ಕಾಂಗ್ರೆಸ್ ಯಾವ ಕಾಲಕ್ಕೂ ಮೀಸಲಾತಿ ಕೊಡಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು -ಯತ್ನಾಳ್ ಆರೋಪ
ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಬಸನಗೌಡ ಪಾಟೀಲ್ ಯತ್ನಾಳ್ ಹಲವು ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಈ ವೇಳೆ ಮೀಸಲಾತಿ ಬಗ್ಗೆಯೂ ಮಾತನಾಡಿದ್ದಾರೆ. ಕಾಂಗ್ರೆಸ್ ನವರು ಯಾವ ಕಾಲಕ್ಕೂ ಮೀಸಲಾತಿ ಕೊಡಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೇರವಾಗಿ ಹೇಳಿದ್ದಾರೆ ಎಂದು ಯತ್ನಾಳ್ ಸ್ವಾಮೀಜಿ ಮುಂದೆ ಹೇಳಿದ್ದಾರೆ.
ಬೆಳಗಾವಿ, ಡಿ.12: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ಬಸವ ಜಯಮೃತ್ಯುಂಜಯ ಸ್ವಾಮೀಜಿ (Basavajaya Mruthyunjaya Swamiji) ಅವರನ್ನು ಭೇಟಿ ಮಾಡಿ ಸ್ವಪಕ್ಷೀಯರ ವಿರುದ್ಧವೇ ಆರೋಪಗಳ ಸುರಿಮಳೆಗೈದಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಹಲವು ನಾಯಕರ ಸೋಲಿಗೆ ಬಿವೈ ವಿಜಯೇಂದ್ರ ಅವರೇ ಕಾರಣ ಎಂಬ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಇದರ ಜೊತೆಗೆ ಮೀಸಲಾತಿ ಬಗ್ಗೆ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ನವರು ಯಾವ ಕಾಲಕ್ಕೂ ಮೀಸಲಾತಿ ಕೊಡಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೇರವಾಗಿ ಹೇಳಿದ್ದಾರೆ ಎಂದು ಯತ್ನಾಳ್ ಸ್ವಾಮೀಜಿ ಮುಂದೆ ಹೇಳಿದ್ದಾರೆ.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಬಸನಗೌಡ ಪಾಟೀಲ್ ಯತ್ನಾಳ್ ಹಲವು ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಈ ವೇಳೆ ಮೀಸಲಾತಿ ಬಗ್ಗೆಯೂ ಮಾತನಾಡಿದ್ದಾರೆ. ಮೀಸಲಾತಿ ಬಗ್ಗೆ ಶಾಸಕ ವಿನಯ್ ಕುಲಕರ್ಣಿ ಜೊತೆಗೆ ಚರ್ಚೆ ಮಾಡಿದ್ದೇನೆ. ಬಿಜೆಪಿ ಸರ್ಕಾರ ಇದ್ದಾಗ ನಾನು ನಾಯಕತ್ವ ವಹಿಸಿದೆ. ಈಗ ನೀವು ನಾಯಕತ್ವ ವಹಿಸಿ ಸಚಿವ ಸ್ಥಾನ ತಲೆಯಿಂದ ತೆಗೆದು ಹಾಕಿ. ಸಮಾಜಕ್ಕಾಗಿ ನೀವು ಸಚಿವ ಸ್ಥಾನ ತ್ಯಾಗ ಮಾಡಿ ಎಂದು ಹೇಳಿದೆ. ನನ್ನ ಮಾತಿಗೆ ವಿನಯ್ ಕುಲಕರ್ಣಿ ಹ್ಮೂಂ ಅಂದ್ರು. ನಾನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಹೇಳಿದೆ. ಆದರೆ ಅವರು ನಮ್ಮ ಕಾಂಗ್ರೆಸ್ ನವರು ಯಾವ ಕಾಲಕ್ಕೂ ಮೀಸಲಾತಿ ಕೊಡಲ್ಲ ಅಂದ್ರು. ನೇರವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹಿಂಗೆ ಹೇಳಿದ್ರು.
ಇದನ್ನೂ ಓದಿ: ಸಿದ್ದರಾಮಯ್ಯನವರೇ.. ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ, ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿ ಮರೀಬೇಡಿ -ಯತ್ನಾಳ್
ಕೊಡದಿಲ್ಲ ಅಂದ್ರೆ ಬಿಜೆಪಿ ಇದ್ದಾಗ ಹೋರಾಟ ಮಾಡೊದು. ಕಾಂಗ್ರೆಸ್ ಬಂದ್ ಮೇಲೆ ಖುರ್ಚಿ ಅಷ್ಟೇ ನೋಡಿಕೊಳ್ಳುವುದು. ಮುಸ್ಲಿಂ ಮೀಸಲಾತಿ ಅಸಂವಿಧಾನಿಕವಾಗಿದೆ. ಅಮಿತ್ ಶಾ ತೆಲಂಗಾಣದಲ್ಲಿ ಹೇಳಿದ್ರು. ಮುಸ್ಲಿಂ ಮೀಸಲಾತಿ ತೆಗೆದು ಹಿಂದೂಗಳಿಗೆ ಕೊಡ್ತೇವಿ ಅಂದ್ರು. ಇವರೇ ಪಿಐಎಲ್ ಹಾಕಿಸಿದ್ರು, ಅಂಜುಮನ್ ಸಂಸ್ಥೆಯವರ ಕಡೆಯಿಂದ ಪಿಐಎಲ್ ಹಾಕಿಸಿದ್ದಾರೆ. ನಾವು ಹೋರಾಟಕ್ಕೆ ಬಂದರೇ ನೇರವಾಗಿ ಕೇಳ್ತಿವಿ. ಇದರಿಂದ ಜಗಳ ಹತ್ತುತ್ತೆ. ಕಾಂಗ್ರೆಸ್ ಸರ್ಕಾರ ಇರೋದ್ರಿಂದ ನೀವು ಹೋರಾಟ ಮಾಡಿ ಎಂದು ಬರದೇ ಇರೋವರು ಈಗ ಬರ್ತಾ ಇದ್ದಾರೆ. ಸಮಾಜಕ್ಕೆ 2 ಲಕ್ಷ ಕೊಡಿ ಅಂದಾಗ ಮಗಳ ಮದುವೆ ಇದೆ ಅಂತಾ ಹಣ ಕೊಡಲಿಲ್ಲ. ಇಂತವರು ಈಗ ಹೋರಾಟಕ್ಕೆ ಬರ್ತಿದ್ದಾರೆ. ಸಮಾಜದ ಕಂಟ್ರೋಲ್ ತೆಗೆದುಕೊಳ್ಳಲು ಬರ್ತಿದ್ದಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಬಳಿ ಯತ್ನಾಳ್ ಸ್ಫೋಟಕ ಮಾತುಗಳನ್ನಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:44 am, Tue, 12 December 23