ವಿಡಿಯೋದಲ್ಲಿ ಯುವತಿ ಹೇಳುತ್ತಿರುವುದೆಲ್ಲಾ ಸುಳ್ಳು -ಟಿವಿ9ಗೆ SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಪ್ರತಿಕ್ರಿಯೆ

|

Updated on: Mar 25, 2021 | 12:53 PM

ಈ ಬಗ್ಗೆ ಟಿವಿ9ಗೆ SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಸೌಮೇಂದು ಮುಖರ್ಜಿ ಅವರ ಹೇಳಿಕೆ ಹೀಗಿದೆ: ವಿಡಿಯೋದಲ್ಲಿ ಯುವತಿ ಹೇಳುತ್ತಿರುವುದೆಲ್ಲಾ ಸುಳ್ಳು. ಯುವತಿ ಯಾವುದೇ ರೀತಿಯ ವಿಡಿಯೋ ಕೊಟ್ಟಿಲ್ಲ

ವಿಡಿಯೋದಲ್ಲಿ ಯುವತಿ ಹೇಳುತ್ತಿರುವುದೆಲ್ಲಾ ಸುಳ್ಳು -ಟಿವಿ9ಗೆ SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಪ್ರತಿಕ್ರಿಯೆ
SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಮತ್ತು ಸಿಡಿ ಲೇಡಿ
Follow us on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ CD ಪ್ರಕರಣದಲ್ಲಿ CD ಲೇಡಿ ಇದೀಗತಾನೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋದಲ್ಲಿ ಪ್ರಕರಣದಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಎಸ್​ಐಟಿ ಪೊಲೀಸರ ಬಗ್ಗೆ ಅನುಮಾನ, ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸ್​ ಕಮಿಷನರ್​ ಅವರಿಗೆ ಈ ಹಿಂದೆ ವಿಡಿಯೋ ತಲುಪಿಸಿದ್ದೆ. ಆದರೆ ಅದನ್ನು ತಡವಾಗಿ ಬಿಡುಗಡೆ ಮಾಡಿ ನನಗೆ ಅನ್ಯಾಯ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಟಿವಿ9ಗೆ SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಸೌಮೇಂದು ಮುಖರ್ಜಿ ಅವರ ಹೇಳಿಕೆ ಹೀಗಿದೆ:
ವಿಡಿಯೋದಲ್ಲಿ ಯುವತಿ ಹೇಳುತ್ತಿರುವುದೆಲ್ಲಾ ಸುಳ್ಳು. ಯುವತಿ ಯಾವುದೇ ರೀತಿಯ ವಿಡಿಯೋ ಕೊಟ್ಟಿಲ್ಲ. ಯುವತಿಗೆ ವಿಚಾರಣೆಗೆ ಹಾಜರಾಗಲು 5 ಬಾರಿ ನೋಟಿಸ್ ಕೊಟ್ಟಿದ್ದೇವೆ. 5 ಬಾರಿ ನೋಟಿಸ್ ಕೊಟ್ಟಿದ್ದರೂ ವಿಚಾರಣೆಗೆ ಬಂದಿಲ್ಲ. ಯುವತಿ ಇದ್ದ ಕಡೆಯೇ ವಿಚಾರಣೆ ಮಾಡುವುದಾಗಿ ಹೇಳಿದ್ದೆವು. ಆದರೂ ಯುವತಿ ತಾನಿರುವ ಮಾಹಿತಿಯನ್ನು ನೀಡಿಲ್ಲ ಎಂದಿದ್ದಾರೆ SIT ಮುಖ್ಯಸ್ಥ ಸೌಮೇಂದು ಮುಖರ್ಜಿ.

ತಾಜಾ ವಿಡಿಯೋ ಬಗ್ಗೆ ಎಸ್ಐಟಿ ಅಧಿಕಾರಿಗಳಿಂದ ಗಂಭೀರ ಚರ್ಚೆ
CD ಯಲ್ಲಿರುವ ಯುವತಿ ನಮ್ಮ ಬಳಿ ಬಂದು ರಕ್ಷಣೆ ಕೇಳಿಲ್ಲ. ಆ ಯುವತಿ ಎಲ್ಲಿದ್ದಾರೆಂದು ಕೂಡ ನಮಗೆ ಮಾಹಿತಿ ಇಲ್ಲ. ಹೀಗಿರಬೇಕಾದರೆ ಯುವತಿಗೆ ರಕ್ಷಣೆ ಕೊಡೋದು ಹೇಗೆ? ಎಂದು ಎಸ್‌ಐಟಿ ಸಭೆಯಲ್ಲಿ ಯುವತಿ ವಿಡಿಯೋ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಇಂದು ಬಿಡುಗಡೆ ಮಾಡಿರುವ 1 ನಿಮಿಷ 13 ಸೆಕೆಂಡ್ ವಿಡಿಯೋ ಬಗ್ಗೆ ಎಸ್ಐಟಿ ಅಧಿಕಾರಿಗಳು ಗಂಭೀರವಾಗಿ ಚರ್ಚಿಸುತ್ತಿದ್ದಾರೆ.

ಇದನ್ನೂ ಓದಿ: ಎಸ್​ಐಟಿಗೆ ಸಡ್ಡು ಹೊಡೆದ CD ಲೇಡಿ.. ಬಿಡುಗಡೆಯಾಯ್ತು ಮತ್ತೊಂದು ವಿಡಿಯೋ! ಪೊಲೀಸ್ ಕಮಿಷನರ್ ವಿರುದ್ಧ ಭಾರಿ ಆರೋಪ

Published On - 12:24 pm, Thu, 25 March 21