ನಾನು ಈಗಾಗಲೇ ರಾಜೀನಾಮೆ ಕೊಟ್ಟೆ ಇಲ್ಲಿಗೆ ಬಂದಿರೋದು.. ರೇಣುಕಾಚಾರ್ಯಗೆ ಡಾ. ಕೆ. ಸುಧಾಕರ್ ತಿರುಗೇಟು

ನಾನು ಕೊರೊನಾ ಯೋಧನ ರೀತಿಯಲ್ಲಿ ವೈದ್ಯನಾಗಿ ಕೆಲಸ ಮಾಡ್ತಿದ್ದೇನೆ. ಈ ಸಮಯದಲ್ಲಿ ‌ನಾನು ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ. ಕೊರೊನಾ ಮುಗಿಯೋವರೆಗೂ ನಾನು ಯಾವ ಬೇಸರವನ್ನೂ ವ್ಯಕ್ತಪಡಿಸೊಲ್ಲ. ನನಗೆ ಯಾವ ಆಸೆಯೂ ಇಲ್ಲ. ಸರ್ಕಾರ ಮತ್ತು ಪಕ್ಷ ಕೊಡೋ ಆದೇಶದಂತೆ ಕೆಲಸ ಮಾಡ್ತೀನಿ. ಯಾರ ವೈಯಕ್ತಿಕ ವಿಚಾರವನ್ನು ನಾನು ಮಾತಾಡೊಲ್ಲ. ರೇಣುಕಾಚಾರ್ಯ ಬಗ್ಗೆ ನನಗೆ ಈಗಲೂ ಗೌರವ ಇದೆ - ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ನಾನು ಈಗಾಗಲೇ ರಾಜೀನಾಮೆ ಕೊಟ್ಟೆ ಇಲ್ಲಿಗೆ ಬಂದಿರೋದು.. ರೇಣುಕಾಚಾರ್ಯಗೆ ಡಾ. ಕೆ. ಸುಧಾಕರ್ ತಿರುಗೇಟು
ನಾನು ಈಗಾಗಲೇ ರಾಜೀನಾಮೆ ಕೊಟ್ಟೆ ಇಲ್ಲಿಗೆ ಬಂದಿರೋದು.. ರೇಣುಕಾಚಾರ್ಯಗೆ ಡಾ. ಕೆ. ಸುಧಾಕರ್ ತಿರುಗೇಟು
Follow us
ಸಾಧು ಶ್ರೀನಾಥ್​
|

Updated on: May 06, 2021 | 11:31 AM

ಬೆಂಗಳೂರು: ಶಾಸಕ ಎಂಪಿ ರೇಣುಕಾಚಾರ್ಯ ಅವರು ಇತ್ತೀಚೆಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾಜೀನಾಮೆಗೆ ಒತ್ತಾಯ ಮಾಡಿದ್ದರು. ಈ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಾ. ಕೆ. ಸುಧಾಕರ್ ಅವರು ರೇಣುಕಾಚಾರ್ಯ ವಿರುದ್ದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಾನು ಈಗಾಗಲೇ ರಾಜೀನಾಮೆ ಕೊಟ್ಟೆ ಇಲ್ಲಿಗೆ ಬಂದಿರೋದು. ರಾಜೀನಾಮೆ ಕೊಟ್ಟು ಕಷ್ಟ ಅನುಭವಿಸಿ ಇಲ್ಲಿಗೆ ಬಂದಿದ್ದೇನೆ. ಸರ್ಕಾರ‌ನೂ ಬಂದಿದೆ. ಈ ಸಮಯದಲ್ಲಿ ನಾನು ರಾಜಕೀಯ ಮಾತಾಡಿಲ್ಲ ಎಂದಿದ್ದಾರೆ.

ನಾನು ಕೊರೊನಾ ಯೋಧನ ರೀತಿಯಲ್ಲಿ ವೈದ್ಯನಾಗಿ ಕೆಲಸ ಮಾಡ್ತಿದ್ದೇನೆ. ಈ ಸಮಯದಲ್ಲಿ ‌ನಾನು ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ. ಕೊರೊನಾ ಮುಗಿಯೋವರೆಗೂ ನಾನು ಯಾವ ಬೇಸರವನ್ನೂ ವ್ಯಕ್ತಪಡಿಸೊಲ್ಲ. ನನಗೆ ಯಾವ ಆಸೆಯೂ ಇಲ್ಲ. ಸರ್ಕಾರ ಮತ್ತು ಪಕ್ಷ ಕೊಡೋ ಆದೇಶದಂತೆ ಕೆಲಸ ಮಾಡ್ತೀನಿ. ಯಾರ ವೈಯಕ್ತಿಕ ವಿಚಾರವನ್ನು ನಾನು ಮಾತಾಡೊಲ್ಲ. ಯಾರ ಬಗ್ಗೆಯೂ ನಾನು ಹಗುರವಾಗಿ ಮಾತಾಡೊಲ್ಲ. ರೇಣುಕಾಚಾರ್ಯ ಬಗ್ಗೆ ನನಗೆ ಈಗಲೂ ಗೌರವ ಇದೆ ಎಂದು ಮಾರ್ಮಿಕವಾಗಿ ಹೇಳಿದರು.

ಅಧಿಕಾರ ಹಂಚಿಕೆ ಮಾಡಿರೋದು ನನಗೆ ಒಳ್ಳೆಯದೇ ಆಯ್ತು; ಈಗ ಆನೆ ಬಲ ಬಂದಂತಾಗಿದೆ:

ಸಚಿವರಿಗೆ ಅಧಿಕಾರ ಹಂಚಿಕೆ ಮಾಡಿರೋ ವಿಚಾರ ಪ್ರಸ್ತಾಪಿಸಿದಾಗ ಅಧಿಕಾರ ಹಂಚಿಕೆ ಮಾಡಿರೋದು ನನಗೆ ಯಾವುದೇ ಬೇಸರ ಇಲ್ಲ. ನನಗೆ ಇನ್ನೂ ಒಳ್ಳೆಯದಾಯ್ತು. ನನಗೆ ಈಗ ಆನೆ ಬಲ ಬಂದಂತೆ ಆಗಿದೆ. ಹಿರಿಯ ಸಚಿವರು ನನಗೆ ತುಂಬಾ ಸಹಕಾರ ಕೊಡ್ತಿದ್ದಾರೆ. ಎಲ್ಲರೂ ಅವ್ರವ್ರ ಕೆಲಸ ಉತ್ತಮವಾಗಿ ಮಾಡ್ತಿದ್ದಾರೆ. ಎರಡು‌-ಮೂರು ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನ ಸರಿ ಮಾಡ್ತಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕ್ಲುಪ್ತವಾಗಿ ಹೇಳಿದರು.

ನಮಗೆ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡಿ ಅಂತ ಕೇಳಿದ್ದೇವೆ: ಸದ್ಯ, ಲಸಿಕೆ ಲಭ್ಯವಿಲ್ಲದೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಸ್ಥಗಿತಗೊಂಡಿರುವ ವಿಚಾರ ಪ್ರಸ್ತಾಪಿಸಿದ ಆರೋಗ್ಯ ಸಚಿವ ಸುಧಾಕರ್, ನಮ್ಮ‌ ದೇಶದಲ್ಲಿ ಎರಡು ಲಸಿಕ ಕಂಪನಿಗಳು ಇವೆ. ಉತ್ಪಾದನೆ ಕಡಮೆ ಆಗ್ತಿರೋದ್ರೀಂದ ಲಸಿಕೆ ನಮಗೆ ಲಭ್ಯವಾಗ್ತಿಲ್ಲ. ಈಗಾಗಲೇ ಎರಡು ಕಂಪನಿಗಳ ಜೊತೆ ಮಾತಾಡಿದ್ದೇವೆ. ನಮಗೆ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡಿ ಅಂತ ಕೇಳಿದ್ದೇವೆ. ಮೇ 15 ಅಥವಾ ಮೇ 15 ನಂತ್ರ ಲಸಿಕೆ ಅಭಿಯಾನ ಪ್ರಾರಂಭ ಮಾಡ್ತೀವಿ. ಲಸಿಕೆ ‌ಕೋಡೋದು‌ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡೋ ಕಡೆ ನನ್ನ ಗಮನ ಇದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ನಿನ್ನೆಗೆ 1 ಕೋಟಿ ಜನರಿಗೆ ಕೊವಿಡ್ ಲಸಿಕೆ ನೀಡಿಕೆಯಾಗಿದೆ. 18-44 ವರ್ಷದೊಳಗಿನವರಿಗೆ ಲಸಿಕೆ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. 3ನೇ ಅಲೆ ಬರುವುದರೊಳಗೆ ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ.

(health minister dr k sudhakar reacts to mp renukacharya demand for his resignation)

ಸಚಿವ ಡಾ.ಸುಧಾಕರ ವಿರುದ್ಧ ಶಾಸಕ ಶಾಸಕ ರೇಣುಕಾಚಾರ್ಯ ವಾಗ್ದಾಳಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್