ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ಶಿವಕುಮಾರ್ ಜೊತೆಯಾಗಿ ಕೂತು ಹರಟಿದರು!
ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಿದ್ದರಾಮಯ್ಯ ಬಲಪಕ್ಕ ಪರಮೇಶ್ವರ್, ಎಡಭಾಗದಲ್ಲಿ ಶಿವಕುಮಾರ್ ಮತ್ತು ಸಚಿವ ಶಿವರಾಜ್ ತಂಗಡಗಿ ಕೂತು ಹರಟುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಜತೆ ಲಘು ಉಪಹಾರ ಸೇವಿಸುವಾಗ ಇವರೆಲ್ಲ ಜೊತೆಯಾಗಿ ಕುಳಿತಿದ್ದರು. ಈಗ ಸಿನಿಕರು ಇವರೊಂದಿಗೆ ಸತೀಶ್ ಜಾರಕಿಹೊಳಿ ಯಾಕೆ ಕೂತಿಲ್ಲ ಅಂತ ವರಾತ ತೆಗೆಯಬಹುದು!
ಬೆಂಗಳೂರು: ಎರಡು ದಿನಗಳ ಹಿಂದೆ ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಹೆಚ್ ಸಿ ಮಹಾದೇವಪ್ಪ ಅವರನ್ನು ತಮ್ಮ ಮನೆಗೆ ಡಿನ್ನರ್ ಗಾಗಿ ಆಹ್ವಾನಿಸಿದ್ದು ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗಿತ್ತು. ಕಾಂಗ್ರೆಸ್ ನಾಯಕರಿಗಿಂತ ವಿರೋಧ ಪಕ್ಷದ ನಾಯಕರು ವಿಷಯದ ಬಗ್ಗೆ ವಿಪರೀತ ಕುತೂಹಲ ತಳೆದಿದ್ದರು. ಅವರಿಂದ ಹಲವಾರು ಹೇಳಿಕೆಗಳೂ ಬಂದವು. ಡಿಕೆ ಶಿವಕುಮಾರ್ (DK Shivakumar), ಪರಮೇಶ್ವರ್ ಅವರ ನೆರೆಹೊರೆಯಲ್ಲೇ ವಾಸವಾಗಿದ್ದರೂ ಅವರನ್ನು ಯಾಕೆ ಊಟಕ್ಕೆ ಕರೆಯಲಿಲ್ಲ ಅಂತ ಕೇಳಿದರು. ಅದು ಪರಮೇಶ್ವರ್ ಖಾಸಗಿ ವಿಷಯ, ಯಾರನ್ನು ಬೇಕಾದರೂ ಊಟಕ್ಕೆ ಕರೆಯುತ್ತಾರೆ ಅಂತ ಬಹಳಷ್ಟು ನಾಯಕರ ತಲೆಗೆ ಹೊಳೆಯಲೇ ಇಲ್ಲ. ಬಿಡಿ ಅದರ ಬಗ್ಗೆ ನಾವು ವೃಥಾ ಚರ್ಚಿಸುವುದು ಬೇಡ. ಇಲ್ಲಿ ನೋಡಿ, ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಿದ್ದರಾಮಯ್ಯ ಬಲಪಕ್ಕ ಪರಮೇಶ್ವರ್, ಎಡಭಾಗದಲ್ಲಿ ಶಿವಕುಮಾರ್ ಮತ್ತು ಸಚಿವ ಶಿವರಾಜ್ ತಂಗಡಗಿ ಕೂತು ಹರಟುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಜತೆ ಲಘು ಉಪಹಾರ ಸೇವಿಸುವಾಗ ಇವರೆಲ್ಲ ಜೊತೆಯಾಗಿ ಕುಳಿತಿದ್ದರು. ಈಗ ಸಿನಿಕರು ಇವರೊಂದಿಗೆ ಸತೀಶ್ ಜಾರಕಿಹೊಳಿ ಯಾಕೆ ಕೂತಿಲ್ಲ ಅಂತ ವರಾತ ತೆಗೆಯಬಹುದು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ