ಕೊರೊನಾ ನಂತರದ ಮೊದಲ ಘಟಿಕೋತ್ಸವಕ್ಕೆ ಸಾಕ್ಷಿಯಾಗ್ತಿದೆ ಬೆಂಗಳೂರು ವಿವಿ! ಇಸ್ರೋ ಮುಖ್ಯಸ್ಥ ಶಿವನ್ ಮುಖ್ಯ ಅತಿಥಿ
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಬೆಂಗಳೂರು ವಿವಿಯ 55ನೇ ಘಟಿಕೋತ್ಸವ ನಡೆಸಲಾಗುತ್ತಿದ್ದು, ಇಸ್ರೋ ಮುಖ್ಯಸ್ಥ ಕೆ.ಶಿವನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.
ಬೆಂಗಳೂರು: ಕೊರೊನಾ ಕಾರಣದಿಂದ ಬಹುತೇಕ ವಿಶ್ವವಿದ್ಯಾನಿಲಯಗಳು ಈ ಬಾರಿ ವರ್ಚ್ಯುಯಲ್ ಘಟಿಕೋತ್ಸವ ನಡೆಸಿದ್ದು, ಕೊವಿಡ್ ಬಳಿಕ ಮೊದಲ ಭೌತಿಕ ಘಟಿಕೋತ್ಸವಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯ ಸಾಕ್ಷಿಯಾಗುತ್ತಿದೆ. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಬೆಂಗಳೂರು ವಿವಿಯ 55ನೇ ಘಟಿಕೋತ್ಸವ ನಡೆಸಲಾಗುತ್ತಿದ್ದು, ಇಸ್ರೋ ಮುಖ್ಯಸ್ಥ ಕೆ.ಶಿವನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.
ಈ ವರ್ಷದ ಘಟಿಕೋತ್ಸವವು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ನಡೆಯುತ್ತಿದ್ದು, ಬೆಂಗಳೂರು ವಿವಿ ಉಪಕುಲಪತಿ ವೇಣುಗೋಪಾಲ್, ಕುಲಸಚಿವೆ ಕೆ.ಜ್ಯೋತಿ, ಮೌಲ್ಯಮಾಪನ ಕುಲಸಚಿವ ದೇವರಾಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಒಟ್ಟು 56,172 ಮಂದಿ ಈ ಬಾರಿ ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದು ವಿವಿ ತಿಳಿಸಿದೆ. ಒಟ್ಟು 319 ಚಿನ್ನದ ಪದಕ ಪ್ರದಾನ, 90 ನಗದು ಬಹುಮಾನ ವಿತರಣೆ, 196 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು 184 ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ವಿಶ್ವವಿದ್ಯಾನಿಲಯ ಮಾಹಿತಿ ನೀಡಿದೆ.