Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎರಡನೇ ಅಲೆ.. ಮಾಸ್ಕ್ ಹಾಕಲ್ಲ-ದಂಡ ಪಾವತಿಸಲ್ಲ ಎಂದು ಮಾರ್ಷಲ್​ಗಳ ಜೊತೆ ರಗಳೆ ತೆಗೆದ ಜನ

ಕೆ.ಆರ್ ಮಾರ್ಕೆಟ್​ನಲ್ಲಿ ಪೊಲೀಸ್​ರಿಂದ ಸ್ಟ್ರೀಕ್ಟ್ ಆಗಿ ರೂಲ್ಸ್ ಫಾಲೋ ಮಾಡಿಸಲಾಗುತ್ತಿದೆ. ಮಾಸ್ಕ್ ಹಾಕದವರನ್ನ ಹುಡುಕಿ ಹುಡುಕಿ ಪೊಲೀಸ್ರು ಹಿಡಿದು ದಂಡವಿಧಿಸಲು ಮುಂದಾಗಿದ್ದಾರೆ. ದುಡ್ಡಿಲ್ಲ ಅಂದರೆ ಎಟಿಎಂ ಸ್ವೈಪ್ ಮಾಡಿಸುವ ಮೂಲಕ ದಂಡ ವಸೂಲಿ ಮಾಡುತ್ತಿದ್ದಾರೆ. ಆದ್ರೆ ಅನೇಕರು ಸಾರ್ ದುಡ್ಡಿಲ್ಲ, ಸಾರ್ ದುಡಿಲ್ಲವೆಂದು ರಿಕ್ವೇಸ್ಟ್ ಮಾಡಿಕೊಳ್ಳುತ್ತಿದ್ದಾರೆ.

ಕೊರೊನಾ ಎರಡನೇ ಅಲೆ.. ಮಾಸ್ಕ್ ಹಾಕಲ್ಲ-ದಂಡ ಪಾವತಿಸಲ್ಲ ಎಂದು ಮಾರ್ಷಲ್​ಗಳ ಜೊತೆ ರಗಳೆ ತೆಗೆದ ಜನ
ಮಾರ್ಷಲ್‌ಗಳು
Follow us
ಆಯೇಷಾ ಬಾನು
|

Updated on: Mar 25, 2021 | 12:50 PM

ಬೆಂಗಳೂರು: ಕೊರೊನಾ ಸೋಂಕಿನ ಸ್ಫೋಟವಾಗ್ತಿದ್ದಂತೆ ಕೊರೊನಾ ಕಡಿವಾಣಕ್ಕೆ ರಾಜ್ಯ ಸರ್ಕಾರದಿಂದ ಹೊಸ ಗೈಡ್​ಲೈನ್ಸ್ ಜಾರಿಯಾಗಿದೆ. ಆದ್ರೆ ಜನರು ಮಾತ್ರ ಯಾವುದಕ್ಕೂ ತಲೆನೇ ಕೆಡಿಸಿಕೊಂಡಿಲ್ಲ. ಈ ರೂಲ್ಸ್ ನಮಗಲ್ಲಾ ಎಂಬಂತೆ ಓಡಾಡುತ್ತಿದ್ದಾರೆ. ಆದ್ರೆ ಬಿಬಿಎಂಪಿ ಮಾರ್ಷಲ್‌ಗಳು ಇದಕ್ಕೆ ಕಡಿವಾಣ ಹಾಕಲು ದಂಡ ವಸೂಲಿಗೆ ನಿಂತಿದ್ದು ಸಾರ್ವಜನಿಕರು ದಂಡ ನೀಡಲು ನಿರಾಕರಿಸಿ ಮಾರ್ಷಲ್​ಗಳ ಜೊತೆ ವಾಗ್ವಾದಕ್ಕೆ ಮುಂದಾಗಿದ್ದಾರೆ. ಮಾಸ್ಕ್ ಹಾಕದವರಿಗೆ ದಂಡ ಹಾಕಲು ಮುಂದಾದ ಮಾರ್ಷಲ್​ಗಳಿಗೆ ಸಾರ್ವಜನಿಕರು ವಿರೋಧಪಡಿಸಿದ್ದು ದಂಡ ಪಾವತಿಸಲ್ಲವೆಂದು ಮಾರ್ಷಲ್‌ಗಳ ಜತೆ ಗಲಾಟೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇನ್ನು ಕೆ.ಆರ್ ಮಾರ್ಕೆಟ್​ನಲ್ಲಿ ಪೊಲೀಸ್​ರಿಂದ ಸ್ಟ್ರೀಕ್ಟ್ ಆಗಿ ರೂಲ್ಸ್ ಫಾಲೋ ಮಾಡಿಸಲಾಗುತ್ತಿದೆ. ಮಾಸ್ಕ್ ಹಾಕದವರನ್ನ ಹುಡುಕಿ ಹುಡುಕಿ ಪೊಲೀಸ್ರು ಹಿಡಿದು ದಂಡವಿಧಿಸಲು ಮುಂದಾಗಿದ್ದಾರೆ. ದುಡ್ಡಿಲ್ಲ ಅಂದರೆ ಎಟಿಎಂ ಸ್ವೈಪ್ ಮಾಡಿಸುವ ಮೂಲಕ ದಂಡ ವಸೂಲಿ ಮಾಡುತ್ತಿದ್ದಾರೆ. ಆದ್ರೆ ಅನೇಕರು ಸಾರ್ ದುಡ್ಡಿಲ್ಲ, ಸಾರ್ ದುಡಿಲ್ಲವೆಂದು ರಿಕ್ವೇಸ್ಟ್ ಮಾಡಿಕೊಳ್ಳುತ್ತಿದ್ದಾರೆ.

ನಿಯಮ ಉಲ್ಲಂಘಿಸಿದರೆ ಭಾರಿ ದಂಡದ ಬಿಸಿ ಡೆಡ್ಲಿ ವೈರಸ್ ಕೊರೊನಾ ಎರಡನೇ ಅಲೆ ವ್ಯಾಪಿಸುವುದನ್ನು ತಡೆಯಲು ಸಾರ್ವಜನಿಕರಿಗೆ ಸಹಕರಿಸುವಂತೆ ಮನವಿ ಮಾಡುತ್ತಲೇ ಇರುವ ರಾಜ್ಯ ಸರಕಾರ, ಇದೀಗ ತಕ್ಷಣದಿಂದಲೇ ಜಾರಿಯಾಗುವಂತೆ ಮತ್ತಷ್ಟು ಬಿಗಿ ನಿಯಮಗಳನ್ನು ಜಾರಿಗೊಳಿಸಿದೆ. ಕೊರೊನಾ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಗೈಡ್‌ಲೈನ್ಸ್‌ ಪ್ರಕಟಿಸಿರುವ ರಾಜ್ಯ ಸರ್ಕಾರ, ಕೊವಿಡ್ ನಿಯಮ ಉಲ್ಲಂಘಿಸಿದರೆ ಭಾರಿ ದಂಡದ ಬಿಸಿ ಮುಟ್ಟಿಸಲಿದೆ. ನಿಯಮ ಉಲ್ಲಂಘನೆಯಾದ್ರೆ ಆಯಾ ಪ್ರದೇಶದ ಮಾಲೀಕರು, ಆಯೋಜಕರಿಗೆ ದಂಡ ವಿಧಿಸಿದ್ರೆ, ಸಭೆ, ಸಮಾರಂಭ, ಱಲಿಗಳಲ್ಲಿ ರೂಲ್ಸ್ ಬ್ರೇಕ್ ಆದ್ರೆ ಕಾರ್ಯಕ್ರಮದ ಆಯೋಜಕರಿಗೆ ದಂಡದ ಬಿಸಿ ತಟ್ಟಲಿದೆ. ಅಂದಹಾಗೆ ರಾಜ್ಯ ಸರ್ಕಾರ ತಕ್ಷಣದಿಂದಲೇ ಜಾರಿಯಾಗುವಂತೆ ಆದೇಶಿಸಿರುವ ನಿಯಮಗಳೇನು ಅಂತಾ ನೋಡೋದಾದ್ರೆ,

2ನೇ ಅಲೆ ತಡೆಗೆ ಗೈಡ್‌ಲೈನ್ಸ್! ಹೊರಾಂಗಣದಲ್ಲಿ ಮದುವೆಗೆ 500 ಜನರಿಗೆ ಮಾತ್ರ ಅವಕಾಶ, ಒಳಾಂಗಣದಲ್ಲಿ ಮದುವೆ ಮಾಡಿದ್ರೆ 200 ಜನಕ್ಕೆ ಮಾತ್ರ ಅವಕಾಶ, ಹೊರಾಂಗಣದಲ್ಲಿ ಹುಟ್ಟುಹಬ್ಬ, ಇತರೆ ಪಾರ್ಟಿ ಮಾಡಲು 100 ಜನಕ್ಕೆ ಅವಕಾಶ, ಒಳಾಂಗಣದಲ್ಲಿ ಹುಟ್ಟುಹಬ್ಬ, ಇತರೆ ಪಾರ್ಟಿಗೆ 50 ಜನಕ್ಕೆ ಅವಕಾಶ, ಇನ್ನು ಹೊರಾಂಗಣ ಪ್ರದೇಶದಲ್ಲಿ ಅಂತ್ಯಕ್ರಿಯೆಗೆ 100 ಜನಕ್ಕೆ ಅವಕಾಶ ಮಾಡಿಕೊಟ್ಟಿದ್ರೆ, ಚಿತಾಗಾರಗಳಲ್ಲಿ 50 ಜನರು ಭಾಗಿಯಾಗಲು ಅವಕಾಶ ನೀಡಲಾಗಿದೆ. ಇನ್ನು ಇತರೆ ಸಮಾರಂಭಕ್ಕೆ 100 ಜನ ಭಾಗಿಯಾಗಲು ಅವಕಾಶವಿದ್ರೆ, ಧಾರ್ಮಿಕ ಸಮಾರಂಭಗಳಲ್ಲಿ 500 ಜನ ಭಾಗಿಗೆ ಅವಕಾಶ ಮಾಡಿಕೊಡಲಾಗಿದೆ. ರಾಜಕೀಯ ಸಮಾರಂಭಗಳಲ್ಲಿ 500 ಜನರಿಗೆ ಅವಕಾಶ ಮಾಡಿಕೊಡಲಾಗಿದ್ದು, ಸಭೆ, ಸಮಾರಂಭದಲ್ಲಿ ಉಲ್ಲಂಘನೆಗೆ 10 ಸಾವಿರ ದಂಡ ಹಾಕಲಾಗುವುದು.

ನಿಯಮ ಮೀರಿದರೆ ಕಾರ್ಯಕ್ರಮ ಆಯೋಜಕರೇ ಹೊಣೆ ಹೊರಬೇಕು. ಹೋಟೆಲ್‌ಗಳಲ್ಲಿ ನಿಯಮ ಉಲ್ಲಂಘಿಸಿದರೆ 10 ಸಾವಿರ ರೂಪಾಯಿ ದಂಡ, ಹೋಟೆಲ್‌, ಕಲ್ಯಾಣ ಮಂಟಪ, ಸಮುದಾಯ ಭವನ ಸೇರಿದಂತೆ ಆಯಾ ಸ್ಥಳದ ಮಾಲೀಕರಿಗೇ ದಂಡ ವಿಧಿಸಲಾಗುವುದು. ಎಸಿ ಪಾರ್ಟಿ ಹಾಲ್ ಮಾಲೀಕರಿಗೂ 10 ಸಾವಿರ ರೂಪಾಯಿ ದಂಡ, ನಾನ್‌ ಎಸಿ ಡಿಪಾರ್ಟ್‌ಮೆಂಟಲ್ ಸ್ಟೋರ್ಸ್‌-5 ಸಾವಿರ ರೂಪಾಯಿ, ನಾನ್‌ ಎಸಿ ಪಾರ್ಟಿ ಹಾಲ್‌ಗಳಿಗೆ 5 ಸಾವಿರ ರೂಪಾಯಿ ದಂಡ, ನಗರ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ ₹250 ದಂಡ, ನಗರ ಹೊರತುಪಡಿಸಿ ಇತರೆಡೆ ಮಾಸ್ಕ್ ಧರಿಸದಿದ್ದರೆ 100 ರೂಪಾಯಿ ದಂಡ ವಿಧಿಸಲಾಗುವುದು. ಮಾಸ್ಕ್ ಧರಿಸದಿದ್ದರೆ ಪೊಲೀಸರಿಗೂ ದಂಡ ಹಾಕುವ ಅಧಿಕಾರ ನೀಡಲಾಗಿದ್ದು, ಹೆಡ್‌ಕಾನ್ಸ್‌ಟೇಬಲ್ ಮತ್ತು ಮೇಲ್ಮಟ್ಟದ ಅಧಿಕಾರಿಗಳು ದಂಡ ವಿಧಿಸುತ್ತಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಪಂಚಾಯಿತಿಗೆ ದಂಡ ಹಾಕುವ ಅಧಿಕಾರ ನೀಡಲಾಾಗಿದ್ರೆ, ದೈಹಿಕ ಅಂತರ ಪಾಲನೆ ಮಾಡದಿದ್ರೂ 250 ರೂಪಾಯಿ ದಂಡ ಬೀಳಲಿದೆ.

ಜನ ಹೆಚ್ಚಾದರೆ ದಂಡ ಹಾಕುವ ಮೂಲಕ ನಿಯಂತ್ರಣ ಮಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ರಾಜಕೀಯ ಪಕ್ಷಗಳ ಱಲಿಗೆ 500 ಜನರ ಮಿತಿಗೊಳಿಸಿರುವ ಸರ್ಕಾರ ಅದು ಪಾಲನೆಯಾಗುವಂತೆ ಎಷ್ಟರಮಟ್ಟಿಗೆ ನೋಡಿಕೊಳ್ಳುತ್ತದೋ ಗೊತ್ತಿಲ್ಲ.

ಇದನ್ನೂ ಓದಿ: Corona Cases and Lockdown News Live: ಕೊರೊನಾ ಸೋಂಕಿನ ಕುರಿತು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆಯಾ?

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!