ಅಮ್ಮನ ಸಾವಿಗೆ ವಾರ್ ರೂಂ ಸಿಬ್ಬಂದಿಯೇ ಕಾರಣ; ಮಗನ ಆರೋಪ

|

Updated on: May 06, 2021 | 8:32 AM

ಬೆಡ್ ಬೇಕು ಅಂತ ಬಿಬಿಎಂಪಿಗೆ ಕರೆ ಮಾಡಿದವರಿಗೆ ಹೋಂ ಐಸೋಲೇಷನ್​ನಲ್ಲೇ ಇರಿ. ಏನೂ ಆಗೊಲ್ಲ ಅಂತ ವಾರ್ ರೂಂ ಸಿಬ್ಬಂದಿ ಸೋಂಕಿತರ ಕುಟುಂಬಸ್ಥರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ವಾರ್ ರೂಂ ಸಿಬ್ಬಂದಿಗಳು ವೈದ್ಯರ ರೀತಿ ವರ್ತಿಸುತ್ತಿದ್ದಾರೆ. ಬೇಗ ಬೆಡ್ ಅಲರ್ಟ್ ಮಾಡಿ ಕೊಡಿ ಎಂದರೆ ಏನೇನೊ ಹೇಳುತ್ತಾರೆ.

ಅಮ್ಮನ ಸಾವಿಗೆ ವಾರ್ ರೂಂ ಸಿಬ್ಬಂದಿಯೇ ಕಾರಣ; ಮಗನ ಆರೋಪ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬೆಡ್ ಸಿಗುತ್ತಿಲ್ಲ, ಆಕ್ಸಿಜನ್ ಸಿಗುತ್ತಿಲ್ಲ.. ಎನ್ನುವ ಕೂಗುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಈ ನಡುವೆ ಸೋಂಕಿತರು ಸಾವನ್ನಪ್ಪಲು ವೈದ್ಯರು, ಆಸ್ಪತ್ರೆ ಸಿಬ್ಬಂದಿ, ವಾರ್ ರೂಂ ನವರೇ ಕಾರಣ ಎಂದು ಹಲವು ಕುಟುಂಬಗಳು ಆಕ್ರೋಶ ಹೊರ ಹಾಕುತ್ತಿವೆ. ಸೋಂಕಿನ ಲಕ್ಷಣಗಳು ಇದ್ದರೂ ವ್ಯಕ್ತಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯಿರಿ ಎಂದು ವಾರ್ ರೂಂ ಸಿಬ್ಬಂದಿಗಳು ಹೇಳಿದ್ದರು. ಇದರಿಂದ ನನ್ನ ತಾಯಿ ಮೃತಪಟ್ಟಿದ್ದಾರೆ. ವಾರ್ ರೂಂ ನವರ ನಿರ್ಲ್ಯಕ್ಷಕ್ಕೆ ತಾಯಿಯನ್ನು ಕಳೆದುಕೊಂಡೆ ಎಂದು ಮಗ ಕಣ್ಣೀರು ಹಾಕಿದ್ದಾರೆ.

ಬೆಡ್ ಬೇಕು ಅಂತ ಬಿಬಿಎಂಪಿಗೆ ಕರೆ ಮಾಡಿದವರಿಗೆ ಹೋಂ ಐಸೋಲೇಷನ್​ನಲ್ಲೇ ಇರಿ. ಏನೂ ಆಗೊಲ್ಲ ಅಂತ ವಾರ್ ರೂಂ ಸಿಬ್ಬಂದಿ ಸೋಂಕಿತರ ಕುಟುಂಬಸ್ಥರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ವಾರ್ ರೂಂ ಸಿಬ್ಬಂದಿಗಳು ವೈದ್ಯರ ರೀತಿ ವರ್ತಿಸುತ್ತಿದ್ದಾರೆ. ಬೇಗ ಬೆಡ್ ಅಲರ್ಟ್ ಮಾಡಿ ಕೊಡಿ ಎಂದರೆ ಏನೇನೊ ಹೇಳುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಟ್ರೈನ್ ವೈದ್ಯರಿಗಿಂತ, ಟ್ರೈನಿ ವೈದ್ಯರೇ ಚಿಕಿತ್ಸೆ ನೀಡುತ್ತಿದ್ದಾರೆ. ಕೊರೊನಾ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಸೋಂಕು ತೀವ್ರ ಹೆಚ್ಚಾಗಿ ಶುಗರ್ನಿಂದ ಬಳಲುತ್ತಿದ್ದ 49 ವರ್ಷದ ನಮ್ಮ ಅಮ್ಮನ ಸಾವಿಗೆ ವಾರ್ ರೂಂ ಸಿಬ್ಬಂದಿಗಳೇ ಕಾರಣ ಎಂದು ಮಗ ಆರೋಪಿಸುತ್ತಿದ್ದಾರೆ.

1912ಗೆ ಕರೆ ಮಾಡಿದರೆ ಆಸ್ಪತ್ರೆಗೆ ಯಾಕೆ ಹೋಗುತ್ತೀರಾ? ಮನೆಯಲ್ಲೇ ಐಸೋಲೇಷನ್ ಆಗಿ ಎಂದು ಸೂಚನೆ ನೀಡುತ್ತಾರೆ. ಕೊನೆಗೆ ಬಿಬಿಎಂಪಿ ಕಡೆಯಿಂದ ಬೆಡ್ ಸಿಗದೆ ಇದ್ದಾಗ ಅಮ್ಮನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದೆ. ತಡವಾಗಿ ಬೆಡ್ ಸಿಕ್ಕಿದ್ದೇ ತಾಯಿ ಸಾವಿಗೆ ಕಾರಣ. 5 ಲಕ್ಷ ಬಿಲ್ ಮಾಡಿದ್ದರೂ ನಮ್ಮ ತಾಯಿ ಉಳಿದಿಲ್ಲ ಎಂದು ಮಗ ಕಣ್ಣೀರು ಹಾಕಿದ್ದಾರೆ.

ರೆಮ್ಡಿಸಿವಿರ್ಗೆ ಸುಮಾರು 30 ಸಾವಿರ ರೂ. ಕೊಟ್ಟ ಮಗ, ಮುಖ್ಯಮಂತ್ರಿ ಯಡಿಯೂರಪ್ಪಗೆ 78 ವರ್ಷ ವಯಸ್ಸು. ಅವರು ಮೂರೇ ದಿನಕ್ಕೆ ಗುಣಮುಖರಾಗಿ ಬರುತ್ತಾರೆ. ಕುಮಾರಸ್ವಾಮಿಯವರು ಕೂಡ ಗುಣಮುಖರಾಗುತ್ತಾರೆ. 49 ವರ್ಷದ ನಮ್ಮ ತಾಯಿಗೆ ಯಾಕೆ ಗುಣಮುಖರಾಗಿಲ್ಲ. ನಮ್ಮ ಬಳಿ ಲಕ್ಷ ಲಕ್ಷ ದುಡ್ಡು ಪೀಕಿದ್ರೂ ಯಾಕೆ ಸೋಂಕಿತರು ಉಳಿಯುತಿಲ್ಲ. ನಮ್ಮ ತಾಯಿಯ ಸಾವಿಗೆ ವಾರ್ ಸಿಬ್ಬಂದಿಯೇ ಮುಖ್ಯ ಕಾರಣ ಅಂತ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ

ರೆಮ್‌ಡಿಸಿವಿರ್​ ಹಂಚಿಕೆಯಲ್ಲೂ ಅಕ್ರಮ; ಔಷಧ ನಿಯಂತ್ರಕ ಕಚೇರಿಯೇ ಹಗರಣದ ರೂವಾರಿ ಎಂದ ಖಾಸಗಿ ಆಸ್ಪತ್ರೆ ವೈದ್ಯರು

ಯಡಿಯೂರಪ್ಪ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಮಂದಿಗೆ ಕೊರೊನಾ, ಪರೀಕ್ಷೆ ನಡೆಸಿ 20 ದಿನಗಳ ನಂತರ ವರದಿ; ನಿರ್ಲಕ್ಷ್ಯಕ್ಕೆ ಯಾರು ಹೊಣೆ?

(son blames the war room staff for mother death in Bengaluru)

Published On - 8:31 am, Thu, 6 May 21