ಮಹಾತ್ಮ ಗಾಂಧೀಜಿ ಯಾರ ವಿರುದ್ಧ ಹೋರಾಡಿದರೋ ಅವರಿಂದ ಹತ್ಯೆ ಆಗಲಿಲ್ಲ -ಸಿದ್ದರಾಮಯ್ಯ ಮಾರ್ಮಿಕ ನುಡಿ

| Updated By: ಸಾಧು ಶ್ರೀನಾಥ್​

Updated on: Jan 30, 2021 | 2:30 PM

ರೈತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ರೈತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, RSSನ ಒಬ್ಬರಾದ್ರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಮಹಾತ್ಮ ಗಾಂಧೀಜಿ ಯಾರ ವಿರುದ್ಧ ಹೋರಾಡಿದರೋ ಅವರಿಂದ ಹತ್ಯೆ ಆಗಲಿಲ್ಲ -ಸಿದ್ದರಾಮಯ್ಯ ಮಾರ್ಮಿಕ ನುಡಿ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಇಂದು ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಕರಾಳ ದಿನಾಚರಣೆ ಮಾಡಲಾಗುತ್ತಿದೆ. ರೈತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ರೈತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, RSSನ ಒಬ್ಬರಾದ್ರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಮಾತು ಮುಂದುವರೆಸಿದ ಸಿದ್ದರಾಮಯ್ಯ, ಮಹಾತ್ಮ ಗಾಂಧೀಜಿ ಯಾರ ವಿರುದ್ಧ ಹೋರಾಡಿದ್ರೋ ಅವರಿಂದ ಹತ್ಯೆ ಆಗಲಿಲ್ಲ. ಜನರ ಮಧ್ಯೆ ಬಂದು ಗೋಡ್ಸೆ ಗುಂಡು ಹಾರಿಸಿ ಹತ್ಯೆಗೈದ. ಗಾಂಧೀಜಿಯವರು ಬರೀ ಸ್ವಾತಂತ್ರ್ಯ ಚಳವಳಿ ಮಾಡಲಿಲ್ಲ. ರೈತ ಹೋರಾಟ, ಕಾರ್ಮಿಕ ಹೋರಾಟ ಎಲ್ಲ ಮಾಡಿದರು. ಸ್ವಾತಂತ್ರ್ಯ ಹೋರಾಟದಷ್ಟೆ ಬೇರೆ ಬೇರೆ ಹೋರಾಟಗಳಿಗೂ ಪ್ರಾಮುಖ್ಯತೆಯನ್ನು ನೀಡಿದ್ರು. ತಮ್ಮ ಹತ್ಯೆಗೂ ಮುನ್ನವೂ ಉಪವಾಸ ಸತ್ಯಾಗ್ರಹ ಮಾಡಿದ್ರು.

ಜನವರಿ 30, 1948 ರಂದು ದೆಹಲಿಯ ಬಿರ್ಲಾ ಭವನದಲ್ಲಿ ವಲ್ಲಭಭಾಯಿ ಪಟೇಲ್ ಮಾತನಾಡಲು ಬಂದಿದ್ರು. ಈ ವೇಳೆ ಮಾತುಕತೆ ವಿಳಂಬವಾಗಿ5.15 ಕ್ಕೆ ಮುಕ್ತಾಯವಾಯ್ತು. ಗಾಂಧಿ ಮೊಮ್ಮಕ್ಕಳ ಹೆಗಲ ಮೇಲೆ ಕೈಹಾಕೊಂಡು ಹೋಗ್ತಿದ್ರು. ಈ ವೇಳೆ ನಾಥೂರಾಮ್ ಗೋಡ್ಸೆ ನಮಸ್ಕಾರ ಮಾಡುವಂತೆ ಬಂದು ಮೂರು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ. ಗಾಂಧೀ ರಾಂ ರಾಂ ಅಂತ ಪ್ರಾಣ ಬಿಟ್ರು. ಎಲ್ಲಾ ಧರ್ಮದವರು ಒಂದು ತಾಯಿ ಮಕ್ಕಳಂತೆ ಬದುಕಬೇಕೆಂದು ಹೋರಾಡಿದವ್ರು ಗಾಂಧೀ. ಜೀವನದುದ್ದಕ್ಕೂ ಅದನ್ನೇ ಮಾಡಿದ್ರು. ಉಪವಾಸ ಗಾಂಧೀಜಿಯ ಪ್ರಬಲವಾದ ಅಸ್ತ್ರ ಎಂದು ಗಾಂಧೀಜಿಯವರನ್ನು ಸಿದ್ದರಾಮಯ್ಯ ಸ್ಮರಿಸಿಕೊಂಡ್ರು.

RSSನ ಒಬ್ಬರಾದ್ರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ?
ಗಾಂಧೀಜಿ ಹತ್ಯೆ ಮಾಡುವುದಕ್ಕೆ 2 ಸಭೆ ನಡೆದಿರುತ್ತೆ. ಸಾವರ್ಕರ್ ಮನೆಯಲ್ಲಿ ಎರಡು ಬಾರಿ ಸಭೆ ಮಾಡಿದ್ದರು. ದೇಶಭಕ್ತರನ್ನ ಕೊಂದವರೇ ದೇಶಭಕ್ತಿಯ ಬಗ್ಗೆ ಮಾತಾಡ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. RSSನ ಒಬ್ಬರಾದ್ರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ? ಸಂವಿಧಾನ ರಚನೆಯಾದ ಬಳಿಕ ಜನಸಂಘ ಹುಟ್ಟಿಕೊಂಡಿದ್ದು ಇವರು ಈಗ ದೇಶ ಭಕ್ತಿಯ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.

ಹಿಂದೂ ರಾಷ್ಟ್ರ ಮಾಡ್ತೀವಿ, ಹಿಂದುತ್ವ ಮಾಡ್ತೀವಿ ಅಂತಾರೆ. ಇದನ್ನ ಮಾಡೋಕಾಗಲ್ಲ ಅನ್ನೋದನ್ನೇ ಗಾಂಧೀಜಿ ಹೇಳಿದ್ದು. ಗಾಂಧೀಜಿ ಹಿಂದೂ ಅಂದಿದ್ದರು, ಸನಾತನ ಅಂದಿದ್ದರು. ನಾವು ಫಾಲೋ ಮಾಡೋದು ಗಾಂಧೀಜಿಯ ಹಿಂದುತ್ವ. ಆದರೆ ಇವರದ್ದು ಸಾವರ್ಕರ್ ಹಿಂದುತ್ವ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಹಿಂದೂ ಅಲ್ವಾ? ಕೋಡಿಹಳ್ಳಿ ಹಿಂದೂ ಅಲ್ವಾ? ಪಾಕ್ ವಿಭಜಿಸದಂತೆ ಗಾಂಧೀಜಿ ಹೋರಾಟ ಮಾಡಿದ್ದರು. ಆದರೆ ಮೌಂಟ್ ಬ್ಯಾಟನ್, ಜಿನ್ನಾನನ್ನ ಎತ್ತಿಕಟ್ಟಿ ವಿಭಜನೆ ಮಾಡಿದ್ರು ಎಂದು ಸಿದ್ದರಾಮಯ್ಯ ಭಾಷಣದ ವೇಳೆ ಹೇಳಿದ್ರು.

RSSನವರು ಗೋವುಗಳ ಬಗ್ಗೆ ಮಾತಾಡ್ತಾರಲ್ಲಾ.. ಯಾವತ್ತಾದ್ರೂ ಅವರು ಸಗಣಿ, ಗಂಜಲ ಎತ್ತಿದ್ದಾರಾ? -ಸಿದ್ದರಾಮಯ್ಯ ಪ್ರಶ್ನೆ