AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಐಡಿ ಪೊಲೀಸರಿಗೆ ಶ್ರೀಕಿಯದ್ದೇ ತಲೆನೋವು: ವಿಚಾರಣೆಗೆ ಹಾಜರಾಗದೆ ಕುಂಟು ನೆಪ ಹೇಳುತ್ತಿರುವ ಬಿಟ್​ ಕಾಯಿನ್​ ಕಿಂಗ್​ಪಿನ್​

ಬಿಟ್​​ ಕಾಯಿನ್ ಹಗರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಹಗರಣದ ಆರೋಪಿ ಶ್ರೀಕಿ ಸಿಐಡಿ ತನಿಖೆಗೆ ಹಾಜರಾಗದೆ ಕಳ್ಳಾಟವಾಡುತ್ತಿದ್ದಾನೆ. ಸಿಐಡಿ ಪೊಲೀಸರು 5-6 ಬಾರಿ ನೋಟಿಸ್ ನೀಡಿದರೂ ಶ್ರೀಕಿ ವಿಚಾರಣೆಗೆ ಹಾಜರಾಗುತ್ತಿಲ್ಲ. ಪ್ರತಿಬಾರಿಯೂ ಒಂದೊಂದು ಕಾರಣ ನೀಡುತ್ತಿದ್ದಾನೆ.

ಸಿಐಡಿ ಪೊಲೀಸರಿಗೆ ಶ್ರೀಕಿಯದ್ದೇ ತಲೆನೋವು: ವಿಚಾರಣೆಗೆ ಹಾಜರಾಗದೆ ಕುಂಟು ನೆಪ ಹೇಳುತ್ತಿರುವ ಬಿಟ್​ ಕಾಯಿನ್​ ಕಿಂಗ್​ಪಿನ್​
ಶ್ರೀಕಿ
Follow us
ರಾಚಪ್ಪಾಜಿ ನಾಯ್ಕ್
| Updated By: ವಿವೇಕ ಬಿರಾದಾರ

Updated on: Dec 12, 2023 | 8:38 AM

ಬೆಂಗಳೂರು, ಡಿಸೆಂಬರ್​​ 12: ಬಿಟ್​​ ಕಾಯಿನ್ (Bitcoin)​ ಹಗರಣದ ತನಿಖೆಯನ್ನು ಸಿಐಡಿ (CID) ನಡೆಸುತ್ತಿದೆ. ಹಗರಣದ ಆರೋಪಿ ಶ್ರೀಕಿ (Sriki) ಸಿಐಡಿ ತನಿಖೆಗೆ ಹಾಜರಾಗದೆ ಕಳ್ಳಾಟವಾಡುತ್ತಿದ್ದಾನೆ. ಸಿಐಡಿ ಪೊಲೀಸರು 5-6 ಬಾರಿ ನೋಟಿಸ್ ನೀಡಿದರೂ ಶ್ರೀಕಿ ವಿಚಾರಣೆಗೆ ಹಾಜರಾಗುತ್ತಿಲ್ಲ. ಪ್ರತಿಬಾರಿಯೂ ಒಂದೊಂದು ಕಾರಣ ನೀಡುತ್ತಿದ್ದಾನೆ. ತಂದೆಗೆ ಹುಷಾರಿಲ್ಲ, ತಾಯಿಗೆ ಹುಷಾರಿಲ್ಲ, ನನಗೆ ಹುಷಾರಿಲ್ಲ ಎಂದು ಕಾರಣ ನೀಡಿ ಸಿಐಡಿ ಪೊಲೀಸರ ವಿಚಾರಣೆಗೆ ಹಾಜರಾಗುತಿಲ್ಲ.

ಈ ಹಿಂದೆಯೂ ನಾಟಕವಾಡಿದ್ದ ಶ್ರೀಕಿ

ಶ್ರೀಕಿ ಒಂದೂವರೆ ತಿಂಗಳ ಹಿಂದೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಹಾಗೂ ಮಲಗಲು ಮನೆಗೆ ಹೋಗುತ್ತಿದ್ದನು. ಆಗ ವಿಚಾರಣೆ ನಡೆಸಲು ಸಿಐಡಿ ತಂಡ ನಿಮ್ಹಾನ್ಸ್​ಗೆ ಹೋದರೇ ಬೆದರಿಕೆ ಹಾಕಿದ್ದನು. ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದನು. ಶ್ರೀಕಿ ಕಳ್ಳಾಟದಿಂದ ಬೇಸೆತ್ತು ಸಿಐಡಿ ಅಧಿಕಾರಿಗಳು ಶ್ರೀಕಿಯ ಹೆಲ್ತ್ ರಿಪೋರ್ಟ್ ನೀಡುವಂತೆ ವೈದ್ಯರಿಗೆ ಕೇಳಿದ್ದರು. ಆಗ ವೈದ್ಯರು ಶ್ರೀಕಿ ಸಹವಾಸವೇ ಬೇಡವೆಂದು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದರು. ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದರೂ ಹಾಜರಾಗುತ್ತಿಲ್ಲ.

ಇದನ್ನೂ ಓದಿ: ಬಿಟ್​​ಕಾಯಿನ್​ ಕಿಂಗ್​ಪಿನ್​ ಜಾಗತಿಕ ಹ್ಯಾಕರ್​ ಶ್ರೀಕಿ ಪೊಲೀಸರಿಗೆ ಲಾಕ್​ ಆಗ್ತಿದ್ದಂತೆ ತನ್ನ ಬಗ್ಗೆ ಹೇಳಿದ್ದೇನು? ಇನ್​ಸೈಡ್​​ ಡಿಟೆಲ್ಸ್​​

ಏನಿದು ಪ್ರಕರಣ? ಸಿಐಡಿ ತನಿಖೆ ಏಕೆ?

2015ರ ಡ್ರಗ್ಸ್ ಕೇಸ್‌ನಲ್ಲಿ ಶ್ರೀಕಿಯನ್ನು ಬಂಧಿಸಲಾಗಿತ್ತು. ಈ ಕೇಸ್ ತನಿಖೆ ವೇಳೆ ಬಿಟ್‌ಕಾಯಿನ್ ಪ್ರಕರಣ ಬೆಳಕಿಗೆ ಬಂದಿತ್ತು. 2020ರಲ್ಲಿ ಸುಮಾರು 1000 ಕೋಟಿ ಹಗರಣದ ಬಿಟ್‌ಕಾಯಿನ್ ಕೇಸ್‌ನಲ್ಲಿ ಶ್ರೀಕಿ ಬಂಧನವಾಗಿತ್ತು. ಈ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಸಿಸಿಬಿ ಪೊಲೀಸರ ವಿರುದ್ಧ ದಾಖಲೆ ತಿರುಚಿರುವ ಆರೋಪಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಟ್​ ಕಾಯಿನ್​ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ