ವೈಭವದ ಸಿಡಿಬಂಡಿ ಉತ್ಸವ.. ಇಷ್ಟಾರ್ಥ ಸಿದ್ದಿಗಾಗಿ ಕೋಳಿ ಎಸೆದು ಹರಕೆ ತೀರಿಸಿದ ಬಳ್ಳಾರಿ ಭಕ್ತರು
ಕೆಲವರು ಸಿಡಿಬಂಡಿಗೆ ಕೋಳಿಗಳನ್ನ ಎಸೆದು ತಮ್ಮ ಹರಕೆ ಸಲ್ಲಿಸಿದರೆ ಇನ್ನೂ ಕೆಲವರು ಬಾಳೆ ಹಣ್ಣು ಎಸೆದರು. ಸಿಡಿಬಂಡಿ ರಥೋತ್ಸವಕ್ಕೆ ಜೀವಂತ ಕೋಳಿ ಎಸೆಯುವುದರಿಂದ ಇಷ್ಟಾರ್ಥಗಳು ಈಡೇರಿಕೆಯಾಗುತ್ತವೆ ಎನ್ನುವ ನಂಬಿಕೆ ಭಕ್ತರದ್ದು.
ಬಳ್ಳಾರಿ: ಭಕ್ತಾಧಿಗಳು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ನಾನಾ ಬಗೆಯ ಹರಕೆಗಳನ್ನು ಸಲ್ಲಿಸುತ್ತಾರೆ. ಆದರೆ ಗಣಿನಾಡು ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವದಲ್ಲಿ ಭಕ್ತಾಧಿಗಳು ತಮ್ಮ ಇಷ್ಟಾರ್ಥಗಳ ಸಿದ್ದಿಗಾಗಿ ಜೀವಂತ ಕೋಳಿಗಳನ್ನು ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಪ್ರತಿ ವರ್ಷ ಸಂಜೆ ವೇಳೆ ನಡೆಯುತ್ತಿದ್ದ ಸಿಡಿಬಂಡಿ ರಥೋತ್ಸವ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಬೆಳಗಿನ ಜಾವ ವಿಜೃಂಭಣೆಯಿಂದ ಜರುಗಿತು.
ರಥೋತ್ಸವವನ್ನು ಎಳೆದ ಎತ್ತುಗಳು ಪ್ರತಿವರ್ಷ ಸಿಡಿಬಂಡಿ ರಥೋತ್ಸವ ಸಂಜೆ ವೇಳೆಗೆ ನಡೆಯುತ್ತಿತ್ತು. ಲಕ್ಷಾಂತರ ಭಕ್ತರು ಭಾಗವಹಿಸಿ, ದೇವಿಯ ಕೃಪೆಗೆ ಪಾತ್ತರಾಗುತ್ತಿದ್ದರು. ಕಿಕ್ಕಿರಿದು ಸೇರಿದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಿಡಿಬಂಡಿ ರಥೋತ್ಸವ ನಡೆಯುತ್ತಿತ್ತು. ಆದರೆ ಈ ವರ್ಷ ಕೊರೊನಾ ಎರಡನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಾತ್ರೆ ರಥೋತ್ಸವಗಳಿಗೆ ಭಕ್ತರ ಪ್ರವೇಶ ನಿರ್ಬಂಧ ಹಾಕಲಾಗಿದೆ. ಆದರೆ ಪ್ರತಿ ವರ್ಷದಂತೆ ನಡೆಯುವ ಪೂಜೆ ಕಾರ್ಯಗಳು, ರಥೋತ್ಸವ ನಡೆಯಲಿವೆ. ನಿನ್ನೆ (ಮಾರ್ಚ್ 23) ಬಳ್ಳಾರಿ ನಗರದ ಆದಿಶಕ್ತಿ ದೇವತೆ ಕನಕ ದುರ್ಗಮ್ಮ ಸಿಡಿಬಂಡಿ ರಥೋತ್ಸವ ಈ ವರ್ಷ ಬೆಳಗಿನ ಜಾವ ನಡೆಯಿತು. ನಡೆದ ರಥೋತ್ಸವ ದೇವಸ್ಥಾನದ ಸುತ್ತ ಮೂರು ಸಲ ಪ್ರದಕ್ಷಿಣೆ ಹಾಕಲಾಯಿತು. ಶೃಂಗಾರಗೊಂಡ ಎತ್ತುಗಳು ಸಿಡಿಬಂಡಿ ರಥೋತ್ಸವವನ್ನು ಎಳೆದವು. ಈ ವೇಳೆ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಹರಕೆಗಳನ್ನ ಸಲ್ಲಿಸಿದರು.
ಕೆಲವರು ಸಿಡಿಬಂಡಿಗೆ ಕೋಳಿಗಳನ್ನ ಎಸೆದು ತಮ್ಮ ಹರಕೆ ಸಲ್ಲಿಸಿದರೆ ಇನ್ನೂ ಕೆಲವರು ಬಾಳೆ ಹಣ್ಣು ಎಸೆದರು. ಸಿಡಿಬಂಡಿ ರಥೋತ್ಸವಕ್ಕೆ ಜೀವಂತ ಕೋಳಿ ಎಸೆಯುವುದರಿಂದ ಇಷ್ಟಾರ್ಥಗಳು ಈಡೇರಿಕೆಯಾಗುತ್ತವೆ ಎನ್ನುವ ನಂಬಿಕೆ ಭಕ್ತರದ್ದು. ನಿನ್ನೆ ಸಿಡಿಬಂಡಿ ಉತ್ಸವ ಹಿನ್ನೆಲೆ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು. ಸಚಿವ ಶ್ರೀರಾಮುಲು ಕೂಡ ಸಿಡಿಬಂಡಿ ರಥೋತ್ಸವದಲ್ಲಿ ಭಾಗವಹಿಸಿ ದೇವಿಗೆ ಕೃಪೆಗೆ ಪಾತ್ರರಾದರು.
ದೇವಿಗೆ ಹರಕೆ ಸಲ್ಲಿಸಿದ್ರೆ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಹೀಗಾಗಿ ಮಕ್ಕಳು ಆಗಾದವರಿಗೆ ಮಕ್ಕಳ ಭಾಗ್ಯ ಸಿಗುತ್ತದೆ. ಜೊತೆಗೆ ಬೇಡಿಕೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ನಂಬಿಕೆ ಜನರಲ್ಲಿ ಬಲವಾಗಿದೆ. ಸಿಡಿಬಂಡಿ ರಥೋತ್ಸವ ಹಿನ್ನೆಲೆಯಲ್ಲಿ ಕನಕದುರ್ಗಮ್ಮ ದೇವಿಗೆ ಬಂಗಾರ ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರತಿ ವರ್ಷ ಆಂಧ್ರ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಸಿಡಿಬಂಡಿ ರಥೋತ್ಸವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಈ ವರ್ಷ ಬೆಳಗಿನ ಜಾವ ರಥೋತ್ಸವ ಜರುಗಿದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಾತ್ರ ಭಾಗವಹಿಸಿದರು. ವಿಜೃಂಭಣೆಯಿಂದ ಜರುಗಿದ ರಥೋತ್ಸವದಲ್ಲಿ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಭಕ್ತಾಧಿಗಳ ಹರ್ಷೋದ್ದಾರಗಳು ಮುಗಿಲುಮುಟ್ಟಿದ್ದವು.
ಇದನ್ನೂ ಓದಿ
ಬೆಳಗಾವಿ ಭಂಡಾರ ಜಾತ್ರೆಯಲ್ಲಿ ಕೊರೊನಾ ನಿರ್ಲಕ್ಷ್ಯ
ಪ್ರಚಾರಕ್ಕಾಗಿ ಜನರ ಗುಂಪು ಸೇರಿಸುತ್ತಿರುವ ಸ್ಟಾರ್ಗಳಿಗೆ ಕೋವಿಡ್-19 ನಿಯಮಾವಳಿ ನೆನಪಿಸಿದ ಸುಧಾಕರ್!