AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರೆಯಲು ಆಗುತ್ತಿಲ್ಲ ಗುರ್ಜಾಪುರ ಬ್ಯಾರೇಜ್​ ಕ್ರಸ್ಟ್​ಗೇಟ್: ಜಮೀನುಗಳಿಗೆ ಕೃಷ್ಣಾ ನೀರು ನುಗ್ಗುವ ಆತಂಕ

ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಒತ್ತಡವು ಕ್ರಸ್ಟ್​ಗ್ರೇಟ್​ಗಳ ಸಮೀಪ 10 ಟನ್​ ದಾಟಿದೆ. ಹೀಗಾಗಿ ಕ್ರಸ್ಟ್​ಗೇಟ್ ತೆರೆಯಲು ಅಧಿಕಾರಿಗಳು ಪರದಾಡುವಂತಿದೆ.

ತೆರೆಯಲು ಆಗುತ್ತಿಲ್ಲ ಗುರ್ಜಾಪುರ ಬ್ಯಾರೇಜ್​ ಕ್ರಸ್ಟ್​ಗೇಟ್: ಜಮೀನುಗಳಿಗೆ ಕೃಷ್ಣಾ ನೀರು ನುಗ್ಗುವ ಆತಂಕ
ಗುರ್ಜಾಪುರ ಬ್ಯಾರೇಜ್​ನ ಕ್ರಸ್ಟ್​ಗೇಟ್ ತೆರೆಯಲು ಹರಸಾಹಸ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jul 17, 2022 | 2:39 PM

Share

ರಾಯಚೂರು: ತಾಲ್ಲೂಕಿನ ಗುರ್ಜಾಪುರದಲ್ಲಿ (Gurjapur Barriage) ಕೃಷ್ಣಾ ನದಿಗೆ (Krishna River) ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್​ ಕಂ ಬ್ಯಾರೇಜ್​ನ 104 ಕ್ರಸ್ಟ್​ಗೇಟ್​ಗಳನ್ನು ತೆರೆಯಲು ಸಾಧ್ಯವಾಗದೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1.73 ಲಕ್ಷ ಕ್ಯೂಸೆಕ್​ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಕ್ರಸ್ಟ್​ಗೇಟ್​ಗಳ ಮೇಲೆ ಒತ್ತಡವೂ ಹೆಚ್ಚಾಗಿದೆ. ಕ್ರಸ್ಟ್​ಗೇಟ್​ ತೆರೆಯಲು ಇದು ತಾಂತ್ರಿಕ ಅಡಚಣೆ ತಂದೊಡ್ಡಿದೆ.

ಒಟ್ಟು 194 ಕ್ರಸ್ಟ್​ಗೇಟ್​ಗಳಿರುವ ಗುರ್ಜಾಪುರ ಬ್ಯಾರೇಜ್​ನ ಸಂಗ್ರಹ ಸಾಮರ್ಥ್ಯ 1.5 ಟಿಎಂಸಿ ಅಡಿ. ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ನೀರು ಪೂರೈಸಲೆಂದು ಈ ಬ್ಯಾರೇಜ್ ನಿರ್ಮಿಸಲಾಗಿದೆ. ಪೈಕಿ 90 ಗೇಟ್​ಗಳನ್ನು ಮಾತ್ರ ಈವರೆಗೆ ತೆರೆಯಲು ಸಾಧ್ಯವಾಗಿದೆ. ಬ್ಯಾರೇಜ್​ನ ಕ್ರಸ್ಟ್​ಗೇಟ್​ಗಳು ಸ್ಟ್ರಕ್ ಆಗಿರುವ ಹಿನ್ನೆಲೆಯಲ್ಲಿ ಆರ್​ಟಿಪಿಎಸ್ ಅಧಿಕಾರಿಗಳ ತಂಡ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು ಪ್ರಯತ್ನಗಳನ್ನು ಮುಂದುವರಿಸಿದೆ.

ಇದೀಗ ಕ್ರಸ್ಟ್​ಗೇಟ್ ತೆರೆಯಲು ಕೇರಳದಿಂದ ನಾಲ್ವರು ಮುಳುಗುತಜ್ಞರ ತಂಡವನ್ನು ಕರೆಸಲಾಗಿದೆ. ಮತ್ತೊಂದೆಡೆ ಜೆಸಿಬಿ ಬಳಸಿಕೊಂಡು ಗೇಟ್ ತೆರೆಯುವ ಪ್ರಯತ್ನವೂ ನಡೆಯುತ್ತಿದೆ. ಕ್ರಸ್ಟ್​ಗೇಟ್ ತೆರೆಯಲು ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಅಧಿಕಾರಿಗಳ ಎಡವಟ್ಟಿನಿಂದಾಗಿ ಈಗಾಗಲೇ ಸಾವಿರಾರು ಎಕರೆ ಕೃಷಿಭೂಮಿ ಜಲಾವೃತವಾಗಿದೆ ಎಂದು ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ರೈತರು ದೂರಿದ್ದಾರೆ. ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆಯಾಗುವ ಮೊದಲು ಬ್ಯಾರೇಜ್​ನ ಗೇಟ್ ತೆರೆಯಬೇಕಿತ್ತು ಎಂದು ಸಾರ್ವಜನಿಕರು ಹೇಳಿದ್ದಾರೆ.

ಗುರ್ಜಾಪುರ ಬ್ಯಾರೇಜ್​ನಲ್ಲಿರುವ ಕ್ರೇನ್​ಗಳ ಹೈಡ್ರೋ ಒತ್ತಡ ಸಹಿಷ್ಣುತೆ ಸಾಮರ್ಥ್ಯ ಕೇವಲ 2 ಟನ್ ಇದೆ. ಆದರೆ ಪ್ರಸ್ತುತ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಒತ್ತಡವು ಕ್ರಸ್ಟ್​ಗ್ರೇಟ್​ಗಳ ಸಮೀಪ 10 ಟನ್​ ದಾಟಿದೆ. ಹೀಗಾಗಿ ಕ್ರಸ್ಟ್​ಗೇಟ್ ತೆರೆಯಲು ಅಧಿಕಾರಿಗಳು ಪರದಾಡುವಂತಿದೆ.

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳಲ್ಲಿಯೂ ದೋಷ

ಹೊಸಪೇಟೆ: ತುಂಗಭದ್ರಾ ಜಲಾಶಯದ ಮೂರು ಕ್ರಸ್ಟ್‌ಗೇಟ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ನದಿಗೆ ನೀರು ಹರಿಸಲು ಅಡಚಣೆ ಉಂಟಾಗಿದೆ. 105.78 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 95 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. 1.50 ಕ್ಯೂಸೆಕ್ ಹರಿದು ಬರುತ್ತಿದ್ದು, ನದಿಗೆ ಅಷ್ಟೇ ಪ್ರಮಾಣದ ನೀರು ಹರಿಸಲಾಗುತ್ತಿದೆ. ಅಣೆಕಟ್ಟೆಯಲ್ಲಿ ಒಟ್ಟು 33 ಕ್ರಸ್ಟ್‌ಗೇಟ್‌ಗಳಿವೆ. ಈ ಪೈಕಿ 1, 21 ಹಾಗೂ 33ನೇ ಕ್ರಸ್ಟ್​ಗೇಟ್​ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಅವುಗಳನ್ನು ತೆರೆಯಲು ಈವರೆಗೆ ಸಾಧ್ಯವಾಗಿಲ್ಲ.

Published On - 2:39 pm, Sun, 17 July 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ