ಬಾಗಲಕೋಟೆ: ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಇಟ್ಟಿಗೆ ಬಟ್ಟಿಗಳಿಗಾಗಿ ಎಗ್ಗಿಲ್ಲದೆ ಮಣ್ಣು ಸಾಗಾಣಿಕೆ ನಡೆಸಲಾದ ಘಟನೆ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದಲ್ಲಿ ನಡೆಯುತ್ತಿದೆ. ಮಣ್ಣು ಸಾಗಾಣಿಕೆ ವೇಳೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಟ್ರ್ಯಾಕ್ಟರ್ ಬಡಿದು ಗಾಯವಾಗಿದೆ. ಈ ಕುರಿತಂತೆ ಸಚಿವರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಮಣ್ಣು ಸಾಗಾಣಿಕೆ ಚಟುವಟಿಕೆ ನಡೆಯುತ್ತಿದೆ. ಪ್ರತಿ ನಿತ್ಯ ನೂರಾರು ಟ್ರ್ಯಾಕ್ಟರ್ಗಳು ಓಡಾಟ ನಡೆಸುತ್ತವೆ. ಅದೇ ದಾರಿಯಲ್ಲಿ ಶಾಲಾ ವಿದ್ಯಾರ್ಥಿಗಳು ನಡೆದು ಸಾಗಬೇಕು. ಈ ವೇಳೆ ಶಾಲೆಗೆ ಹೊರಟ ರಾಧಿಕಾ ಮುತ್ತಣ್ಣ ಪಾಟೀಲ್(15) ಒಂಬತ್ತನೇ ತರಗತಿಯ ವಿದ್ಯಾರ್ಥಿನಿಗೆ ಟ್ರ್ಯಾಕ್ಟರ್ ಬಡಿದು ಕೈಗೆ ಗಾಯವಾಗಿದೆ. ವಿದ್ಯಾರ್ಥಿನಿಗೆ ಜಮಖಂಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಣಿ ಸಚಿವ ಮುರುಗೇಶ್ ನಿರಾಣಿ ಜಿಲ್ಲೆಯಲ್ಲೇ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಈ ಕುರಿತಂತೆ ಸಚಿವರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಅಕ್ರಮ ಮಣ್ಣು ಸಾಗಾಣಿಕೆಯ ಬಗ್ಗೆ ಪೊಲೀಸರಿಗೆ ಮೇಲಿಂದ ಮೇಲೆ ಮಾಹಿತಿ ನೀಡಿದರು ಕೂಡಾ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ: ಅಕ್ರಮ ಮಣ್ಣು ಗಣಿಗಾರಿಕೆ; ಜಮೀನುಗಳಲ್ಲಿ ಬಲಿಗಾಗಿ ಕಾಯುತ್ತಿವೆ ಬೃಹತ್ ಹೊಂಡಗಳು: ಗಣಿ ಇಲಾಖೆಗೆ ಜಾಣ ಕುರುಡು
ಇದನ್ನೂ ಓದಿ: ಅಕ್ರಮವಾಗಿ ಮಣ್ಣು ಲೋಟಿಯಾದ್ರು ಕ್ಯಾರೆ ಅನ್ನದೆ ಕೈ ಕಟ್ಟಿ ಕುಳಿತ ಅಧಿಕಾರಿಗಳು