 November 21