ಸಿಎಂ ನಿವಾಸ ಕಾವೇರಿ ಬಳಿ ಬಂದು, ಪತಿಗೆ ಬೆಡ್​ ನೀಡುವಂತೆ ಅಂಗಲಾಚಿದ ಮಹಿಳೆ; ಆಸ್ಪತ್ರೆ ತಲುಪುವ ಮುನ್ನವೇ ಪತಿ ಸಾವು

ಬಿಜಿಎಸ್, ಆರ್ ಆರ್ ನಗರ ಹೆಲ್ಪ್ ಲೈನ್ ಫುಲ್ ಬ್ಯುಸಿ ಬರ್ತಿದೆ, ಬೆಡ್, ವೆಂಟಿಲೇಟರ್, ಐಸಿಯು ಬೆಡ್ ಇಲ್ಲ. ಎಲ್ಲಿ ಹೋದ್ರೂ ಬೆಡ್ ಇಲ್ಲ ಅಂತಿದ್ದಾರೆ ದಯವಿಟ್ಟು ಬೆಡ್​ ವ್ಯವಸ್ಥೆ ಮಾಡಿ ಎಂದು ಸಿಎಂ ಅಧಿಕೃತ ನಿವಾಸದ ಮುಂದೆ ಬಂದು ಗೋಳಾಡಿದ್ದ ಮಹಿಳೆ ಎಷ್ಟೇ ಹರಸಾಹಸಪಟ್ಟರೂ ಪತಿಯನ್ನು ಉಳಿಸಿಕೊಳ್ಳಲಾಗಿಲ್ಲ.

ಸಿಎಂ ನಿವಾಸ ಕಾವೇರಿ ಬಳಿ ಬಂದು, ಪತಿಗೆ ಬೆಡ್​ ನೀಡುವಂತೆ ಅಂಗಲಾಚಿದ ಮಹಿಳೆ; ಆಸ್ಪತ್ರೆ ತಲುಪುವ ಮುನ್ನವೇ ಪತಿ ಸಾವು
ಮುಖ್ಯಮಂತ್ರಿ ನಿವಾಸದ ಎದುರು ಬೆಡ್​ಗಾಗಿ ಅಂಗಲಾಚಿದ ಮಹಿಳೆ
Follow us
Skanda
|

Updated on: May 06, 2021 | 10:43 AM

ಬೆಂಗಳೂರು: ಕೊರೊನಾ ಎರಡನೇ ಅಲೆ ಕರ್ನಾಟಕದಲ್ಲಿ ಉಂಟು ಮಾಡಿರುವ ಹಾನಿ ಹೇಳತೀರದಾಗಿದೆ. ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಗಂಭೀರಾವಸ್ಥೆಗೆ ಹೋದ ಸೋಂಕಿತರು ಸೂಕ್ತ ಚಿಕಿತ್ಸೆ ಸಿಗದೇ ಸಾಯುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಇಂದು (ಮೇ.6) ಬೆಂಗಳೂರಿನ ಆಸ್ಪತ್ರೆಗೆ ತನ್ನ ಸೋಂಕಿತ ಪತಿಯನ್ನು ದಾಖಲಿಸಲು ಕರೆತಂದ ಮಹಿಳೆಯೊಬ್ಬರು ಎಲ್ಲೂ ಬೆಡ್​ ಸಿಗದೇ ಕಂಗಾಲಾಗಿ ಮುಖ್ಯಮಂತ್ರಿಯ ಅಧಿಕೃತ ನಿವಾಸದ ಬಳಿ ಬಂದು ಬೆಡ್​ಗಾಗಿ ಅಂಗಲಾಚಿದ ಘಟನೆ ಬೆಳ್ಳಂಬೆಳಗ್ಗೆ ನಡೆದಿತ್ತು. ಮಹಿಳೆಯನ್ನು ಸಮಾಧಾನಿಸಿದ್ದ ಪೊಲೀಸರು ಆಕೆಯ ಪತಿಗೆ ರಾಮಯ್ಯ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿದ್ದರು. ದುರದೃಷ್ಟವಶಾತ್ ಆಕೆಯ ಪತಿ ಆಸ್ಪತ್ರೆ ತಲುಪುವ ಮೊದಲೇ ಕೊನೆಯುಸಿರೆಳೆದಾಗಿದೆ.

ರಾಮೋಹಳ್ಳಿಯ ಚಿಕ್ಕಲ್ಲೂರಿನ ಸತೀಶ್ ಎಂಬಾತ ಮೃತ ದುರ್ದೈವಿ ಆಗಿದ್ದು, ಕೊನೆಗೂ ಆತನ ಪತ್ನಿಯ ಪ್ರಯತ್ನ ವಿಫಲವಾಗಿದೆ. ಬಿಜಿಎಸ್, ಆರ್ ಆರ್ ನಗರ ಹೆಲ್ಪ್ ಲೈನ್ ಫುಲ್ ಬ್ಯುಸಿ ಬರ್ತಿದೆ, ಬೆಡ್, ವೆಂಟಿಲೇಟರ್, ಐಸಿಯು ಬೆಡ್ ಇಲ್ಲ. ಎಲ್ಲಿ ಹೋದ್ರೂ ಬೆಡ್ ಇಲ್ಲ ಅಂತಿದ್ದಾರೆ ದಯವಿಟ್ಟು ಬೆಡ್​ ವ್ಯವಸ್ಥೆ ಮಾಡಿ ಎಂದು ಸಿಎಂ ಅಧಿಕೃತ ನಿವಾಸದ ಮುಂದೆ ಬಂದು ಗೋಳಾಡಿದ್ದ ಮಹಿಳೆ ಎಷ್ಟೇ ಹರಸಾಹಸಪಟ್ಟರೂ ಪತಿಯನ್ನು ಉಳಿಸಿಕೊಳ್ಳಲಾಗಿಲ್ಲ. ಪೊಲೀಸರು ರಾಮಯ್ಯ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿದರೂ ಅಷ್ಟರಲ್ಲಾಗಲೇ ಗಂಭೀರ ಸ್ಥಿತಿಗೆ ತಲುಪಿದ್ದ ಸತೀಶ್, ಆಸ್ಪತ್ರೆ ತಲುಪುವ ಮುನ್ನವೇ ಜೀವ ಬಿಟ್ಟಿದ್ದಾರೆ.

ಆಕ್ಸಿಜನ್​ ಕೊರತೆ; ಆಸ್ಪತ್ರೆಯಲ್ಲಿ ಹೊಸ ರೋಗಿಗಳಿಗೆ ಜಾಗವಿಲ್ಲ ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ಕಾಡೇ ಆಸ್ಪತ್ರೆಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ತಲೆದೋರಿದೆ. 30 ಕೊರೊನಾ ಸೋಂಕಿತರಿರುವ ಕಾಡೇ ಆಸ್ಪತ್ರೆಯ ಎದುರು ಆಕ್ಸಿಜನ್ ಕೊರತೆ ಬಗ್ಗೆ ಬೋರ್ಡ್ ಹಾಕಲಾಗಿದ್ದು, ಹೊಸ ರೋಗಿಗಳನ್ನ ಅಡ್ಮಿಟ್ ಮಾಡಿಕೊಳ್ಳದಿರಲು ಕಾಡೇ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ. ನಿತ್ಯ 45 ರಿಂದ 50 ಆಕ್ಸಿಜನ್ ಸಿಲಿಂಡರ್​ಗಳು ಈ ಆಸ್ಪತ್ರೆಯಲ್ಲಿ ಖಾಲಿಯಾಗುತ್ತಿದ್ದು, ಮಧ್ಯಾಹ್ನದ ವೇಳೆಗೆ ಮರುಪೂರಣಗೊಂಡು ಆಸ್ಪತ್ರೆಗೆ ಆಕ್ಸಿಜನ್ ಬರಲೆಬೇಕಾದ ಅನಿವಾರ್ಯತೆ ಇದೆ. ಆಕ್ಸಿಜನ್ ರೀ ಫಿಲ್ಲಿಂಗ್ ಮಾಡಿಸಲು ಆಸ್ಪತ್ರೆಯ ಆಡಳಿತ ಮಂಡಳಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಇರುವ ಸೋಂಕಿತರಿಗೆನೇ ಆಕ್ಸಿಜನ್ ಕೊರತೆ ಹಿನ್ನಲೆ ಹೊಸ ರೋಗಿಗಳನ್ನ ಅಡ್ಮಿಟ್ ಮಾಡಿಕೊಳ್ಳದಿರಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಯಡಿಯೂರಪ್ಪ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಮಂದಿಗೆ ಕೊರೊನಾ, ಪರೀಕ್ಷೆ ನಡೆಸಿ 20 ದಿನಗಳ ನಂತರ ವರದಿ; ನಿರ್ಲಕ್ಷ್ಯಕ್ಕೆ ಯಾರು ಹೊಣೆ? 

ಕೊರೊನಾ ಮಾರಿ ಅಟ್ಟಹಾಸ: ಎನ್​ಎಸ್​ಜಿ ಕಮಾಂಡೋ ಕೋವಿಡ್​ಗೆ ಬಲಿ, ಅವರಿಗೂ ಸಿಗಲಿಲ್ಲ ವೆಂಟಿಲೇಟರ್​ ಆಂಬುಲೆನ್ಸ್​

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ