AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಭಯ; ದಾವಣಗೆರೆಯಲ್ಲಿ ರೈಲಿಗೆ ತಲೆಕೊಟ್ಟ ಪತ್ರಕರ್ತ

ಪರಮೇಶ್ ಕಳೆದ ಎರಡು ದಶಕಗಳಿಂದ ರಾಜ್ಯದ ಮಟ್ಟದ ವಿವಿಧ ಪತ್ರಿಕೆಗಳ ಅರೇಕಾಲಿಕ ವರದಿಗಾರನಾಗಿದ್ದರು. ಕೆಲ ದಿನಗಳ ಹಿಂದೆ ಕೆಮ್ಮು, ನೆಗಡಿ ಸೇರಿ ಕೊವಿಡ್ ಲಕ್ಷಣಗಳಿದ್ದವು. ಇನ್ನೂ ಟೆಸ್ಟ್ ಮಾಡಿಸಿದರೆ ಪಾಸಿಟಿವ್ ಬಂದರೆ ಹೇಗೆ ಎಂದು ಭಯಗೊಂಡು ರೈಲಿಗೆ ತಲೆ ಕೊಟ್ಟು ಪರಮೇಶ ಸಾವಿನ ದಾರಿ ಹಿಡಿದಿದ್ದಾರೆ.

ಕೊವಿಡ್ ಭಯ; ದಾವಣಗೆರೆಯಲ್ಲಿ ರೈಲಿಗೆ ತಲೆಕೊಟ್ಟ ಪತ್ರಕರ್ತ
ಪತ್ರಕರ್ತ ಪರಮೇಶ
sandhya thejappa
|

Updated on: May 06, 2021 | 9:05 AM

Share

ದಾವಣಗೆರೆ: ಕೊರೊನಾ ಅದೆಷ್ಟು ಜನರ ಜೀವವನ್ನು ಬಲಿ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ. ಕೊರೊನಾ ಎರಡನೇ ಅಲೆಗೆ ಹಲವು ಕುಟುಂಬಗಳು ಮನೆಗೆ ಆಧಾರವಾಗಿದ್ದ ಗಟ್ಟಿ ಜೀವಿಗಳನ್ನು ಕಳೆದುಕೊಂಡು ಬೀದಿಗೆ ಬಂದಿವೆ. ಹೀಗೆ ಕೊರೊನಾ ಸೋಂಕಿನ ಆರ್ಭಟಕ್ಕೆ ಭಯಗೊಂಡು ಪತ್ರಕರ್ತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈಲಿಗೆ ತಲೆಕೊಟ್ಟು 46 ವರ್ಷದ ಕುಂದೂರು ಪರಮೇಶ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಾಳಿ ತಾಲೂಕಿನ ಕುಂದೂರ ಗ್ರಾಮದ ನಿವಾಸಿ ಪರಮೇಶರವರು ದಾವಣಗೆರೆ ಜಿಲ್ಲೆಯ ಹರಿಹರದ ಅಮರಾವತಿ ಕಾಲೋನಿ ಬಳಿ ರೈಲಿಗೆ ತಲೆ ಕೊಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಪರಮೇಶ್ ಕಳೆದ ಎರಡು ದಶಕಗಳಿಂದ ರಾಜ್ಯದ ಮಟ್ಟದ ವಿವಿಧ ಪತ್ರಿಕೆಗಳ ಅರೇಕಾಲಿಕ ವರದಿಗಾರನಾಗಿದ್ದರು. ಕೆಲ ದಿನಗಳ ಹಿಂದೆ ಕೆಮ್ಮು, ನೆಗಡಿ ಸೇರಿ ಕೊವಿಡ್ ಲಕ್ಷಣಗಳಿದ್ದವು. ಇನ್ನೂ ಟೆಸ್ಟ್ ಮಾಡಿಸಿದರೆ ಪಾಸಿಟಿವ್ ಬಂದರೆ ಹೇಗೆ ಎಂದು ಭಯಗೊಂಡು ರೈಲಿಗೆ ತಲೆ ಕೊಟ್ಟು ಪರಮೇಶ ಸಾವಿನ ದಾರಿ ಹಿಡಿದಿದ್ದಾರೆ. ಸದ್ಯ ಈ ಪ್ರಕರಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಲ್ಯಾಬ್​ಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಜನ ಸಿಟಿ ಸ್ಕ್ಯಾನ್​ಗಾಗಿ ಮುಗಿ ಬೀಳುತ್ತಿದ್ದಾರೆ. ಈ ನಡುವೆ ಖಾಸಗಿಯವರ ಸುಲಿಗೆ ಹೆಚ್ಚಾಗಿದೆ ಎಂಬ ಮಾಹಿತಿ ತಿಳಿದುಬಂದಿದ್ದು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಲ್ಯಾಬ್ಗಳಿಗೆ ದಿಢೀರ್ ಭೇಟಿ ನೀಡಿದ್ದಾರೆ. ಅಲ್ಲಿದ್ದ ಜನರಿಂದ ಮಾಹಿತಿ ಸಂಗ್ರಹಿಸಿದ ಜಿಲ್ಲಾಧಿಕಾರಿ, ಹೆಚ್ಚಿನ ಹಣ ವಸೂಲಿ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ

ಅಮ್ಮನ ಸಾವಿಗೆ ವಾರ್ ರೂಂ ಸಿಬ್ಬಂದಿಯೇ ಕಾರಣ; ಮಗನ ಆರೋಪ

ವೈದ್ಯರನ್ನು ರಾಕ್ಷಸರು, ಕಳ್ಳರು ಎಂದ ನಟ ಸುನೀಲ್​ ಪಾಲ್​ ವಿರುದ್ಧ ಎಫ್​ಐಆರ್​

(Journalist commits suicide for fear of corona infection at davanagere)