ಬಿಲ್ಡರ್ ಮಂಜುನಾಥ್ ವಿರುದ್ಧ ವಿಡಿಯೋ ಸಮೇತ ಇಡಿಗೆ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 28, 2024 | 4:02 PM

ಮುಡಾ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ಲಂಚದ ಆರೋಪದ ಹಿನ್ನೆಲೆಯಲ್ಲಿ ಬಿಲ್ಡರ್ ಎನ್. ಮಂಜುನಾಥ್ ಅವರ ಮನೆ ಮೇಲೆ ಇಂದು ಇಡಿ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಆರ್‌ಟಿಆರ್ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಮಂಜುನಾಥ್ ವಿರುದ್ಧ ಮತ್ತೊಂದು ದೂರು ನೀಡಿದ್ದಾರೆ. 25 ಲಕ್ಷ ರೂ. ಹಣ ಎಣಿಸುವ ವಿಡಿಯೋ ಸಹಿತ ದೂರು ನೀಡಿದ್ದಾರೆ.

ಬಿಲ್ಡರ್ ಮಂಜುನಾಥ್ ವಿರುದ್ಧ ವಿಡಿಯೋ ಸಮೇತ ಇಡಿಗೆ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು
ಬಿಲ್ಡರ್ ಮಂಜುನಾಥ್ ವಿರುದ್ಧ ವಿಡಿಯೋ ಸಮೇತ ಇಡಿಗೆ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು
Follow us on

ಮೈಸೂರು, ಅಕ್ಟೋಬರ್​​​ 28: ಮುಡಾ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ವೇಳೆ, ಅಧಿಕಾರಿಗಳಿಗೆ ಲಂಚ ನೀಡಿರುವ ಆರೋಪ ಕೇಳಿಬಂದ ಹಿನ್ನಲೆ ಇಡಿ ಅಧಿಕಾರಿಗಳು ಬೆಂಗಳೂರಿನ ಜೆ.ಪಿ‌.ನಗರದ ಬಿಲ್ಡರ್​ ಎನ್​. ಮಂಜುನಾಥ್​ ಮನೆ ಮೇಲೆ ದಾಳಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಆರ್​ಟಿಆರ್​ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಬಿಲ್ಡರ್ ಮಂಜುನಾಥ್ ವಿರುದ್ಧ ಇಡಿ ಅಧಿಕಾರಿಗಳಿಗೆ ಮತ್ತೊಂದು ದೂರು ನೀಡಿದ್ದಾರೆ.

ಸೆಟಲ್​ಮೆಂಟ್ ಡೀಡ್ ಹೆಸರಿನಲ್ಲಿ ಹಣ ಪಡೆದ ಆರೋಪದಡಿ ದೂರು ನೀಡಲಾಗಿದೆ. ಬಿಲ್ಡರ್ ಮಂಜುನಾಥ್ ಸಹಾಯಕ ಮೈಸೂರಿನ ಶಿವಣ್ಣ ಎಂಬುವರಿಂದ 25 ಲಕ್ಷ ರೂ. ಹಣ ಎಣಿಸುತ್ತಿರುವ ವಿಡಿಯೋ ಸಮೇತ ಇಡಿಗೆ  ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಬಿಲ್ಡರ್​ಗೂ ಮೈಸೂರಿನ ಮುಡಾಗೂ ಏನು ಸಂಬಂಧ? ಇಡಿ ದಾಳಿಯಿಂದ ವಿಚಾರ ಬಹಿರಂಗ ​

ಇಂದು ಬಿಲ್ಡರ್​ ಎನ್​. ಮಂಜುನಾಥ್​ ಮನೆ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳ ಶೋಧ ಮುಂದುವರೆದಿದೆ. ಕಳೆದ ಆರು ಗಂಟೆಯಿಂದ ತಲಾಶ್ ಮಾಡಲಾಗುತ್ತಿದೆ. ಸದ್ಯ ಎಲ್ಲರ ಫೋನ್ ವಶಕ್ಕೆ ಪಡೆದಿರುವ ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ.

ಎನ್​. ಮಂಜುನಾಥ್​ ಮನೆಯಲ್ಲಿ ಇಬ್ಬರು ಮಹಿಳಾ ಕೆಲಸದವರಿದ್ದಾರೆ. ಸದ್ಯ ಅವರ ಫೋನ್​ಗಳನ್ನೂ ವಶಕ್ಕೆ ಪಡೆದು ಕೂರಿಸಿದ್ದಾರೆ. ಮಂಜುನಾಥ್ ಕುಟುಂಬಸ್ಥರಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಮತ್ತು ಬ್ಯಾಂಕ್ ಡಿಟೈಲ್ಸ್​ ಅನ್ನು ಪರಿಶೀಲನೆ ಮಾಡಿದ್ದಾರೆ.

ಎನ್.ಕಾರ್ತಿಕ್ ಡೆವಲಪರ್ ಮಾಲೀಕನಾಗಿರುವ ಎನ್​.ಮಂಜುನಾಥ್​ ಮೈಸೂರಿನಲ್ಲಿ ಕಾರ್ತಿಕ್ ಬಡಾವಣೆ ಹೆಸರಿನಲ್ಲಿ ಲೇಔಟ್ ನಿರ್ಮಾಣ ಮಾಡಿದ್ದರು. 50:50 ಅನುಪಾತದಲ್ಲಿ ಸೈಟ್ ಹಂಚಿಕೆ ವೇಳೆ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಎನ್​.ಮಂಜುನಾಥ್​ ಇತ್ತು.

ಇದನ್ನೂ ಓದಿ: ಬೆಂಗಳೂರಿಗೂ ಹಬ್ಬಿದ ಮುಡಾ ಜಾಲ: ಬಿಲ್ಡರ್​​ ಮನೆ ಮೇಲೆ ಇಡಿ ದಾಳಿ

ಸದ್ಯ 6 ಇಡಿ ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.  ಅಧಿಕಾರಿಗಳು ಬಂದಿದ್ದ ಕಾರನ್ನೇ ಕಾಂಪೌಂಡ್ ಒಳಗೆ ತರಿಸಿಕೊಂಡಿದ್ದಾರೆ. ಇಡಿ ಅಧಿಕಾರಿಗಳು ದಾಳಿ ವೇಳೆ ಮಂಜುನಾಥ್​ ಮನೆಯಲ್ಲೇ ಇದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.