ಸಿದ್ದರಾಮಯ್ಯನವರೇ.. ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ, ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿ ಮರೀಬೇಡಿ -ಯತ್ನಾಳ್
ಸಿದ್ದರಾಮಯ್ಯನವರೇ.. ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ, ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿ ಮರೀಬೇಡಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ, ಡಿ.12: ವಿಪಕ್ಷ ನಾಯಕ ಆರ್.ಅಶೋಕ್ & ಯತ್ನಾಳ್ ವಿರುದ್ಧ ಸಿಎಂ ಟ್ವೀಟ್ ವಿಚಾರಕ್ಕೆ ಸಂಬಂಧಿಸಿ ಸಿಎಂ ಟ್ವೀಟ್ಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ (Siddaramaiah).. ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ. ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿಯನ್ನು ಮಾಡದೇ ಇರಬೇಡಿ ಎಂದು ಎಚ್ಚರಿಸಿದ್ದಾರೆ. ಮತ್ತೊಂದೆಡೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಬಿ.ವೈ ವಿಜಯೇಂದ್ರ, ಬಿಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಯತ್ನಾಳ್ ಟ್ವೀಟ್ ಹೀಗಿದೆ
ಸಿಎಂ ಸಿದ್ದರಾಮಯ್ಯನವರೇ.. ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ. ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿಯನ್ನು ಮಾಡದೇ ಇರಬೇಡಿ. ಬಿ.ಕೆ.ಹರಿಪ್ರಸಾದ್ ಅವರು ಮಾಧ್ಯಮದಲ್ಲಿ ಯಾರೋ ಹೊರಗಿನಿಂದ ಬಂದವರು ಅಂತಾ ಬೈಯ್ಯುತ್ತಿದ್ದರು. ಮೂಲ ಕಾಂಗ್ರೆಸ್ಸಿಗರು ನಿಮ್ಮನ್ನು ಹೊರಗೆ ಹಾಕಲು ಸಂಚು ರೂಪಿಸುತ್ತಿರುವಂತಿದೆ. ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಯತ್ನಾಳ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾರ್! ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ, ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿ ಮಾಡದೇ ಇರಬೇಡಿ.
ಹಾಗಿರಲಿ, ಬಿಕೆ ಹರಿಪ್ರಸಾದ್ “ಯಾರೋ ಹೊರಗಿನ ಬಂದವರು” ಅಂತ ಬೈತಿದ್ದು ಟಿವಿಯಲ್ಲಿ ನೋಡಿದೆ.
ಮೂಲ ಕಾಂಗ್ರೆಸ್ಸಿಗರು ನಿಮ್ಮನ್ನು ಹೊರಗೆ ಹಾಕಲು ಸಂಚು ರೂಪಿಸುತ್ತಿರುವಂತೆ ಇದೆ ನೋಡಿಕೊಳ್ಳಿ. https://t.co/pqzsEv7ttz
— Basanagouda R Patil (Yatnal) (@BasanagoudaBJP) December 11, 2023
ಯಡಿಯೂರಪ್ಪ ಬ್ಲ್ಯಾಕ್ ಮೇಲ್ ಮಾಡಿದ್ರು
ಮತ್ತೊಂದೆಡೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎದುರು ವಿಜಯೇಂದ್ರ ಕುರಿತು ಯತ್ನಾಳ್ ಚರ್ಚೆ ಮಾಡಿದ್ದಾರೆ. ನಿನ್ನೆ ಬೆಳಗಾವಿಯಲ್ಲಿ ಕೂಡಲ ಸಂಗಮ ಸ್ವಾಮೀಜಿ ಭೇಟಿ ಮಾಡಿದ ಯತ್ನಾಳ್ ಅವರು ವಿಜಯೇಂದ್ರ ಕುತಂತ್ರ ಮಾಡಿದ್ದಾರೆ ಅಂತಾ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಯಡಿಯೂರಪ್ಪ ಹೈಕಮಾಂಡ್ ಬ್ಲ್ಯಾಕ್ ಮೆಲ್ ಮಾಡಿ ಈಗ ಮತ್ತೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹೈಕಮಾಂಡ್ ಕೂಡ ಯಾಕೆ ಹೆದರಿದ್ದಾರೆ ಗೊತ್ತಿಲ್ಲ. ಸುಮ್ಮನೆ ಏನೂ ಶಿಸ್ತು, ಶಿಸ್ತು ಅಂತಾರೆ ನಾವೇನು ಗುಲಾಮರಾ. ನಮ್ಮದೇನು ಶಕ್ತಿ ಇಲ್ಲವೇ, ನಮ್ಮ ಹಿಂದೇನು ಜನ ಇದ್ದಾರೆ. ನೀವೆಲ್ಲ ಗಟ್ಟಿಯಾಗಿ ನಿಲ್ಲಿ ಎಲ್ಲರನ್ನೂ ಸರಿ ಮಾಡೋಣ. ನನಗೆ ಯಾವುದೇ ಆಸೆ ಇಲ್ಲ. ಪ್ರಮಾಣಿಕ ವ್ಯಕ್ತಿ ಬೇಕಿದ್ರು ನನ್ನ ವಿಪಕ್ಷ ಮಾಡ್ತಿದ್ರು. ಮೇಲಿನವರು ಯಾಕೆ ಹೆದರಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಯತ್ನಾಳ್ ಸ್ವಾಮಿಜಿಗಳ ಬಳಿ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಸಿಐಡಿ ಪೊಲೀಸರಿಗೆ ಶ್ರೀಕಿಯದ್ದೇ ತಲೆನೋವು: ವಿಚಾರಣೆಗೆ ಹಾಜರಾಗದೆ ಕುಂಟು ನೆಪ ಹೇಳುತ್ತಿರುವ ಬಿಟ್ ಕಾಯಿನ್ ಕಿಂಗ್ಪಿನ್
ಯಡಿಯೂರಪ್ಪ ಬ್ಲ್ಯಾಕ್ ಮೇಲ್ ಮಾಡಿದ್ರು. ಲೋಕಸಭಾ ಚುನಾವಣೆ ಪ್ರಚಾರಕ್ಕೆ ರಾಜ್ಯದಲ್ಲಿ ಎಲ್ಲಿಯೂ ಹೋಗಲ್ಲ ಎಂದು ಹೆದರಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡ್ತಿನಿ ಉಳಿದ ಕಡೆ ಹೋಗಲ್ಲ ಅಂದ್ರು. ಸೋಮಣ್ಣನನ್ನು ಸೋಲಿಸಿದ್ದು ಯಾರು? ಲಿಂಗಾಯತರನ್ನು ಅಲ್ಲಿಗೆ ಕಳಸಿ ಸೋಮಣ್ಣನನ್ನು ಬಲಿ ಕೊಟ್ಟರು. ಸೋಮಣ್ಣನನ್ನು ಗೋವಿಂದರಾಜ್ ನಗರದಲ್ಲಿ 20-25 ಸಾವಿರ ಮತಗಳಿಂದ ಗೆಲ್ಲಬೇಕಿತ್ತು. ಆದರೆ ಸೋಮಣ್ಣನನ್ನು ಬಲಿಪಶು ಮಾಡಿದ್ರು. ಆಶ್ಚರ್ಯ ಎಂದರೇ ಬೊಮ್ಮಾಯಿಯನ್ನು ಸೋಲಿಸಲು ವಿಜಯೇಂದ್ರ ಹಣ ಕಳಿಸಿದ್ರು. ಈಗ ಅವನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿದ್ದಾನೆ. ಬೊಮ್ಮಾಯಿ ಅವರೇ ವಿಜಯೇಂದ್ರ ಹಣ ಕಳಿಸಿದ ಬಗ್ಗೆ ನನಗೆ ಹೇಳಿದ್ರು. ಬೊಮ್ಮಾಯಿ ಅವರು ಯಾವುದಾದ್ರೂ ದೇವರ ಬಳಿ ಬರಲಿ ಒಮ್ಮೆ ಸತ್ಯ ಹೊರಬರಬೇಕು. ಅಪ್ಪ, ಮಕ್ಕಳು ಏನ್ ನಡೆಸಿದ್ದಾರೆ ಎಂಬುದು ಗೊತ್ತಾಗಬೇಕು. ತಮ್ಮ ವಿರುದ್ಧ ವಿಕ್ ಕ್ಯಾಂಡೆಟ್ ಹಾಕಿಕೊಂಡ್ರು. ಅಲ್ಲಿ ಸಿದ್ದರಾಮಯ್ಯಗೆ ಸಪೋರ್ಟ್ ಮಾಡಿದ್ರು. ಕನಕಪುರದಲ್ಲಿ ಅವರಿಬ್ಬರದು ಹೊಂದಾಣಿಕೆ ಇದೆ. ಹಿಂಗೆಲ್ಲ ಮಾಡಿ ನಮ್ಮ ಹೆಸರನ್ನು ಕೆಡಿಸುವ ಪ್ರಯತ್ನ ಮಾಡಿದ್ರು ರಾಜ್ಯದಲ್ಲಿ ಎಂದು ತಿಳಿಸಿದ್ದಾರೆ.
ಮೀಸಲಾತಿ ಬಗ್ಗೆ ಶಾಸಕ ವಿನಯ್ ಕುಲಕರ್ಣಿ ಜೊತೆಗೆ ಚರ್ಚೆ ಮಾಡಿದ್ದೇನೆ. ಬಿಜೆಪಿ ಸರ್ಕಾರ ಇದ್ದಾಗ ನಾನು ನಾಯಕತ್ವ ವಹಿಸಿದೆ. ಈಗ ನೀವು ನಾಯಕತ್ವ ವಹಿಸಿ ಸಚಿವ ಸ್ಥಾನ ತಲೆಯಿಂದ ತೆಗೆದು ಹಾಕಿ. ಸಮಾಜಕ್ಕಾಗಿ ನೀವು ಸಚಿವ ಸ್ಥಾನ ತ್ಯಾಗ ಮಾಡಿ ಎಂದು ಹೇಳಿದೆ. ನನ್ನ ಮಾತಿಗೆ ವಿನಯ್ ಕುಲಕರ್ಣಿ ಹ್ಮೂಂ ಅಂದ್ರು. ನಾನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಹೇಳಿದೆ. ಆದರೆ ಅವರು ನಮ್ಮ ಕಾಂಗ್ರೆಸ್ ನವರು ಯಾವ ಕಾಲಕ್ಕೂ ಮೀಸಲಾತಿ ಕೊಡಲ್ಲ ಅಂದ್ರು. ನೇರವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹಿಂಗೆ ಹೇಳಿದ್ರು. ಕೊಡದಿಲ್ಲ ಅಂದ್ರೆ ಬಿಜೆಪಿ ಇದ್ದಾಗ ಹೋರಾಟ ಮಾಡೊದು. ಕಾಂಗ್ರೆಸ್ ಬಂದ್ ಮೇಲೆ ಖುರ್ಚಿ ಅಷ್ಟೇ ನೋಡಿಕೊಳ್ಳುವುದು. ಮುಸ್ಲಿಂ ಮೀಸಲಾತಿ ಅಸಂವಿಧಾನಿಕವಾಗಿದೆ. ಅಮಿತ್ ಶಾ ತೆಲಂಗಾಣದಲ್ಲಿ ಹೇಳಿದ್ರು. ಮುಸ್ಲಿಂ ಮೀಸಲಾತಿ ತೆಗೆದು ಹಿಂದುಗಳಿಗೆ ಕೊಡ್ತೇವಿ ಅಂದ್ರು. ಇವರೇ ಪಿಐಎಲ್ ಹಾಕಿಸಿದ್ರು, ಅಂಜುಮನ್ ಸಂಸ್ಥೆವರ ಕಡೆಯಿಂದ ಪಿಐಎಲ್ ಹಾಕಿಸಿದ್ದಾರೆ. ನಾವು ಹೋರಾಟಕ್ಕೆ ಬಂದರೇ ನೇರವಾಗಿ ಕೇಳ್ತಿವಿ. ಇದರಿಂದ ಜಗಳ ಹತ್ತುತ್ತೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿಯಾಗಿ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:06 am, Tue, 12 December 23