ಬಸ್‌ನಲ್ಲಿ ಪ್ರಯಾಣದ ವಿಚಾರಕ್ಕೆ ಜಗಳ; ಗುಂಡ್ಲಾಪುರ ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಕಿತ್ತಾಟ
ಬಸ್‌ನಲ್ಲಿ ತೆರಳುವಾಗ ಪ್ರಯಾಣದ ವಿಚಾರಕ್ಕಾಗಿ ವಿದ್ಯಾರ್ಥಿಗಳು ಪರಸ್ಪರ ಕಿತ್ತಾಡಿಕೊಂಡ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ: ಬಸ್‌ನಲ್ಲಿ ಪ್ರಯಾಣದ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆ ಜಗಳ ಏರ್ಪಟ್ಟಿದೆ. ಜಗಳ ಅತಿರೇಕಕ್ಕೆ ಹೋಗಿದ್ದು, ಹೊಡೆದಾಡಿಕೊಳ್ಳುವವರೆಗೆ ಜಗಳ ಮುಂದುವರೆದಿದೆ. ಘಟನೆ ಶಹಾಪುರ ತಾಲೂಕಿನ ಗುಂಡ್ಲಾಪುರ ತಾಲೂಕಿನಲ್ಲಿ ನಡೆದಿದೆ.
ನಗನೂರು ಹಾಗೂ ಗುಂಡ್ಲಾಪುರ ಗ್ರಾಮದಲ್ಲಿ ಪ್ರಯಾಣಿಕರಿಗೆ ಬಸ್ ಸಮಸ್ಯೆ ಹಿನ್ನೆಲೆಯಲ್ಲಿ ಗುಂಡ್ಲಾಪುರ ಗ್ರಾಮದ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 7.30ಕ್ಕೆ ವಿಶೇಷ ಬಸ್ ಕಲ್ಪಿಸಲಾಗಿದೆ. ಆದರೂ ವಿದ್ಯಾರ್ಥಿಗಳು 8 ಗಂಟೆಗೆ ನಗನೂರಿನಿಂದ ಬರುವ ಬಸ್ನಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ನಗನೂರಿನಿಂದ ಬರುವ ಬಸ್ಗಳು ಭರ್ತಿಯಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂಬ ಕಾರಣಕ್ಕೆ ನಗನೂರು ಮತ್ತು ಗುಂಡ್ಲಾಪುರ ಗ್ರಾಮದ ವಿದ್ಯಾರ್ಥಿಗಳ ಮಧ್ಯೆ ಜಗಳ ಏರ್ಪಟ್ಟಿದೆ.
ಬಸ್‌ನಲ್ಲಿ ತೆರಳುವಾಗಲೇ ಜಗಳ ಆರಂಭಗೊಂಡಿದೆ. ಇದನ್ನು ಗಮನಿಸಿದ ಚಾಲಕ ಬಸ್ ನಿಲ್ಲಿಸಿದ್ದಾರೆ. ರಸ್ತೆಗೆ ಇಳಿದು ರಸ್ತೆಯ ಮಧ್ಯದಲ್ಲೇ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜಗಳವಾಡುತ್ತಿರುವ ಕಾಲೇಜು ವಿದ್ಯಾರ್ಥಿಗಳು
ಇದನ್ನೂ ಓದಿ: ಯಾದಗಿರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಸಿಗುತ್ತಿಲ್ಲ; ವಿದ್ಯಾರ್ಥಿಗಳ ಆರೋಪ
ಗದಗ: ಬಾಟಲ್ಗಳಲ್ಲಿ ದೋಣಿ ನಿರ್ಮಿಸಿ ಯಶಸ್ಸು ಕಂಡ ಸರ್ಕಾರಿ ಶಾಲೆ ವಿದ್ಯಾರ್ಥಿಗಳು
Published On - 12:46 pm, Thu, 25 March 21