ಐ ಆ್ಯಮ್ ಟೋಟಲಿ ಫಿಟ್ -ಸಿದ್ದರಾಮಯ್ಯ
ಬೆಂಗಳೂರು: ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯಗೆ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಆರೋಗ್ಯವಾಗಿದ್ದೇನೆ, ನನಗೆ ಯಾವುದೇ ತೊಂದರೆ ಇಲ್ಲ. ನಾನು ಇವತ್ತೇ ದಿಸ್ಚಾರ್ಜ್ ಆಗಬೇಕು ಅಂದುಕೊಂಡಿದ್ದೆ. ಮನೆಗೆ ಹೋದ್ರೆ ಜನ ಜಾಸ್ತಿ ಬರಲು ಶುರು ಮಾಡುತ್ತಾರೆ, ಆದ್ದರಿಂದ ಇನ್ನೂ 2-3 ದಿನ ಆಸ್ಪತ್ರೆಯಲ್ಲಿ ಇರಬೇಕು ಎಂದರು. 19 ವರ್ಷಗಳ ಹಿಂದೆ 2 ರಕ್ತನಾಳಗಳು ಬ್ಲಾಕ್ ಆಗಿದ್ದವು. ಹೀಗಾಗಿ ಆಗ ಸ್ಟೆಂಟ್ ಹಾಕಿಸಿದ್ದೆ. ಬೇರೆಯವರಿಗೆಲ್ಲ ಐದಾರು ವರ್ಷಕ್ಕೆ ಮತ್ತೆ ಸಮಸ್ಯೆ […]
ಬೆಂಗಳೂರು: ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯಗೆ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಆರೋಗ್ಯವಾಗಿದ್ದೇನೆ, ನನಗೆ ಯಾವುದೇ ತೊಂದರೆ ಇಲ್ಲ. ನಾನು ಇವತ್ತೇ ದಿಸ್ಚಾರ್ಜ್ ಆಗಬೇಕು ಅಂದುಕೊಂಡಿದ್ದೆ. ಮನೆಗೆ ಹೋದ್ರೆ ಜನ ಜಾಸ್ತಿ ಬರಲು ಶುರು ಮಾಡುತ್ತಾರೆ, ಆದ್ದರಿಂದ ಇನ್ನೂ 2-3 ದಿನ ಆಸ್ಪತ್ರೆಯಲ್ಲಿ ಇರಬೇಕು ಎಂದರು.
19 ವರ್ಷಗಳ ಹಿಂದೆ 2 ರಕ್ತನಾಳಗಳು ಬ್ಲಾಕ್ ಆಗಿದ್ದವು. ಹೀಗಾಗಿ ಆಗ ಸ್ಟೆಂಟ್ ಹಾಕಿಸಿದ್ದೆ. ಬೇರೆಯವರಿಗೆಲ್ಲ ಐದಾರು ವರ್ಷಕ್ಕೆ ಮತ್ತೆ ಸಮಸ್ಯೆ ಕಾಣಿಸಿಕೊಳ್ಳತ್ತೆ. ಆದ್ರೆ ನನಗೆ 19 ವರ್ಷ ಆದ್ರೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಈಗ ನನಗೆ ಯಾವುದೇ ತೊಂದರೆ ಅಗಿಲ್ಲ. ನಾನು ಆರೋಗ್ಯವಾಗಿದ್ದೇನೆ, ಐ ಆ್ಯಮ್ ಟೋಟಲಿ ಫಿಟ್. ಯಾರೂ ಈಗ ಆಸ್ಪತ್ರೆಗೆ ಬರಬೇಡಿ. ಮನೆಗೆ ಬಂದ ನಂತರ ಆರೋಗ್ಯ ವಿಚಾರಿಸುವುದಕ್ಕೆ ಬನ್ನಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಬಿಎಸ್ವೈ: ಸಿದ್ದರಾಮಯ್ಯಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ ಬಿಎಸ್ವೈ, 2-3 ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುವಂತೆ ವೈದ್ಯರ ಸೂಚಿಸಿದ್ದಾರೆ. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂದರು. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಉಪಸ್ಥಿತರಿದ್ದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ @siddaramaiah ಅವರನ್ನು ಮುಖ್ಯಮಂತ್ರಿ @BSYBJP ಅವರು ಇಂದು ಭೇಟಿ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ಗೃಹ ಸಚಿವ @BSBommai, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ @ikseshwarappa ಉಪಸ್ಥಿತರಿದ್ದರು. pic.twitter.com/zyqVEARPaw
— CM of Karnataka (@CMofKarnataka) December 12, 2019
Published On - 8:21 pm, Thu, 12 December 19