ಸಿಲಿಕಾನ್ ಸಿಟಿ ಸವಾರರಿಗೆ ಟ್ರಾಫಿಕ್ ಮಂಡೆಬಿಸಿ, 1 ತಿಂಗಳು ಎರಡು ಫ್ಲೈ ಓವರ್ ಬಂದ್‌

ಬೆಂಗಳೂರು: ಫ್ಲೈ ಓವರ್‌. ಸಿಲಿಕಾನ್ ಸಿಟಿ ಜನರ ಸಂಚಾರ ನಾಡಿ. ಟ್ರಾಫಿಕ್‌ನಿಂದ ವಿಲವಿಲ ಓದ್ದಾಡುವ ಬೆಂಗಳೂರಿನ ಜನರಿಗೆ ಈ ಫ್ಲೈ ಓವರ್‌ ಸ್ವಲ್ಪ ಮಟ್ಟಿಗೆ ಮುಕ್ತಿ ನೀಡುತ್ತೆ. ನಿರ್ವಹಣೆ ಇಲ್ಲದೆ ಪ್ಲೈ-ಓವರ್‌ಗಳು ಹಳ್ಳ ಹಿಡಿದ್ರೂ, ಜನ ಬಿಬಿಎಂಪಿಗೆ ಬೈತ ಸಂಚಾರ ಮಾಡ್ತಾರೆ. ಆದ್ರೆ ಈಗ ಫ್ಲೈ ಓವರ್ ಮೇಲೆ ಸಂಚಾರ ಮಾಡುವ ಸವಾರರಿಗೆ ಖುಷಿಯ ಜೊತೆ ಶಾಂಕಿಗ್ ಸುದ್ದಿಯೊಂದಿದೆ. ಒಂದು ತಿಂಗಳ ಕಾಲ ಎರಡು ಫ್ಲೈ ಓವರ್ ಬಂದ್‌! ಸಿಲಿಕಾನ್‌ ಸಿಟಿಯ ಪ್ರಮುಖ ಸಂಚಾರ ದಟ್ಟಣೆ ಇರುವ […]

ಸಿಲಿಕಾನ್ ಸಿಟಿ ಸವಾರರಿಗೆ ಟ್ರಾಫಿಕ್ ಮಂಡೆಬಿಸಿ, 1  ತಿಂಗಳು ಎರಡು ಫ್ಲೈ ಓವರ್ ಬಂದ್‌
Follow us
ಸಾಧು ಶ್ರೀನಾಥ್​
|

Updated on: Dec 17, 2019 | 8:32 AM

ಬೆಂಗಳೂರು: ಫ್ಲೈ ಓವರ್‌. ಸಿಲಿಕಾನ್ ಸಿಟಿ ಜನರ ಸಂಚಾರ ನಾಡಿ. ಟ್ರಾಫಿಕ್‌ನಿಂದ ವಿಲವಿಲ ಓದ್ದಾಡುವ ಬೆಂಗಳೂರಿನ ಜನರಿಗೆ ಈ ಫ್ಲೈ ಓವರ್‌ ಸ್ವಲ್ಪ ಮಟ್ಟಿಗೆ ಮುಕ್ತಿ ನೀಡುತ್ತೆ. ನಿರ್ವಹಣೆ ಇಲ್ಲದೆ ಪ್ಲೈ-ಓವರ್‌ಗಳು ಹಳ್ಳ ಹಿಡಿದ್ರೂ, ಜನ ಬಿಬಿಎಂಪಿಗೆ ಬೈತ ಸಂಚಾರ ಮಾಡ್ತಾರೆ. ಆದ್ರೆ ಈಗ ಫ್ಲೈ ಓವರ್ ಮೇಲೆ ಸಂಚಾರ ಮಾಡುವ ಸವಾರರಿಗೆ ಖುಷಿಯ ಜೊತೆ ಶಾಂಕಿಗ್ ಸುದ್ದಿಯೊಂದಿದೆ.

ಒಂದು ತಿಂಗಳ ಕಾಲ ಎರಡು ಫ್ಲೈ ಓವರ್ ಬಂದ್‌! ಸಿಲಿಕಾನ್‌ ಸಿಟಿಯ ಪ್ರಮುಖ ಸಂಚಾರ ದಟ್ಟಣೆ ಇರುವ ಮಾರ್ಗ್ ಅಂದ್ರೆ ಅದು ಸಿರ್ಸಿ ಪ್ಲೈ ಓವರ್‌. ಆದ್ರೆ ಈ ಪ್ಲೈ ಓವರ್‌ನಲ್ಲಿ ಒಂದು ತಿಂಗಳ ಕಾಲ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ. 2.65 ಕಿ.ಮೀ. ಉದ್ದದ ಮೇಲ್ಸೇತುವೆಯಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುವ ವೇಳೆ ಮೈಸೂರು ರಸ್ತೆಯ ಫೈ ಓವರ್ ಮಾರ್ಗವಾಗಿ ರಾಯನ್‌ ವೃತ್ತದ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಿಂದ ಪರ್ಯಾಯ ಮಾರ್ಗಗಳಲ್ಲಿ ವಾಹನದಟ್ಟಣೆ ಎಂದಿಗಿಂತ ಹೆಚ್ಚಿರಲಿದೆ.

ಪುರಭವನದ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುವ ಒಂದು ಮಾರ್ಗವನ್ನು ಈಗಾಗಲೇ ಐದು ಕೋಟಿ ರೂ. ವೆಚ್ಚದಲ್ಲಿ ಕಳೆದ ಮಾರ್ಚ್‌ನಲ್ಲಿ ನೂತನ ತಂತ್ರಜ್ಞಾನ ಬಳಸಿಕೊಂಡು ಡಾಂಬರೀಕರಣ ಮಾಡಲಾಗಿತ್ತು. ಇದೀಗ ಮತ್ತೂಂದು ಭಾಗದ ರಸ್ತೆಗೆ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದ್ರಿಂದ ನಿನ್ನೆಯಿಂದ ಸಿರ್ಸಿ ಫೈಒವರ್ ಸಂಚಾರ ಬಂದ ಆಗಿದೆ. ಇದರ ಜೊತೆ ಸುಮನಹಳ್ಳಿ ಮೇಲ್ಸೇತುವೆಯ ದುರಸ್ತಿ ಕಾಮಗಾರಿಯೂ ಪ್ರಾರಂಭವಾಗಲಿದೆ. ಈ ಎರಡು ಫ್ಲೈ ಒವರ್‌ ಡಾಂಬರೀಕರಣ ಮತ್ತು ದುರಸ್ತಿ ಕಾಮಗಾರಿಯನ್ನ 30 ದಿನಗಳೊಳಗೆ ಪೂರ್ಣಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.

ಮೈಸೂರು ರಸ್ತೆ ಮೇಲ್ಸೇತುವೆ ಮಾರ್ಗವಾಗಿ ರಾಯನ್ ವೃತ್ತದ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದ್ದರೂ ಸಂಚಾರ ದಟ್ಟಣೆ ಹೆಚ್ಚು ಇರಲಿದೆ. ಮೇಲ್ಸೇತುವೆ ಮೇಲೆ ಚಲಿಸುವ ವಾಹನಗಳು ಚಾಮರಾಜಪೇಟೆ ಮಾರ್ಗವಾಗಿ, ಬಿಬಿ ಜಂಕ್ಷನ್ ಮೈಸೂರು ರಸ್ತೆ ಮಾರ್ಗವಾಗಿ ಕೆಂಗೇರಿ-ಮೈಸೂರು ರಸ್ತೆ ಕಡೆಗೆ ಸಂಚರಿಸಲು ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆ ಸುಮನಹಳ್ಳಿ ಮೇಲ್ಸೇತುವೆಯಲ್ಲೂ ದುರಸ್ತಿ ಕಾಮಗಾರಿ ನಡೆಸುತ್ತಿದ್ದು, ಮಾರ್ಗ ಬದಲಾವಣೆ ಮಾಡಿಲ್ಲ. ಆದ್ರೆ ಎರಡು ಫ್ಲೈಓವರ್‌ನ ದುರಸ್ತಿ ಕಾಮಗಾರಿ ಏಕಕಾಲದಲ್ಲಿ ಶುರುವಾಗಿದ್ರಿಂದ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ಜೋರಾಗಿದೆ.

ಒಟ್ನಲ್ಲಿ ಟ್ರಾಫಿಕ್‌ ಜಾಮ್‌ನಿಂದ ಕಂಗೆಟ್ಟ ಸಿಲಿಕಾನ್ ಸಿಟಿಜನರಿಗೆ ಈಗ ಏಕಕಾಲಕ್ಕೆ ಫ್ಲೈ ಓವರ್ ದುರಸ್ತಿ ಕಾಮಗಾರಿ ಶುರುಮಾಡಿದ್ರಿಂದ ಫುಲ್ ಮಂಡೆಬಿಸಿಯಾಗಿದೆ. ಆದ್ರೆ ಏನ್ ಮಾಡೋದು ಚಳಿಯಲಿ ಟ್ರಾಫಿಕ್ ಜೊತೆಯಲ್ಲಿ ಅಂತ ಟ್ರಾಫಿಕ್‌ನಲ್ಲಿ 1ತಿಂಗಳು ಒದ್ದಾಡುವುದು ಅನಿವಾರ್ಯ.

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ