ಉತ್ತರ ಕರ್ನಾಟಕದ ಹಲವೆಡೆ ಕರಡಿ ಕಾಟ: ರೇಡಿಯೋ ಕಾಲರ್ ಅಳವಡಿಕೆಗೆ ಯೋಜನೆ

| Updated By: Ganapathi Sharma

Updated on: Dec 12, 2023 | 8:17 AM

ಸ್ವಯಂಸೇವಾ ಸಂಸ್ಥೆಯೊಂದು (NGO) ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅರಣ್ಯ ಇಲಾಖೆಯು ಜಿಪಿಎಸ್ ಸಾಧನವನ್ನು ಅಳವಡಿಸಲು ಸಂಸ್ಥೆಗೆ ಸಹಾಯ ಮಾಡಲಿದೆ. ಇಲ್ಲಿಯವರೆಗೆ, ಒಂಬತ್ತು ಕರಡಿಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ.

ಉತ್ತರ ಕರ್ನಾಟಕದ ಹಲವೆಡೆ ಕರಡಿ ಕಾಟ: ರೇಡಿಯೋ ಕಾಲರ್ ಅಳವಡಿಕೆಗೆ ಯೋಜನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 12: ರಾಜ್ಯದಲ್ಲಿ ಮಾನವ – ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಸನ ಭಾಗದಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ (Radio collar) ಅಳವಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಪ್ರಗತಿಯಲ್ಲಿದೆ. ಈ ಮಧ್ಯೆ, ಉತ್ತರ ಕರ್ನಾಟಕ ಭಾಗದಲ್ಲಿ ಕರಡಿ ದಾಳಿಗಳಿಂದ ಜನರು ಕಂಗಾಲಾಗಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಕರಡಿಗಳಿಗೂ (Sloth bears) ರೇಡಿಯೋ ಕಾಲರ್ ಅಳವಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಪ್ರಾಣಿಗಳ ಚಲನವಲನದ ಮೇಲೆ ನಿಗಾ ಇಡುವ ಮತ್ತು ಮನುಷ್ಯರೊಂದಿಗಿನ ಸಂಘರ್ಷವನ್ನು ತಡೆಯುವ ಐದು ವರ್ಷಗಳ ಯೋಜನೆಯ ಭಾಗವಾಗಿ ಕರಡಿಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸ್ವಯಂಸೇವಾ ಸಂಸ್ಥೆಯೊಂದು (NGO) ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅರಣ್ಯ ಇಲಾಖೆಯು ಜಿಪಿಎಸ್ ಸಾಧನವನ್ನು ಅಳವಡಿಸಲು ಸಂಸ್ಥೆಗೆ ಸಹಾಯ ಮಾಡಲಿದೆ. ಇಲ್ಲಿಯವರೆಗೆ, ಒಂಬತ್ತು ಕರಡಿಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಗುಡೇಕೋಟೆ ಕರಡಿ ಅಭಯಾರಣ್ಯದಲ್ಲಿ ಇತ್ತೀಚೆಗೆ ಒಂದು ಗಂಡು ಕರಡಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ.

ಬಳ್ಳಾರಿ, ಕೊಪ್ಪಳ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕರಡಿಗಳ ಚಲನವಲನಗಳನ್ನು ಅರ್ಥಮಾಡಿಕೊಳ್ಳುವುದು ರೇಡಿಯೋ ಕಾಲರ್ ಅಳವಡಿಕೆ ಉದ್ದೇಶವಾಗಿದೆ ಎಂದು ಎನ್‌ಜಿಒ ಹೇಳಿದೆ. ಇದು ಮಾನವ-ಕರಡಿಗಳ ಸಂಘರ್ಷಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸಲಿದೆ.

ಇದನ್ನೂ ಓದಿ: ಕರಡಿ ಕಾಟಕ್ಕೆ ಕೊಪ್ಪಳ ಜನ ಹೈರಾಣ… ಕರಡಿ ಧಾಮ ಆರಂಭಕ್ಕೆ ಸಿಕ್ಕಿಲ್ಲ ಗ್ರೀನ್ ಸಿಗ್ನಲ್, ಮುಂದೇನು?

ಈ ಮಧ್ಯೆ, ಕರಡಿ ಕಾಟಕ್ಕೆ ಕೊಪ್ಪಳ ಜನ ಕಂಗಾಲಾಗಿದ್ದಾರೆ. ಸಂಜೆಯಾದರೆ ತಮ್ಮ ಜಮೀನಿಗೂ ಹೋಗಲು ಹೆದರುವಂತಾಗಿದೆ ರೈತರ ಸ್ಥಿತಿ. ಇತ್ತೀಚೆಗೆ ಅರಣ್ಯ ಭೂಮಿ ಒತ್ತುವರಿ, ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ, ಅನೇಕ ಫ್ಯಾಕ್ಟರಿಗಳು ಆರಂಭವಾಗಿರುವುದರಿಂದ ಕರಡಿಗಳ ಓಡಾಟಕ್ಕೆ, ಅವುಗಳ ವಾಸಕ್ಕೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗುತ್ತಿದ್ದು, ಅವು ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಆಹಾರ ಮತ್ತು ನೀರು ಹುಡುಕಿಕೊಂಡು ಬೆಟ್ಟಗುಡ್ಡಗಳಿಂದ ಹೊರ ಬರುವ ಕರಡಿಗಳು, ತಮಗೆ ಮಾನವ ತೊಂದರೆ ಕೊಡಬಹುದು ಎಂಬ ಭೀತಿಯಿಂದ ಜನರ ಮೇಲೆ ದಾಳಿ ಮಾಡುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ