ಎಸ್ಐಟಿಗೆ ಸಡ್ಡು ಹೊಡೆದ CD ಲೇಡಿ.. ಬಿಡುಗಡೆಯಾಯ್ತು ಮತ್ತೊಂದು ವಿಡಿಯೋ! ಪೊಲೀಸ್ ಕಮಿಷನರ್ ವಿರುದ್ಧ ಭಾರಿ ಆರೋಪ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ನನಗೆ ನನ್ನ ತಂದೆ, ತಾಯಿಯ ಸುರಕ್ಷತೆಯೇ ಮುಖ್ಯ. ಅವರ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೆ ನಾನು ಎಸ್‌ಐಟಿ ಮುಂದೆ ವಿಚಾರಣೆಗೆ ಬರುತ್ತೇನೆ. ನಾನು ಏನು ಹೇಳಿಕೆ ನೀಡಬೇಕೋ ಅದನ್ನು ನೀಡುತ್ತೇನೆ ಎಂದು ಸಿಡಿ ಲೇಡಿ ನಮ್ಮ ತಂದೆ, ತಾಯಿಗೆ ಸುರಕ್ಷತೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ CD ಪ್ರಕರಣದಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಎಸ್‌ಐಟಿ ಪೊಲೀಸರಿಗೆ ಪ್ರಕರಣದ ಪಾತ್ರಧಾರಿಗಳು ಚಳ್ಳೆಹಣ್ಣು ತಿನ್ನುಸುತ್ತಲೇ ಇದ್ದಾರೆ. ಅದರಲ್ಲೂ CD ಲೇಡಿಯಂತೂ ತನಗೆ ನಾಲ್ಕಾರು ನೋಟಿಸ್ಗಳು ಬಂದಿದ್ದರೂ ಯಾವುದಕ್ಕೂ ಕ್ಯಾರೆ ಅನ್ನುತ್ತಿಲ್ಲ. ಪೊಲೀಸರ ಕರೆಗೆ ರೆಸ್ಪಾನ್ಸ್ ನೀಡುತ್ತಿಲ್ಲ. ಈ ಮಧ್ಯೆ, ತಗೊಳ್ಳಿ ಮತ್ತೊಂದು ವಿಡಿಯೋ ಎಂದು ಮಾಧ್ಯಮಗಳ ಮೂಲಕ ಒಂದು ನಿಮಿಷ 13 ಸೆಕೆಂಡ್ಗಳ ಮತ್ತೊಂದು ವಿಡಿಯೋ ತುಣುಕನ್ನು ಹರಿಯಬಿಟ್ಟಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ನನಗೆ ನನ್ನ ತಂದೆ, ತಾಯಿಯ ಸುರಕ್ಷತೆಯೇ ಮುಖ್ಯ. ಅವರ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೆ ನಾನು ಎಸ್‌ಐಟಿ ಮುಂದೆ ವಿಚಾರಣೆಗೆ ಬರುತ್ತೇನೆ. ನಾನು ಏನು ಹೇಳಿಕೆ ನೀಡಬೇಕೋ ಅದನ್ನು ನೀಡುತ್ತೇನೆ ಎಂದು ಸಿಡಿ ಲೇಡಿ ನಮ್ಮ ತಂದೆ, ತಾಯಿಗೆ ಸುರಕ್ಷತೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪೊಲೀಸ್ ಕಮಿಷನರ್ ವಿರುದ್ಧ ಭಾರಿ ಆರೋಪ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್, ಮಹಿಳಾ ಸಂಘಟನೆಗಳ ಬಳಿ ಕೇಳಿಕುಳೊಳ್ಳುತ್ತಿದ್ದೇನೆ. ನಮ್ಮ ತಂದೆ, ತಾಯಿಗೆ ರಕ್ಷಣೆ ನೀಡಿ. ಅವರು ಸೇಫ್ ಎಂದು ತಿಳಿದ ತಕ್ಷಣ ಎಸ್‌ಐಟಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುತ್ತೇನೆ. ಮಾರ್ಚ್ 12ರಂದೇ ನಗರ ಪೊಲೀಸ್ ಆಯುಕ್ತರಿಗೆ, ವಿಶೇಷ ತನಿಖಾ ತಂಡಕ್ಕೆ ವಿಡಿಯೋವನ್ನು ಕಳಿಸಿದ್ದೆ. ಆದರೆ ನಾನು ವಿಡಿಯೋ ಕಳಿಸಿದ್ದ ದಿನ ಬಿಡುಗಡೆ ಆಗಿಲ್ಲ. ಮಾ.13ರಂದು ರಮೇಶ್ ಜಾರಕಿಹೊಳಿರಿಂದ ದೂರು ನೀಡಿದ ಬಳಿಕ ವಿಡಿಯೋ ರಿಲೀಸ್ ಆಗಿದೆ. ದೂರು ನೀಡಿದ ಅರ್ಧ ಗಂಟೆ ಬಳಿಕ ವಿಡಿಯೋ ರಿಲೀಸ್ ಆಗಿದೆ. ಹೀಗಾಗಿ ಇಲ್ಲಿ ಏನಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಎಸ್‌ಐಟಿ ಯಾರ ಪರವಾಗಿದ್ದಾರೆಂದು ಅರ್ಥವಾಗುತ್ತಿಲ್ಲ. ನಮ್ಮ ತಂದೆ, ತಾಯಿ ಸ್ವಇಚ್ಛೆಯಿಂದ ದೂರು ನೀಡಿರಲ್ಲ. ನಾನು ತಪ್ಪೇ ಮಾಡಿಲ್ಲ ಎಂದು ನಮ್ಮ ಪೋಷಕರಿಗೆ ಗೊತ್ತು. ಹೀಗಾಗಿ ಅವರು ದೂರು ನೀಡಿರುವುದಕ್ಕೆ ಸಾಧ್ಯವಿಲ್ಲ. ನನಗೆ ಯಾವತ್ತಿದ್ರೂ ನ್ಯಾಯ ಸಿಗುತ್ತೆ ಎಂಬ ವಿಶ್ವಾಸವಿದೆ ಎಂದು ಸಿಡಿ ಲೇಡಿ ಬಿಡುಗಡೆ ಮಾಡಿದ ಎರಡನೇ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ವಿಡಿಯೋದಲ್ಲಿ ಯುವತಿ ಹೇಳುತ್ತಿರುವುದೆಲ್ಲಾ ಸುಳ್ಳು -ಟಿವಿ9ಗೆ SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಪ್ರತಿಕ್ರಿಯೆ
Published On - 11:56 am, Thu, 25 March 21