Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಸ್​ಐ ಪರೀಕ್ಷಾ ಹಗರಣಕ್ಕೆ ಇಡಿ ತಂಡ ಎಂಟ್ರಿ: ಆರೋಪಿಗಳ ಆಸ್ತಿ, ಹಣಕಾಸು ವ್ಯವಹಾರದ ಬಗ್ಗೆ ತನಿಖೆ ಶುರು

ಸಿಐಡಿ ಪತ್ರದ ಮೇರೆಗೆ ಇಡಿ ಟೀಂ ಮಾಹಿತಿ ಕಲೆ ಹಾಕಿತ್ತು. ಸದ್ಯ ಈಗ ತನಿಖೆಗೆ ಅಧಿಕೃತ ಎಂಟ್ರಿ ಕೊಟ್ಟಿದೆ. ED ಆರೋಪಿಗಳ ವಿಚಾರಣೆಗೆ ಕೋರ್ಟ್ ಅನುಮತಿ ಪಡೆದಿದೆ.

ಪಿಎಸ್​ಐ ಪರೀಕ್ಷಾ ಹಗರಣಕ್ಕೆ ಇಡಿ ತಂಡ ಎಂಟ್ರಿ: ಆರೋಪಿಗಳ ಆಸ್ತಿ, ಹಣಕಾಸು ವ್ಯವಹಾರದ ಬಗ್ಗೆ ತನಿಖೆ ಶುರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Sep 21, 2022 | 2:55 PM

ಬೆಂಗಳೂರು: ಪಿಎಸ್​ಐ ಪರೀಕ್ಷಾ ಹಗರಣಕ್ಕೆ(PSI Recruitment Scam) ಇಡಿ ತಂಡ ಎಂಟ್ರಿ ಕೊಟ್ಟಿದೆ. ಕಳೆದ ಕೆಲ ದಿನಗಳ ಹಿಂದೆ ED(Enforcement Directorate)ಗೆ ಸಿಐಡಿ ಪತ್ರ ಬರೆದಿತ್ತು. ಆರೋಪಿಗಳ ಹಣಕಾಸು ವಹಿವಾಟು ಕೋಟ್ಯಂತರ ರೂಪಾಯಿ ಇದೆ. ಹಾಗೂ ಭ್ರಷ್ಟಾಚಾರ ಆಗಿದೆ ಎಂದು ಇಡಿಗೆ ಸಿಐಡಿ(CID) ಪತ್ರ ಬರೆದಿದ್ದರು. ಸಿಐಡಿ ಪತ್ರದ ಮೇರೆಗೆ ಇಡಿ ಟೀಂ ಮಾಹಿತಿ ಕಲೆ ಹಾಕಿತ್ತು. ಸದ್ಯ ಈಗ ತನಿಖೆಗೆ ಅಧಿಕೃತ ಎಂಟ್ರಿ ಕೊಟ್ಟಿದೆ. ED ಆರೋಪಿಗಳ ವಿಚಾರಣೆಗೆ ಕೋರ್ಟ್ ಅನುಮತಿ ಪಡೆದಿದೆ.

ಅನುಮತಿ ನಂತ್ರ ಜೈಲಿಗೆ ತೆರಳಿ ಅಥವಾ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಆರೋಪಿಗಳ ಆಸ್ತಿ, ಆಸ್ತಿ ಗಳಿಗೆ, ಹಣಕಾಸು ವ್ಯವಹಾರ ಹಾಗು ಹಣಕಾಸು ಹೂಡಿಕೆ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಅಗತ್ಯವಿದ್ರೆ ಆರೋಪಿಗಳ ಆಸ್ತಿಗಳನ್ನು ಕೇಸ್ ಅಟ್ಯಾಚ್ ಮಾಡಲಿದೆ.

ಪಿಎಸ್​ಐ ನೇಮಕಾತಿ ಪ್ರಕರಣ, ಅಕ್ಟೋಬರ್​ನಲ್ಲಿ ಎಲ್ಲ ಪ್ರಕರಣಗಳ ಚಾರ್ಜ್​ಶೀಟ್

ಬೆಂಗಳೂರು (ಸೆಂ.18): ಕರ್ನಾಟಕದ 454 ಸಬ್​ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿ (PSI Recruitment Scam) ಪ್ರಕ್ರಿಯೆಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಅಕ್ಟೋಬರ್​ನಲ್ಲಿ ಎಲ್ಲ ಪ್ರಕರಣಗಳಿಗೆ ಚಾರ್ಜ್​ಶೀಟ್ (Chargesheet) ಹಾಕಲಾಗುವುದು ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್​ ಸೂದ್ (Praveen Sood)​ ಹೇಳಿದರು. ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ನಂತರ ಮರು ಪರೀಕ್ಷೆಯ ದಿನಾಂಕ ಘೋಷಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ 90 ದಿನಗಳ ಒಳಗೆ ಚಾರ್ಜ್​ಶೀಟ್ ಸಲ್ಲಿಸಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೇವೇಗೌಡರ ಅನಾರೋಗ್ಯದ ಕಾರಣ ಬೇರೆ ಬೇರೆ ಪಕ್ಷಗಳ ನಾಯಕರು ಅವರನ್ನು ಭೇಟಿಯಾಗುತ್ತಿದ್ದಾರೆ: ಕುಮಾರಸ್ವಾಮಿ

ಮಾಹಿತಿಗಾಗಿ ಡಂಗೂರ ಹೊಡೆಸಿದ ಪೊಲೀಸರು

ಪಿಎಸ್‌ಐ ನೇಮಕಾತಿ ಹಗರಣದ ಪಾತ್ರಧಾರಿಗಳಾಗಿರುವ ಎಚ್‌.ಬಿ.ಬೋರೇಗೌಡ ಹಾಗೂ ಸಿದ್ದರಾಜು ಅವರನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯವು ಉದ್ಘೋಷಿತ ಆರೋಪಿಗಳು ಘೋಷಿಸಿದೆ. ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪ್ರಕಟಣೆ ಹೊರಡಿಸಿದೆ. ಆರೋಪಿಗಳ ಸ್ವಂತ ಊರುಗಳಲ್ಲಿ ತಮಟೆ ಮೂಲಕ ಡಂಗೂರ ಸಾರಿಸಿದ್ದಾರೆ. ಮಾಹಿತಿ ಕೊಡುವಂತೆ ಸಾರ್ವಜನಿಕರನ್ನು ವಿನಂತಿಸಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಜೋಡಿ ಹೊಸಹಳ್ಳಿ ಆರೋಪಿ ಬೋರೇಗೌಡನ ಸ್ವಗ್ರಾಮವಾಗಿದೆ. ಅಲ್ಲಿ ಹಾಗೂ ಆತನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಹೆಗ್ಗನಹಳ್ಳಿ ಕ್ರಾಸ್‌ನ ಚಾಮುಂಡೇಶ್ವರಿ ಲೇಔಟ್‌ಗೆ ಭೇಟಿ ನೀಡಿದ್ದ ಸಿಐಡಿ ಅಧಿಕಾರಿಗಳು ಪೊಲೀಸ್‌ ಪ್ರಕಟಣೆಯ ಭಿತ್ತಪತ್ರಗಳನ್ನು ಆತನ ಮನೆಯ ಮೇಲೆ ಅಂಟಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಸಿದ್ದರಾಜು ಬೆಂಗಳೂರಿನ ಲಗ್ಗೆರೆಯಲ್ಲಿ ಮನೆಮಾಡಿಕೊಂಡಿದ್ದ. ಅಲ್ಲಿಯೂ ಸಹ ಪೊಲೀಸರು ಇದೇ ಕ್ರಮ ಅನುಸರಿಸಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ಕೊಡಿ. ಯಾರು ಮಾಹಿತಿ ಕೊಟ್ಟಿದ್ದಾರೆ ಎಂಬ ವಿವರವನ್ನು ಸಿಐಡಿ ಗೌಪ್ಯವಾಗಿ ಇರಿಸುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:44 pm, Wed, 21 September 22