ತಂದೆಯನ್ನೇ ಕೊಂದ ಪಾಪಿ ಮಗ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 13, 2020 | 5:25 PM

ಕುಡಿತಕ್ಕೆ ವ್ಯಸನಿಯಾಗಿದ್ದ ರಾಮಚಂದ್ರಪ್ಪ ಹಣಕ್ಕಾಗಿ ಮಗನನ್ನು ಪ್ರತಿನಿತ್ಯ ಪೀಡಿಸುತ್ತಿದ್ದ. ಬೇಸತ್ತ ಮಗ ತಂದೆಯನ್ನು ದೊಣ್ಣೆಯಿಂದ ಹೊಡೆದು‌ ಕೊಲೆ ಮಾಡಿದ್ದಾನೆ.

ತಂದೆಯನ್ನೇ ಕೊಂದ ಪಾಪಿ ಮಗ
ಸಾಂದರ್ಭಿಕ ಚಿತ್ರ
Follow us on

ದಾವಣಗೆರೆ: ಹಣಕ್ಕಾಗಿ ಮಗ ಮತ್ತು ತಂದೆ ನಡುವೆ ಗಲಾಟೆಯಾಗಿದ್ದು, ಈ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ದಾವಣಗೆರೆ ತಾಲ್ಲೂಕಿನ ಒಡ್ಡಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮದ್ಯ ವ್ಯಸನಿಯಾಗಿದ್ದ ರಾಮಚಂದ್ರಪ್ಪ ಹಣಕ್ಕಾಗಿ ಮಗನನ್ನು ಪ್ರತಿನಿತ್ಯ ಪೀಡಿಸುತ್ತಿದ್ದ ಇದರಿಂದ ಬೇಸತ್ತ ಮಗ ಸಿದ್ದೇಶ್ (21), ತಂದೆ ರಾಮಚಂದ್ರಪ್ಪನನ್ನು (61) ಜಮೀನಿನಲ್ಲಿ ದೊಣ್ಣೆಯಿಂದ ಹೊಡೆದು‌ ಕೊಲೆ ಮಾಡಿದ್ದಾನೆ. ಸದ್ಯ ಈ ಪ್ರಕರಣ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹೆತ್ತ ಮಗನ ಎದೆ ಸೀಳಿ ಕೊಂದ ತಂದೆ, ಯಾಕೆ? ಎಲ್ಲಿ