AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ.75 ರಷ್ಟು ಬಿಟ್​ಕಾಯಿನ್ ಮಾರಾಟ ಮಾಡಿದ ಟೆಸ್ಲಾ: ಎಲಾನ್ ಮಸ್ಕ್​ ನಿಗೂಢ ನಡೆ

Bitcoin: ಟೆಸ್ಲಾ ಕಂಪೆನಿಯು ತನ್ನ ಬ್ಯಾಲೆನ್ಸ್ ಶೀಟ್‌ನಲ್ಲಿ 218 ಮಿಲಿಯನ್ ಡಾಲರ್​ ಮೌಲ್ಯದ ನಿವ್ವಳ ಡಿಜಿಟಲ್ ಆಸ್ತಿಯನ್ನು ಹೊಂದಿದೆ ಎಂದು ತಿಳಿಸಿದೆ.

ಶೇ.75 ರಷ್ಟು ಬಿಟ್​ಕಾಯಿನ್ ಮಾರಾಟ ಮಾಡಿದ ಟೆಸ್ಲಾ: ಎಲಾನ್ ಮಸ್ಕ್​ ನಿಗೂಢ ನಡೆ
Elon Musk
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jul 21, 2022 | 2:24 PM

ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಕ್ರಿಪ್ಟೋಕರೆನ್ಸಿ ಕ್ಷೇತ್ರದಲ್ಲಿ ಅಚ್ಚರಿಯ ಹೆಜ್ಜೆಯನ್ನಿಟ್ಟಿದ್ದಾರೆ. ಮಸ್ಕ್ ಅವರ ಒಡೆತನದಲ್ಲಿರುವ ಎಲೆಕ್ಟ್ರಿಕ್ ಕಾರು ತಯಾರಕ ಕಂಪೆನಿ ಟೆಸ್ಲಾ (Tesla) ತನ್ನ ಬಿಟ್‌ಕಾಯಿನ್ ಹೂಡಿಕೆ ಸ್ಟಾಕ್ ಅನ್ನು ಕಡಿಮೆ ಮಾಡಿದೆ. ಅಂದರೆ ಕಂಪನಿಯು ತನ್ನ ಒಟ್ಟು ಬಿಟ್‌ಕಾಯಿನ್ ಹೂಡಿಕೆಯ ಸ್ಟಾಕ್​​ನಿಂದ ಶೇ. 75 ರಷ್ಟನ್ನು ಮಾರಾಟ ಮಾಡಿದೆ. ನಾವು ಸುಮಾರು 75% ಬಿಟ್‌ಕಾಯಿನ್ ಹೂಡಿಕೆ ಸ್ಟಾಕ್​ ಅನ್ನು ಫ್ಲಾಟ್ ಕರೆನ್ಸಿಗೆ ಪರಿವರ್ತಿಸಿದ್ದೇವೆ ಎಂದು ಷೇರುದಾರರ ಪತ್ರದಲ್ಲಿ ಟೆಸ್ಲಾ ಕಂಪೆನಿಯ ಸಿಇಒ ಎಲಾನ್ ಮಸ್ಕ್ ತಿಳಿಸಿದ್ದಾರೆ.

ಅದರಂತೆ ಎರಡನೇ ತ್ರೈಮಾಸಿಕದ ಅಂತ್ಯದ ವೇಳೆಗೆ, ಸರಿಸುಮಾರು 75 ಪ್ರತಿಶತ ಬಿಟ್​​ಕಾಯಿನ್​ ಅನ್ನು ಫಿಯಟ್ ಕರೆನ್ಸಿಯಾಗಿ ಪರಿವರ್ತಿಸಿದ್ದೇವೆ. ಈ ಮೂಲಕ ಬ್ಯಾಲೆನ್ಸ್ ಶೀಟ್‌ಗೆ ಬಿಟ್​ಕಾಯಿನ್​ ಅನ್ನು 936 ಮಿಲಿಯನ್ ಡಾಲರ್ ನಗದಾಗಿ ಪರಿವರ್ತಿಸಲಾಗಿದೆ ಎಂದು ಟೆಸ್ಲಾ ಕಂಪೆನಿಯು ಷೇರುದಾರರಿಗೆ ಬಿಡುಗಡೆ ಮಾಡಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಟೆಸ್ಲಾ ಕಂಪೆನಿಯು 2021 ರಲ್ಲಿ ಬಿಟ್‌ಕಾಯಿನ್‌ನಲ್ಲಿ 1.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಕಂಪನಿಯು ತನ್ನ  ಶೇ. 10 ರಷ್ಟು ಪಾಲನ್ನು ಮಾರಾಟ ಮಾಡಿದೆ. ಇದೀಗ ಮತ್ತೊಮ್ಮೆ ಶೇ.75 ರಷ್ಟು ಬಿಟ್​ಕಾಯಿನ್​ ಅನ್ನು ನಗದೀಕರಣಗೊಳಿಸಿದ್ದಾರೆ.

ಇದನ್ನೂ ಓದಿ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Image
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Image
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Image
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಎಲಾನ್ ಮಸ್ಕ್ ತೆಗೆದುಕೊಂಡಿರುವ ಈ ಮಹತ್ವದ ನಿರ್ಧಾರವನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಕೋವಿಡ್-19 ಕಾರಣದಿಂದಾಗಿ ಟೆಸ್ಲಾ ಪ್ರಸ್ತುತ ನಗದಿನ ಸಮಸ್ಯೆಯನ್ನು ಎದುರಿಸುತ್ತಿದೆ. ಹೀಗಾಗಿ ಎಲಾನ್ ಮಸ್ಕ್ ಅವರ ಕಂಪನಿಯು ಬಿಟ್‌ಕಾಯಿನ್‌ನಲ್ಲಿನ ಅವರ ಪಾಲನ್ನು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ವರದಿಯೊಂದು ತಿಳಿಸಿದೆ.

ಆದಾಗ್ಯೂ, ಎಲಾನ್ ಮಸ್ಕ್ ಕಂಪನಿಯು ಡಾಗ್​ಕಾಯಿನ್​ (DogeCoin) ನಲ್ಲಿನ ತನ್ನ ಪಾಲನ್ನು ಮಾರಾಟ ಮಾಡಿಲ್ಲ ಎಂಬುದು ವಿಶೇಷ. ಅಂದರೆ ಡಾಗ್​ಕಾಯಿನ್ ಕ್ರಿಪ್ಟೋಕರೆನ್ಸಿಯನ್ನು ಉಳಿಸಿಕೊಂಡಿರುವ ಮಸ್ಕ್ ನಡೆಯು ಇದೀಗ ನಿಗೂಢ ಎಂದೇ ಹೇಳಬಹುದು. ಹೀಗಾಗಿಯೇ ಬಿಟ್​ಕಾಯಿನ್ ಮೌಲ್ಯವು ಕುಸಿತಕ್ಕೊಳಗಾಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಮೇ 2021 ರಿಂದ ಟೆಸ್ಲಾ ಕಂಪೆನಿಯು ತನ್ನ ವಾಹನಗಳ ಖರೀದಿಗೆ ಬಿಟ್​ಕಾಯಿನ್​ ಪಾವತಿಗೆ ಅವಕಾಶ ನೀಡಿತ್ತು. ಆದರೆ ಈ ಪ್ರಕ್ರಿಯೆಗೆ ಸದ್ಯ ನಿಲ್ಲಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಟೆಸ್ಲಾ ಕಂಪೆನಿಯು ತನ್ನ ಬ್ಯಾಲೆನ್ಸ್ ಶೀಟ್‌ನಲ್ಲಿ 218 ಮಿಲಿಯನ್ ಡಾಲರ್​ ಮೌಲ್ಯದ ನಿವ್ವಳ ಡಿಜಿಟಲ್ ಆಸ್ತಿಯನ್ನು ಹೊಂದಿದೆ ಎಂದು ತಿಳಿಸಿದೆ. ಇದು ಹಿಂದಿನ ತ್ರೈಮಾಸಿಕದಲ್ಲಿ $1.26 ಶತಕೋಟಿಗಿಂತ ಕಡಿಮೆ ಎಂಬುದು ವಿಶೇಷ. ಅಂದರೆ ಎಲಾನ್ ಮಸ್ಕ್​ ಅವರ ಬಿಟ್​ಕಾಯಿನ್ ಆದಾಯವು ವರ್ಷದಿಂದ ವರ್ಷಕ್ಕೆ ಕುಸಿತಕ್ಕೊಳ್ಳಗಾಗಿರುವುದು ಸ್ಪಷ್ಟ. ಹೀಗಾಗಿ ತನ್ನ ಷೇರುದಾರರ ಪತ್ರದಲ್ಲಿ ಬಿಟ್​ಕಾಯಿನ್​ನಿಂದ ಆದಾಯ ಮತ್ತು ಲಾಭದಾಯಕತೆಯು ಪ್ರಭಾವಿತವಾಗಿಲ್ಲ ಎಂದು ಸೇರಿಸಲಾಗಿದೆ.

ಇದೇ ವೇಳೆ ನಾವು ನಮ್ಮ ಯಾವುದೇ Dogecoin ಅನ್ನು ಮಾರಾಟ ಮಾಡಿಲ್ಲ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಹಾಗೆಯೇ ಕಂಪನಿಯು ಕೆಲವು ಸರಕುಗಳಿಗೆ DOGE ಪಾವತಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ ಎಂದು ಸಹ ವರದಿಯಲ್ಲಿ ಹೇಳಲಾಗಿದೆ. ಇತ್ತ ಕ್ರಿಪ್ಟೋ ಕರೆನ್ಸಿ ಕ್ಷೇತ್ರದಲ್ಲಿ ವಿಶ್ವದ ಖ್ಯಾತ ಉದ್ಯಮಿಗಳ ನಡೆಯು ಕೂಡ ಪ್ರಭಾವ ಬೀರುತ್ತದೆ. ಅದರಲ್ಲೂ ಬಿಟ್​ಕಾಯಿನ್ ಮೂಲಕವೇ ಷೇರು ಹಾಗೂ ವಾಹನಗಳ ಮಾರಾಟ ಮಾಡುತ್ತಿದ್ದ ಟೆಸ್ಲಾ ತನ್ನ ಶೇ.75 ರಷ್ಟು ಬಿಟ್​ ಕಾಯಿನ್ ಅನ್ನು ನಗದೀಕರಣಗೊಳಿಸಿರುವುದು ಇದೀಗ ಷೇರುಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಏಕೆಂದರೆ ಬಿಟ್​ಕಾಯಿನ್ ಮಾರಾಟವನ್ನು ತಿಳಿಸಿರುವ ಎಲಾನ್ ಮಸ್ಕ್, ಡಾಗ್​ಕಾಯಿನ್ ಮಾರಾಟ ಮಾಡಿಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ಹೀಗಾಗಿಯೇ ಕ್ರಿಪ್ಟೋ ಕರೆನ್ಸಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆಯಾ ಎಂಬುದನ್ನು ಸ್ಟಾಕ್ ಎಕ್ಸ್​ಚೇಂಜ್ ಪಂಡಿತರು ಎದುರು ನೋಡುತ್ತಿದ್ದಾರೆ.

ಅಂದಹಾಗೆ ಒಂದು ಬಿಟ್​ಕಾಯಿನ್​ನ ಇಂದಿನ ಮೌಲ್ಯ ಬರೋಬ್ಬರಿ 18,37,860 ರೂ., ಅದರಲ್ಲೂ ಜುಲೈ 21, 2022 ರಂದು 20 ಸಾವಿರಕ್ಕೂ ಅಧಿಕ ಮೊತ್ತ ಕುಸಿತ ಕಂಡಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿಯೇ ಎಲಾನ್ ಮಸ್ಕ್ ನಡೆಯಿಂದ ಬಿಟ್​ಕಾಯಿನ್ ಮೌಲ್ಯವು ಮತ್ತಷ್ಟು ಕುಸಿಯಲಿದೆಯಾ? ಎಂಬ ಪ್ರಶ್ನೆಯೊಂದು ಚರ್ಚೆಗೀಡಾಗಿದೆ.

Published On - 1:31 pm, Thu, 21 July 22