ಮೋದಿ ಸರ್ಕಾರ ಕಿತ್ತೊಗೆಯದಿದ್ದರೆ ದೇಶ ಉಳಿಯಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ
ಸುರೇಶ್ ಈ ಕ್ಷೇತ್ರಕ್ಕೆ ನೆನಪಿಟ್ಟುಕೊಳ್ಳುವ ಕೆಲಸ ಮಾಡಿಲ್ಲ. ಬೆಳಗಾವಿಯಲ್ಲಿ ಪ್ರವಾಹ ಬಂದಾಗ ಪರಿಹಾರ ಕೊಡಲಿಲ್ಲ. ನರೇಂದ್ರ ಮೋದಿ ಒಂದು ರೂಪಾಯಿ ಪರಿಹಾರ ಕೊಡಲಿಲ್ಲ. ಸಂಸದರಾಗಿದ್ದ ಸುರೇಶ್ ಅಂಗಡಿ ಕೂಡಾ ಪರಿಹಾರ ಕೇಳಲಿಲ್ಲ. ಯಾವ ಸಂಸದರೂ ಕೂಡಾ ಕೇಂದ್ರದಿಂದ ಹಣ ಕೇಳಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ: ಮೋದಿ ಸರ್ಕಾರ ಕಿತ್ತೊಗೆಯದಿದ್ದರೆ ದೇಶ ಉಳಿಯಲ್ಲ ಎಂದು ಬೈಲಹೊಂಗಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಪ್ರಚಾರ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹಿಟ್ಲರ್ ಮಾಡುತ್ತಿದ್ದ ಕೆಲಸವನ್ನು ಈಗ ಮೋದಿ ಮಾಡುತ್ತಿದ್ದಾರೆ. 56 ಇಂಚಿನ ಎದೆ ಮುಖ್ಯವಲ್ಲ, ಅದರಲ್ಲಿ ಹೃದಯವಿರಬೇಕು ಎಂದು ಹೇಳಿದ್ದಾರೆ. ಬೆಲೆ ಏರಿಕೆ ಬಗ್ಗೆ ಮೋದಿ ಮಾತನಾಡುತ್ತಿಲ್ಲ. ಕಾಶ್ಮೀರ, ಪುಲ್ವಾಮಾ ಬಗ್ಗೆಯೇ ಮಾತನಾಡುತ್ತಾರೆ. ಮಾತು ಎತ್ತಿದರೆ ನನಗೆ 56 ಇಂಚಿನ ಎದೆ ಇದೆ ಅಂತಾರೆ ಎಂದು ಹೇಳಿದ್ದಾರೆ.
ಸುರೇಶ್ ಅಂಗಡಿ ಈ ಕ್ಷೇತ್ರಕ್ಕೆ ನೆನಪಿಟ್ಟುಕೊಳ್ಳುವ ಕೆಲಸ ಮಾಡಿಲ್ಲ. ಬೆಳಗಾವಿಯಲ್ಲಿ ಪ್ರವಾಹ ಬಂದಾಗ ಪರಿಹಾರ ಕೊಡಲಿಲ್ಲ. ನರೇಂದ್ರ ಮೋದಿ ಒಂದು ರೂಪಾಯಿ ಪರಿಹಾರವನ್ನೂ ಕೊಡಲಿಲ್ಲ. ಸಂಸದರಾಗಿದ್ದ ಸುರೇಶ್ ಅಂಗಡಿ ಕೂಡಾ ಪರಿಹಾರ ಕೇಳಲಿಲ್ಲ. ಯಾವ ಸಂಸದರೂ ಕೂಡಾ ಕೇಂದ್ರದಿಂದ ಹಣ ಕೇಳಲಿಲ್ಲ. ಇವರು ಹೇಡಿ ಸಂಸದರು, ಬಿಎಸ್ವೈ ಹೇಡಿ ಮುಖ್ಯಮಂತ್ರಿ. ನಾನು ಮುಖ್ಯಮಂತ್ರಿ ಆಗಿದ್ದರೆ ಮೋದಿ ಮನೆ ಮುಂದೆ ಧರಣಿ ಮಾಡಿ ಪರಿಹಾರ ತರುತ್ತಿದ್ದೆ. ಹೇಡಿ ಸರ್ಕಾರ ಧರಣಿ ಹೋಗಲಿ.. ಪರಿಹಾರ ಕೇಳಲೂ ಹೋಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ನಾಲ್ಕು ದಿನದಿಂದ ಸಾರಿಗೆ ಮುಷ್ಕರ ನಡೆಯುತ್ತಿದೆ. ಸವದತ್ತಿಯಲ್ಲಿ ನಿನ್ನೆ ಒಬ್ಬ ನೌಕರ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಕಷ್ಟ ಕೇಳಿ ಪರಿಹಾರ ಕೊಡುವುದು ಬಿಟ್ಟು ಎಸ್ಮಾ ಜಾರಿ ಮಾಡುತ್ತೇವೆ, ಖಾಸಗಿ ಬಸ್ ಓಡಿಸ್ತೀವಿ ಅಂತಾರೆ ಎಂದು ಸಿದ್ದರಾಮಯ್ಯ ಮಾತನಾಡಿದ್ದಾರೆ. ಕಿತ್ತೂರು ಚೆನ್ನಮ್ಮ ಜಯಂತಿ ಆರಂಭಿಸಿದ್ದು ಯಡಿಯೂರಪ್ಪ, ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅಲ್ಲ. ಚೆನ್ನಮ್ಮ ಜಯಂತಿ ಆರಂಭ ಮಾಡಿದ್ದು ಸಿದ್ದರಾಮಯ್ಯ. ಅಕ್ಕಮಹಾದೇವಿ ವಿವಿ ಹೆಸರಿಟ್ಟಿದ್ದು ಸಿದ್ದರಾಮಯ್ಯ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಇರಿಸಿದ್ದು ಸಿದ್ದರಾಮಯ್ಯ. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಮಾಡಿದ್ದು ಸಿದ್ದರಾಮಯ್ಯ ಎಂದು ಹೇಳಿದ್ದಾರೆ.
ನಾನು ಬೈಯ್ಯುತ್ತಿಲ್ಲ ಸತ್ಯ ಹೇಳುತ್ತಿದ್ದೇನೆ: ಸಿದ್ದರಾಮಯ್ಯ ಕೋಟಿ ಕೋಟಿ ಹಣ ಕೊಟ್ಟು ಶಾಸಕರನ್ನು ಖರೀದಿಸಿದ್ದರು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ನಾನು ಏನಾದರು ಹೇಳಿದರೆ ಸಿದ್ದರಾಮಯ್ಯ ಬೈತಾನೆ ಅಂತಾರೆ. ನಾನು ಬೈಯ್ಯುತ್ತಿಲ್ಲ ಸತ್ಯ ಹೇಳುತ್ತಿದ್ದೇನೆ. ನನ್ನ ಅವಧಿಯಲ್ಲಿ ಒಂದು ಲಂಚ ಪ್ರಕರಣವೂ ಇರಲಿಲ್ಲ. ಒಂದೇ ಒಂದು ಭ್ರಷ್ಟಾಚಾರದ ಪ್ರಕರಣ ಇರಲಿಲ್ಲ. ಯಡಿಯೂರಪ್ಪ ಸರ್ಕಾರ ಈಗ ಅಕ್ಕಿ ಐದು ಕೆಜಿಗೆ ಇಳಿಸಿರುವುದನ್ನು ಮೂರು ಕೆಜಿಗೆ ಇಳಿಸುತ್ತಾರೆ. ಇನ್ನು ಎರಡು ವರ್ಷಕ್ಕೆ ನಮ್ಮ ಸರ್ಕಾರ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
ತಿರುಪತಿ ಆಡಳಿತ ಮಂಡಳಿಯಿಂದ ಅಪಚಾರ; ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ ಅಲ್ಲ ತಿರುಪತಿಯಲ್ಲಂತೆ!
ಮದುವೆಯಾದ ಮರುದಿನವೇ ಹೆಂಡತಿಗೆ ಕನ್ಯತ್ವ ಪರೀಕ್ಷೆ; ಫೇಲ್ ಆದವಳಿಗೆ ಗಂಡ ಮಾಡಿದ್ದೇನು?