ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಕೋ ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ (Fraud) ಬೆಳಕಿಗೆ ಬಂದಿದೆ. ಸಿರಿವೈಭವ ಪತ್ತಿನ ನಿಯಮಿತ ಸಹಕಾರ ಸಂಘದಿಂದ (Siri Vaibhava Souharda Pattina Co operative Society) ಮಹಾಮೋಸ ನಡೆದಿದೆ. ನಾಲ್ಕು ಬ್ರಾಂಚ್ ನಿಂದ 2,000 ಹೂಡಿಕರದಾರರಿಗೆ ವಂಚನೆ ಎಸಗಲಾಗಿದೆ. ಇದರಿಂದ ಬ್ಯಾಂಕಿನ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚನೆಯಾಗಿದೆ.
ಉತ್ತರಹಳ್ಳಿ, ಆರ್ ಆರ್ ನಗರ, ಬಿಳೆಕಳ್ಳಿ ಮತ್ತು ಬಸವೇಶ್ವನಗರ ಗಳಲ್ಲಿ ಸಿರಿವೈಭವ ಪತ್ತಿನ ಸಂಘದ ಬ್ರಾಂಚ್ ಗಳು ಕಾರ್ಯನಿರ್ವಹಿಸುತ್ತಿದ್ದವು. ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ (Subramanyapura police) ಕೇಸ್ ದಾಖಲಾಗಿದೆ.
ಸಿರಿವೈಭವ ಪತ್ತಿನ ಸಂಘದ ಅಧ್ಯಕ್ಷೆ ನಾಗವಲ್ಲಿ, ಆಕೆಯ ಪತಿ ರಾಜೇಶ್ ವಿ ಆರ್, ಅಪ್ಪಲಾಲ್ ಚಕೋಲಿ, ಹಿರೇಮಠ್ ಹಾಗೂ ನಿರ್ದೇಶಕರ ವಿರುದ್ಧ ಹೂಡಿಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜೇಶ್ ಹಾಗೂ ನಾಗವಲ್ಲಿ ದಂಪತಿಯನ್ನ ಸುಬ್ರಮಣ್ಯಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೂರಾರು ಸಂಖ್ಯೆಯಲ್ಲಿ ಹೂಡಿಕೆದಾರರು ಸುಬ್ರಮಣ್ಯಪುರ ಠಾಣಾ ಮೇಟ್ಟಿಲೇರಿದ್ದಾರೆ.
Published On - 3:05 pm, Sun, 17 July 22