AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಸೂಚಿತ ಜಾತಿಗಳ ಉಪಹಂಚಿಕೆ ವಿಧೇಯಕ ಮಂಡನೆ, ಎಸ್​ಇಪಿ ಟಿಎಸ್​ಪಿ ಹಣ ಇತರ ಉದ್ದೇಶಕ್ಕೆ ಬಳಸುವಂತಿಲ್ಲ

ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಗದ್ದಲದ ನಡುವೆಯೂ ಇಂದು ಬೆಳಗಾವಿ ಅಧಿವೇಶನದಲ್ಲಿ ಹಲವು ವಿಧೇಯಕಗಳು ಮಂಡನೆಯಾದವು, ಇನ್ನು ಕೆಲವು ವಿಧೇಯಕಗಳನ್ನು ಬಹುತೇಕ ಚರ್ಚೆ ಇಲ್ಲದೆ ಅಂಗೀಕರಿಸಲಾಯಿತು. ಇದರಲ್ಲಿ ಅನುಸೂಚಿತ ಜಾತಿಗಳ ಉಪಹಂಚಿಕೆ ವಿಧೇಯಕ ಮಂಡನೆ ಮಾಡಲಾಯ್ತು.

ಅನುಸೂಚಿತ ಜಾತಿಗಳ ಉಪಹಂಚಿಕೆ ವಿಧೇಯಕ ಮಂಡನೆ, ಎಸ್​ಇಪಿ ಟಿಎಸ್​ಪಿ ಹಣ ಇತರ ಉದ್ದೇಶಕ್ಕೆ ಬಳಸುವಂತಿಲ್ಲ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 11, 2023 | 10:37 PM

ಬೆಳಗಾವಿ, (ಡಿಸೆಂಬರ್ 11):  ಆಯವ್ಯಯ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ(ತಿದ್ದುಪಡಿ) ವಿಧೇಯಕ ಮಂಡನೆಯಾಗಿದೆ. ಇದರೊಂದಿಗೆ ಎಸ್​ಇಪಿ ಟಿಎಸ್​ಪಿ ಹಣ ಇತರ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ. ಮೂಲ‌ ಅಧಿನಿಯಮದ 7ಡಿ ಸೆಕ್ಷನ್ ರದ್ದುಪಡಿಸುವ ವಿಧೇಯಕ ಇದಾಗಿದೆ. ಈ ಹಿಂದೆ 7ಡಿ ಅನ್ವಯ ಇತರ ಉದ್ದೇಶಕ್ಕೆ ಹಣ ಬಳಕೆಗೆ ಅವಕಾಶವಿತ್ತು. ಆದ್ರೆ, ಇದೀಗ ಅವಕಾಶವಿಲ್ಲ.

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಳಗಾವಿ ಅಧಿವೇಶನದಲ್ಲೇ ಈ ವಿಧೇಯಕ ಅಂಗೀಕಾರಗೊಂಡಿತ್ತು. ಆದ್ರೆ, ಇದೀಗ ಕೆಲವು ಬದಲಾವಣೆಗೊಳಿಂದಿಗೆ ಇಂದು (ಡಿಸೆಂಬರ್ 11) ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ತಿದ್ದುಪಡಿ ವಿಧೇಯಕ ಮಂಡನೆ ಮಾಡಿದರು.

ಇದನ್ನೂ ಓದಿ: ಕೊನೆಗೂ ಕರ್ನಾಟಕ ವಕೀಲರ ಸಂರಕ್ಷಣಾ ವಿಧೇಯಕ ಮಂಡನೆ: ನುಡಿದಂತೆ ನಡೆದ ಸಿದ್ದರಾಮಯ್ಯ

ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ-2013 ಅನ್ನು ತಿದ್ದುಪಡಿ ತಂದು ಉಪ ಮುಖ್ಯಮಂತ್ರಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರನ್ನ ರಾಜ್ಯ ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿಗೆ ಪದನಿಮಿತ್ತ ಸದಸ್ಯರಾಗಿ ಸೇರಿಸಲು ಅವಕಾಶ ಕಲ್ಪಿಸಲು ವಿಧೇಯಕವನ್ನು ಮಂಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:36 pm, Mon, 11 December 23