KHB Site: ಬಿಜೆಪಿ ಸಂಸದ ಉಮೇಶ್ ಜಾಧವ್ ಪತ್ನಿ ಟ್ರಸ್ಟ್‌ಗೆ ಸೈಟ್ ಹಂಚಿಕೆ‌ ರದ್ದು; 1 ಲಕ್ಷ ರೂ ದಂಡ, ಕೋರ್ಟ್​ ಕಿಡಿಕಿಡಿ

| Updated By: ಸಾಧು ಶ್ರೀನಾಥ್​

Updated on: Sep 30, 2021 | 1:25 PM

ಕಲಬುರಗಿ: ಕಲಬುರಗಿ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಪತ್ನಿ ಟ್ರಸ್ಟ್‌ಗೆ ನೀಡಲಾಗಿದ್ದ ನಿವೇಶನ ಹಂಚಿಕೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದು ಪಡಿಸಿದೆ. ಇನ್ನು, ನಿಯಮಬಾಹಿರ ಹಂಚಿಕೆ ಮಾಡಿದ ಕರ್ನಾಟಕ ಹೌಸಿಂಗ್​ ಬೋರ್ಡ್​ಗೆ (KHB) 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 2004ರಲ್ಲಿ ಶಿಕ್ಷಣ ಸಂಸ್ಥೆಗೆಂದು ಸಂಸದ‌ ಉಮೇಶ್ ಜಾಧವ್ ಪತ್ನಿ ಗಾಯತ್ರಿಯವರ ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ನಿಯಮಬಾಹಿರ ಹಂಚಿಕೆ ಮಾಡಿದ ಕರ್ನಾಟಕ ಹೌಸಿಂಗ್​ ಬೋರ್ಡ್​ಗೆ (KHB) 1 ಲಕ್ಷ ರೂಪಾಯಿ ದಂಡ […]

KHB Site: ಬಿಜೆಪಿ ಸಂಸದ ಉಮೇಶ್ ಜಾಧವ್ ಪತ್ನಿ ಟ್ರಸ್ಟ್‌ಗೆ ಸೈಟ್ ಹಂಚಿಕೆ‌ ರದ್ದು; 1 ಲಕ್ಷ ರೂ ದಂಡ, ಕೋರ್ಟ್​ ಕಿಡಿಕಿಡಿ
ಬಿಜೆಪಿ ಸಂಸದ ಉಮೇಶ್ ಜಾಧವ್ ಪತ್ನಿ ಟ್ರಸ್ಟ್‌ಗೆ ಸೈಟ್ ಹಂಚಿಕೆ‌ ರದ್ದು; 1 ಲಕ್ಷ ರೂ ದಂಡ
Follow us on

ಕಲಬುರಗಿ: ಕಲಬುರಗಿ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಪತ್ನಿ ಟ್ರಸ್ಟ್‌ಗೆ ನೀಡಲಾಗಿದ್ದ ನಿವೇಶನ ಹಂಚಿಕೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದು ಪಡಿಸಿದೆ. ಇನ್ನು, ನಿಯಮಬಾಹಿರ ಹಂಚಿಕೆ ಮಾಡಿದ ಕರ್ನಾಟಕ ಹೌಸಿಂಗ್​ ಬೋರ್ಡ್​ಗೆ (KHB) 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 2004ರಲ್ಲಿ ಶಿಕ್ಷಣ ಸಂಸ್ಥೆಗೆಂದು ಸಂಸದ‌ ಉಮೇಶ್ ಜಾಧವ್ ಪತ್ನಿ ಗಾಯತ್ರಿಯವರ ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ನಿವೇಶನ ಹಂಚಿಕೆ ಮಾಡಲಾಗಿತ್ತು.

ನಿಯಮಬಾಹಿರ ಹಂಚಿಕೆ ಮಾಡಿದ ಕರ್ನಾಟಕ ಹೌಸಿಂಗ್​ ಬೋರ್ಡ್​ಗೆ (KHB) 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 2004ರಲ್ಲಿ ಶಿಕ್ಷಣ ಸಂಸ್ಥೆಗೆಂದು ಸಂಸದ‌ ಉಮೇಶ್ ಜಾಧವ್ ಪತ್ನಿ ಗಾಯತ್ರಿಯವರ ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ನಿವೇಶನ ಹಂಚಿಕೆ ಮಾಡಲಾಗಿತ್ತು.

ಸಂಸದ ಡಾ. ಉಮೇಶ್ ಜಾಧವ್ ಪತ್ನಿ ಗಾಯತ್ರಿಯವರ ಚಾರಿಟಬಲ್ ಟ್ರಸ್ಟ್‌ ಶಾಲೆ ನಿರ್ಮಿಸದಿದ್ದರೂ ಕರ್ನಾಟಕ ಗೃಹ ಮಂಡಳಿ​ ಕ್ರಯಪತ್ರ ಮಾಡಿಕೊಟ್ಟಿತ್ತು. 10 ಕೋಟಿ ರೂಪಾಯಿ ಬೆಲೆಯ ನಿವೇಶನ 3.87 ಲಕ್ಷ ರೂಪಾಯಿಗೆ ಹಂಚಿಕೆಯಾಗಿತ್ತು.

KHB ಕ್ರಮಕ್ಕೆ ಹಂಗಾಮಿ ಸಿಜೆ ಸತೀಶ್‌ಚಂದ್ರ ಶರ್ಮಾ ಗರಂ:

KHB ಕ್ರಮಕ್ಕೆ ಹಂಗಾಮಿ ಸಿಜೆ ಸತೀಶ್‌ಚಂದ್ರ ಶರ್ಮಾ ಗರಂ ಆದ ಪ್ರಸಂಗವೂ ನಡೆದಿದೆ. ಇದು ಯಾವ ರೀತಿಯ ಕರ್ನಾಟಕ ಗೃಹ ಮಂಡಳಿ? ಟೆಂಡರ್ ಇಲ್ಲದೆ ನಿವೇಶನ‌ ಹಂಚಿಕೆ ಮಾಡಲಾಗಿದೆ. ಸರ್ಕಾರದ ಸಂಸ್ಥೆ ಕೆಹೆಚ್‌ಬಿಯೇ ನಿಯಮ ಉಲ್ಲಂಘಿಸಿದೆ. ಸಿಎ‌ ಸೈಟ್ ಹಂಚಿಕೆ ನಿಯಮವನ್ನು ಕೆಹೆಚ್‌ಬಿ ಪಾಲಿಸಿಲ್ಲ. ಸೈಟ್ ಹಿಂದಿರುಗಿಸುವುದಾಗಿ ಟ್ರಸ್ಟ್ ಹೇಳಿತ್ತು. ಇದೀಗ ಹೇಳಿಕೆಯಿಂದ ಹಿಂದೆ ಸರಿದಿರುವುದು ಅಚ್ಚರಿದಾಯಕ. ಇಂತಹ ಹಂಚಿಕೆ ಅರಾಜಕತೆಗೆ ಅವಕಾಶ ಕಲ್ಪಿಸಲಿದೆ. ಬೇಕಾಬಿಟ್ಟಿ ಹಂಚಿಕೆ ಮಾಡಲು ಅವಕಾಶ ಮಾಡಿಕೊಟ್ಟಂತಾಗಲಿದೆ ಎಂದು ಆದೇಶಿಸುತ್ತಾ ನಿವೇಶನ ಹಂಚಿಕೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

30 ದಿನದೊಳಗೆ ನಿವೇಶನ ಹಿಂಪಡೆಯಲು ಆದೇಶಿಸಿrಉವ ಹೈಕೋರ್ಟ್, ಪ್ರಕರಣದಲ್ಲಿ ಪ್ರಧಾನ ಕಾರ್ಯದರ್ಶಿ ಇಲಾಖಾ ವಿಚಾರಣೆ ನಡೆಸಬೇಕು. ತಪ್ಪಿತಸ್ಥರಿಂದ ದಂಡದ‌ ಹಣ ವಸೂಲಿ ಮಾಡಬೇಕು ಎಂದೂ ಕೋರ್ಟ್ ಆದೇಶಿಸಿದೆ.

Also Read:
ಕೋಲಿ, ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವಂತೆ ಲೋಕಸಭೆಯಲ್ಲಿ ಒತ್ತಾಯಿಸಿದ ಸಂಸದ ಉಮೇಶ್ ಜಾಧವ್

Also Read:
ಸಂಸದ ಜಾಧವ್​ಗೆ ಮತ್ತೆ ಅನಾರೋಗ್ಯ, ಜಯದೇವ ಆಸ್ಪತ್ರೆಗೆ ದಾಖಲು

Published On - 1:16 pm, Thu, 30 September 21