ಆಸ್ಪತ್ರೆಯಿಂದ ಚಿತಾಗಾರಕ್ಕೆ ಆ್ಯಂಬುಲೆನ್ಸ್ ಸಿಗದ ಕಾರಣ ತಾಯಿ ಮೃತದೇಹವನ್ನು ಕಾರಿನಲ್ಲೇ ತಂದ ಮಗ

|

Updated on: May 09, 2021 | 4:38 PM

ಆ್ಯಂಬುಲೆನ್ಸ್​ ವ್ಯವಸ್ಥೆ ಆಗದ ಕಾರಣ ಮಗ ತನ್ನ ಕಾರಿನಲ್ಲಿಯೇ ತಾಯಿಯ ಮೃತದೇಹವನ್ನು ತಂದ ಘಟನೆ ಲಕ್ಷ್ಮೀಪುರದ ಮೇಡಿ ಅಗ್ರಹಾರ ಚಿತಾಗಾರದ ಬಳಿ ನಡೆದಿದೆ.

ಆಸ್ಪತ್ರೆಯಿಂದ ಚಿತಾಗಾರಕ್ಕೆ ಆ್ಯಂಬುಲೆನ್ಸ್ ಸಿಗದ ಕಾರಣ ತಾಯಿ ಮೃತದೇಹವನ್ನು ಕಾರಿನಲ್ಲೇ ತಂದ ಮಗ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಕ್ಸಿಜನ್​ ಬೆಡ್​ಗಳಿಲ್ಲದೆ ಕೆಲವು ಸೋಂಕಿತರು ಪರದಾಡುತ್ತಿದ್ದರೆ ಇನ್ನು ಕೆಲವೆಡೆ ಮೃತದೇಹವನ್ನು ಕರೆದೊಯ್ಯಲು ಆ್ಯಂಬುಲೆನ್ಸ್​ ಇಲ್ಲದೇ ಹುಡುಕಾಡುವ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯಿಂದ ಚಿತಾಗಾರಕ್ಕೆ ತನ್ನ ತಾಯಿಯ ಮೃತದೇಹವನ್ನು ತರಲು ಆ್ಯಂಬುಲೆನ್ಸ್​ ವ್ಯವಸ್ಥೆ ಆಗದ ಕಾರಣ ಮಗ ತನ್ನ ಕಾರಿನಲ್ಲಿಯೇ ಮೃತದೇಹವನ್ನು ತಂದ ಘಟನೆ ಲಕ್ಷ್ಮೀಪುರದ ಮೇಡಿ ಅಗ್ರಹಾರ ಚಿತಾಗಾರದ ಬಳಿ ನಡೆದಿದೆ.

ತನ್ನ ತಾಯಿ ಲಕ್ಷ್ಮಿ (55) ಕೊರೊನಾ ಸೊಂಕಿನಿಂದ ಬಳಲುತ್ತಿದ್ದರು. ಆಸ್ಪತ್ರೆಗಳಲ್ಲಿ ಬೆಡ್​ ಸಿಗದೇ ಕಾರಿನಲ್ಲಿ ತಾಯಿಯನ್ನು ಕುರಿಸಿಕೊಡು ಆಸ್ಪತ್ರೆಗಾಗಿ ಪರದಾಡಿದ್ದರು. ಕೊನೆ ಕ್ಷಣದಲ್ಲಿ ದೇವನಹಳ್ಳಿಯ ರಾಮಯ್ಯ ಲೀಲಾ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಸಿಗುತ್ತದೆ. ಆದರೆ ಚಿಕಿತ್ಸೆ ಫಲಿಸದೇ ತಾಯಿ ಲಕ್ಷ್ಮಿ ಕೊನೆಯುಸಿರುಬಿಡುತ್ತಾರೆ. ಆದರೆ ಚಿತಾಗಾರಕ್ಕೆ ಮೃತದೇಹ ಕೊಂಡೊಯ್ಯಲು ಆ್ಯಂಬುಲೆನ್ಸ್​ ಸಿಗದ ಕಾರಣ ಮೃತದೇಹವನ್ನು ತನ್ನ ಕಾರಿನಲ್ಲಿಯೇ ಕೊಂಡೊಯ್ಯುತ್ತಾರೆ. ಅಜ್ಜಿಯನ್ನು ಕಳೆದುಕೊಂಡ ದುಃಖದಲ್ಲಿ ಚಿತಾಗಾರದ ಮುಂದೆ ಇಬ್ಬರು ಮೊಮ್ಮಕ್ಕಳು ಕಣ್ಣೀರು ಇಡುತ್ತಿದ್ದಾರೆ. ಇನ್ಮುಂದೆ ನೀವು ಅಜ್ಜಿ ಜೊತೆ ಜಗಳ ಆಡೋಕೆ ಆಗೋದಿಲ್ಲ ಎಂದು ಮೊಮ್ಮಕ್ಕಳ ಜೊತೆ ಲಕ್ಷ್ಮಿ ಮಗ ಕೂಡಾ ದುಃಖಿಸುತ್ತಿದ್ದಾರೆ.

ಸರ್ಕಾರಕ್ಕೆ ಇನ್ನೆಷ್ಟು ಜನರ ಬಲಿಬೇಕು? ತಮ್ಮವರನ್ನು ಕಳೆದುಕೊಂಡು ಸರ್ಕಾರಕ್ಕೆ ಶಾಪ ಹಾಕಿದ ಕುಟುಂಬಸ್ಥರು
ಕೊರೊನಾ ಸೋಂಕಿಗೆ ಅನೇಕ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೊರೊನಾಗೆ ಬಲಿಯಾದವರ ಕುಟುಂಬಗಳು ನಿತ್ಯ ಕಣ್ಣೀರಿನಲ್ಲಿ ಮುಳುಗಿದ್ದಾರೆ. ತಮ್ಮವರನ್ನು ಕಳೆದುಕೊಂಡು ಅದೆಷ್ಟೂ ಕುಟುಂಬಗಳು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದೆ. ಇಂತಹದ್ದೇ ಕರುಳು ಹಿಂಡುವ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವೈದ್ಯರ ಕಾಲು ಹಿಡಿದುಕೊಂಡ್ರೂ ನನ್ನ ಪತ್ನಿಯನ್ನ ಉಳಿಸಿಕೊಟ್ಟಿಲ್ಲ ಎಂದು 40 ವರ್ಷದ ಪತ್ನಿಯನ್ನ ಕಳೆದುಕೊಂಡ ಪತಿ ಕಣ್ಣೀರು ಇಟ್ಟಿದ್ದಾರೆ. ಈ ದೃಶ್ಯ ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ. ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಹಾಕಿದ್ರೂ ಜನ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಆದ್ರೆ ತಮಗೆ ಸರ್ವಸ್ವವೂ ಆಗಿದ್ದ ವ್ಯಕ್ತಿಗಳನ್ನು ಕಳೆದುಕೊಂಡ ಜನರ ಕಣ್ಣೀರು ನಿರ್ಲಕ್ಷ್ಯವಹಿಸುವವರಿಗೆ ಬುದ್ದಿ ಹೇಳುತ್ತಿದೆ.

ಇದನ್ನೂ ಓದಿ: ಸತತವಾಗಿ ಏರುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ; ಸಿಎಂ ಯಡಿಯೂರಪ್ಪನವರ ಜತೆ ಪ್ರಧಾನಿ ಮೋದಿ ಸಮಾಲೋಚನೆ

ಕೊರೊನಾ-ಕೊವಿಡ್​ 19 ಸ್ಪೆಲ್ಲಿಂಗ್ ಬದಲಿಸಿದರೆ ಸೋಂಕು ನಿರ್ಮೂಲನ ಖಚಿತ; ವೈರಲ್ ಆಗುತ್ತಿದೆ ಸಂಖ್ಯಾಶಾಸ್ತ್ರಜ್ಞನ ಜಾಹೀರಾತು