ಯಡಿಯೂರಪ್ಪ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಮಂದಿಗೆ ಕೊರೊನಾ, ಪರೀಕ್ಷೆ ನಡೆಸಿ 20 ದಿನಗಳ ನಂತರ ವರದಿ; ನಿರ್ಲಕ್ಷ್ಯಕ್ಕೆ ಯಾರು ಹೊಣೆ?
ಏಪ್ರಿಲ್ 16ರಂದೇ ಯಡಿಯೂರಪ್ಪ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತಾದರೂ ಬರೋಬ್ಬರಿ 20 ದಿನಗಳ ನಂತರ ಕೊರೊನಾ ಪಾಸಿಟಿವ್ ವರದಿ ನೀಡಲಾಗಿದೆ.
ಬೆಳಗಾವಿ: ಕೆಲ ದಿನಗಳ ಹಿಂದಷ್ಟೇ ಜ್ವರದ ನಡುವೆಯೂ ಉಪಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ನಂತರ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಾನ್ಯ ಮುಖ್ಯಮಂತ್ರಿಗಳು ಗುಣಮುಖರಾದರು. ಆದರೆ, ಅಂದು ಯಡಿಯೂರಪ್ಪ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಬೆಳಗಾವಿ ಹೋಟೆಲ್‌ನ 12 ಸಿಬ್ಬಂದಿಗೆ ಇದೀಗ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ದುರದೃಷ್ಟವಶಾತ್, ಏಪ್ರಿಲ್ 16ರಂದೇ ಈ ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತಾದರೂ ಬರೋಬ್ಬರಿ 20 ದಿನಗಳ ನಂತರ ಕೊರೊನಾ ಪಾಸಿಟಿವ್ ವರದಿ ನೀಡಲಾಗಿದೆ. ಬೆಳಗಾವಿ ಜಿಲ್ಲಾಡಳಿತದ ಪರಮ ನಿರ್ಲಕ್ಷ್ಯದಿಂದಾಗಿ ಸದರಿ ಸಿಬ್ಬಂದಿ ವರ್ಗದ ಸಂಪರ್ಕದಲ್ಲಿದ್ದ ಇನ್ನೂ ಹಲವರಿಗೆ ಸೋಂಕು ಹರಡಿರುವ ಭಯ ಆರಂಭವಾಗಿದೆ.
ಸಾಧಾರಣವಾಗಿ ಕೊರೊನಾ ಪರೀಕ್ಷೆ ನಡೆಸಿದ 24 ತಾಸಿನಲ್ಲಿ ವರದಿ ನೀಡಲಾಗುತ್ತದೆ. ಕೆಲವೆಡೆ 72 ಗಂಟೆಗಳ ಒಳಗಾಗಿ ನೀಡಲಾಗುತ್ತದೆ. ಆದರೆ, ಬೆಳಗಾವಿಯಲ್ಲಿ ಮಾತ್ರ 20 ದಿನಗಳ ಸುದೀರ್ಘ ಅವಧಿಯನ್ನು ಪಡೆದು ಪರೀಕ್ಷೆ ನಡೆಸಲಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಪ್ರಿಲ್ 14, 15ರಂದು ಬೆಳಗಾವಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರಾಥಮಿಕ ಸಂಪರ್ಕದಲ್ಲಿ ಸುಮಾರು 40 ಜನರಿದ್ದರು. ಯಡಿಯೂರಪ್ಪಗೆ ಸೋಂಕು ದೃಢವಾಗುತ್ತಿದ್ದಂತೆಯೇ ಏಪ್ರಿಲ್ 16ರಂದು 40 ಜನರಿಗೂ ಪರೀಕ್ಷೆ ನಡೆಸಲಾಗಿದೆ.
ಆದರೆ, ಅದರ ವರದಿ ಮಾತ್ರ ಯಡಿಯೂರಪ್ಪ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದ 12 ದಿನಗಳ ಬಳಿಕ ಹೊರಬಂದಿದೆ. ಕೊರೊನಾ ಟೆಸ್ಟ್ ರಿಪೋರ್ಟ್ ಇಷ್ಟು ತಡವಾಗಲು ಏನು ಕಾರಣ? ಈ ತೆರನಾದ ನಿರ್ಲಕ್ಷ್ಯದಿಂದ ಸೋಂಕು ಇನ್ನಷ್ಟು ಜನರಿಗೆ ಹಬ್ಬಿರುವ ಸಾಧ್ಯತೆ ಇರುವುದರಿಂದ ಇದರ ಹೊಣೆಯನ್ನು ಯಾರು ಹೊತ್ತುಕೊಳ್ಳುವರು ಎಂಬ ಪ್ರಶ್ನೆ ಕಾಡುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ವಾಸ್ತವ್ಯ ಹೂಡಿದ್ದ ಖಾಸಗಿ ಹೊಟೇಲ್ನ ಅಡುಗೆ ಭಟ್ಟ, ರೂಮ್ ಬಾಯ್, ಸಪ್ಲೈಯರ್ ಸೇರಿದಂತೆ 12 ಮಂದಿಗೆ ಸೋಂಕು ದೃಢಪಟ್ಟಿರುವುದು ಹಲವು ಆತಂಕಗಳಿಗೆ ಕಾರಣವಾಗಿದೆ. ಕೊರೊನಾ ಪರೀಕ್ಷೆಯ ವರದಿ ಬರುವುದು ವಿಳಂಬವಾದ ಕಾರಣ ಈ ಎಲ್ಲರೂ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದು ಅನೇಕ ಜನರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯೂ ಇದೆ. ಇಂತಹ ಸಂದರ್ಭದಲ್ಲಿ ಇವರಿಂದ ಇನ್ನೆಷ್ಟು ಜನರಿಗೆ ಸೋಂಕು ಹಬ್ಬಿದೆಯೋ? ಎಂಬ ಆತಂಕ ಎದ್ದಿದ್ದು ಈ ನಿರ್ಲಕ್ಷ್ಯಕ್ಕೆ ಯಾರನ್ನು ಹೊಣೆಗಾರರನ್ನಾಗಿಸಬೇಕೆಂಬ ಪ್ರಶ್ನೆಯೂ ಮೂಡಿದೆ.
‘78 ವರ್ಷದ ಯಡಿಯೂರಪ್ಪ ಬದಕಿದ್ರು 28 ವರ್ಷದ ಯವಕ ಸತ್ತ ಅದ್ಹೇಗೆ ಸರ್
(Corona Positive tested in 12 individuals who were in primary contact with CM BS Yediyurappa during his visit to Belagavi)