ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮಾರಾಟ ಮತ್ತು ಕಳ್ಳತನದ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸರ್ಕಾರಕ್ಕೆ ಪತ್ರ ಬರೆದಿದೆ. ಮಕ್ಕಳ ಕಳ್ಳತನ, ಮಾರಾಟದ ಬಗ್ಗೆ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಯೋಗ ಮನವಿ ಮಾಡಿದೆ. ಮಕ್ಕಳ ನಾಪತ್ತೆ ಪ್ರಕರಣಗಳ ಕುರಿತು ಆತಂಕಕಾರಿ ಅಂಕಿಅಂಶಗಳನ್ನೂ ಆಯೋಗ ಇದೇ ವೇಳೆ ಉಲ್ಲೇಖಿಸಿದೆ. 2017ರಿಂದ 2019ರ ಅವಧಿಯಲ್ಲಿ 11,135 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಪೈಕಿ 10,192 ಮಕ್ಕಳು ಪತ್ತೆಯಾಗಿದ್ದಾರೆ. ಆದರೆ 943 ಮಕ್ಕಳು ಇದುವರೆಗೂ ಪತ್ತೆಯಾಗಿಲ್ಲ ಎಂದು ಆಯೋಗ ಆತಂಕಕಾರಿ ಮಾಹಿತಿ ಹೊರಹಾಕಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಮಕ್ಕಳ ಮಾರಾಟ ಜಾಲ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ಐವರನ್ನು ಬಂಧಿಸಿ, 11 ಮಕ್ಕಳನ್ನು ರಕ್ಷಿಸಲಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸರ್ಕಾರಕ್ಕೆ ಮನವಿ ಮಾಡಿದೆ. ರಾಜ್ಯದಲ್ಲಿ ಮಕ್ಕಳ ಮಾರಾಟ ಹಾಗೂ ಕಳ್ಳತನ ಶುರುವಾಗಿರುವ ಬಗ್ಗೆ ಆಯೋಗ ಕಳವಳ ವ್ಯಕ್ತಪಡಿಸಿದ್ದು, ಮೈಸೂರು,ಬೆಂಗಳೂರು, ತುಮಕೂರು ಭಾಗದಲ್ಲಿ ಮಕ್ಕಳ ಮಾರಾಟ ಹೆಚ್ಚಾಗಿರುವ ಬಗ್ಗೆ ಮಾಹಿತಿ ನೀಡಿದೆ.
ಬಡವರನ್ನು ಟಾರ್ಗೆಟ್ ಮಾಡಿಕೊಂಡು ಮಕ್ಕಳ ಮಾರಾಟ ನಡೆಸಲಾಗುತ್ತಿದೆ. ಆಸ್ಪತ್ರೆಗಳಿಂದಲೇ ಮಕ್ಕಳ ಕಳ್ಳತನ ಮಾಡುವ ಮಾಫಿಯಾ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಆಸ್ಪತ್ರೆಗಳೇ ಮಕ್ಕಳ ಮಾರಾಟದ ಅಡ್ಡೆಯಾಗಿವೆ ಎಂದು ಆಯೋಗ ಆತಂಕಕಾರಿ ಮಾಹಿತಿ ತಿಳಿಸಿದೆ. ಈ ಕುರಿತು ಪೊಲೀಸ್ ಇಲಾಖೆಯಿಂದ ಸೂಕ್ತ ತನಿಖೆಗೆಗೆ ಆಯೋಗದ ಮನವಿ ಮಾಡಿದೆ.
ಇದನ್ನೂ ಓದಿ:
Karnataka Rain: ಕರ್ನಾಟಕದ ಹಲವು ಕಡೆ ಭಾರಿ ಮಳೆ; ಫೋಟೋಗಳು ಇಲ್ಲಿವೆ
ಕೃಷಿ ಕುಟುಂಬಗಳಲ್ಲಿ ಪ್ರಾಣಿ ಸಾಕಣೆಯ ಲೆಕ್ಕಾಚಾರವನ್ನು ತೆರೆದಿಡುವ ಆಸಕ್ತಿಕರ ಅಂಕಿ-ಅಂಶಗಳು ಇಲ್ಲಿವೆ