ಸರ್ ಪ್ಲೀಸ್ ನಮ್ಮನ್ನ ಬಿಟ್ಟು ಹೋಗ್ಬೇಡಿ ಸರ್… ಎಂದು ಕಾಲಿಗೆ ಬಿದ್ದು ಗೋಳಾಡಿದ ವಿದ್ಯಾರ್ಥಿಗಳು
ಶಾಲೆ ಬಿಟ್ಟು ಹೋಗದಂತೆ ಶಿಕ್ಷಕನ ಕಾಲಿಗೆ ಬಿದ್ದು ಗೋಳಾಡಿದ ವಿದ್ಯಾರ್ಥಿಗಳು, ಭೀಮನಹಳ್ಳಿ ಸರ್ಕಾರಿ ಶಾಲೆಯಲ್ಲೊಂದು ಮನಕಲಕುವ ಘಟನೆ ನಡೆದಿದೆ.
ಗುರು ಶಿಷ್ಯರ ನಡುವಿನ ಭಾಂದವ್ಯಕ್ಕೆ ಸಾಕ್ಷಿಯಾದ ಸಕ್ಕರೆ ನಗರಿ, ಶಾಲೆ ಬಿಟ್ಟು ಹೋಗದಂತೆ ಶಿಕ್ಷಕನ ಕಾಲಿಗೆ ಬಿದ್ದು ಗೋಳಾಡಿದ ವಿದ್ಯಾರ್ಥಿಗಳು, ಹೌದು ಭೀಮನಹಳ್ಳಿ ಸರ್ಕಾರಿ ಶಾಲೆಯಲ್ಲೊಂದು ಮನಕಲಕುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿಯ ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಪುಟ್ಟರಾಜಯ್ಯ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ವಿಚಾರ ತಿಳಿದ ವಿದ್ಯಾರ್ಥಿಗಳ ಕಂಬನಿ ಹಾಕಿದ್ದಾರೆ. ಶಿಕ್ಷಕರನ್ನು ಕಳಹಿಸುವ ಮುನ್ನ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳ ಪ್ರೀತಿ ಸಾಕ್ಷಿಯಾಗಿದ್ದು ಈ ಘಟನೆ, ಹೌದು ಮುಖ್ಯ ಶಿಕ್ಷಕ ಪುಟ್ಟರಾಜಯ್ಯ ಅವರ ಕಾಲಿಗೆ ಬಿದ್ದು ಮಕ್ಕಳು ಹಾಗೂ ಗ್ರಾಮಸ್ಥರುಗೋಳಾಡಿದ್ದಾರೆ. ಗ್ರಾಮದಲ್ಲಿ ಉತ್ತಮ ಶಿಕ್ಷಕ ಎನಿಸಿಕೊಂಡಿದ್ದ ಪುಟ್ಟರಾಜಯ್ಯ ಕೊರಾನ ಸಂದರ್ಭದಲ್ಲೂ ಮನೆ ಮನೆಗೆ ತೆರಳಿ ಮಕ್ಕಳಿಗೆ ಪಾಠ ಮಾಡಿದ್ದ ಸಾಧನೆ ಇವರದ್ದು, ಇದೀಗ ತಮ್ಮ ಪ್ರೀತಿ ಶಿಕ್ಷಕ ಪುಟ್ಟರಾಜಯ್ಯ ವರ್ಗಾವಣೆಯಿಂದ ಭಾರೀ ನೋವುಂಟು ಮಾಡಿದ್ದಾರೆ.