Ugadi 2021: ಯುಗಾದಿ ಹಬ್ಬ, ಸಾರಿಗೆ ಸಿಬ್ಬಂದಿ ಮುಷ್ಕರ: ಸಾರ್ವಜನಿಕರ ನೆರವಿಗೆ ನೈರುತ್ಯ ರೈಲ್ವೆಯಿಂದ 20 ವಿಶೇಷ ರೈಲು

| Updated By: Digi Tech Desk

Updated on: Apr 10, 2021 | 3:12 PM

ಯುಗಾದಿಗೆಂದು ಬೆಂಗಳೂರಿನಿಂದ ಊರಿಗೆ ಹೊರಟಿದ್ದೀರಾ? ಸಾರಿಗೆ ಸಿಬ್ಬಂದಿಗಲ ಮುಷ್ಕರದಲ್ಲಿ ಮನೆ ಮುಟ್ಟೋದು ಹೇಗೆ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ? ಭಾರತೀಯ ರೈಲ್ವೆ 20 ವಿಶೇಷ ರೈಲುಗಳನ್ನು ಓಡಿಸಲಿದೆ.

Ugadi 2021: ಯುಗಾದಿ ಹಬ್ಬ, ಸಾರಿಗೆ ಸಿಬ್ಬಂದಿ ಮುಷ್ಕರ: ಸಾರ್ವಜನಿಕರ ನೆರವಿಗೆ ನೈರುತ್ಯ ರೈಲ್ವೆಯಿಂದ 20 ವಿಶೇಷ ರೈಲು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಯುಗಾದಿ ಹಬ್ಬ ಮತ್ತು ಕರ್ನಾಟಕದಲ್ಲಿನ ಸಾರಿಗೆ ಸಿಬ್ಬಂದಿಗಳ ಮುಷ್ಕರದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಪ್ರಿಲ್ 15ರವರೆಗೆ ಒಟ್ಟು 20 ಹೊಸ ರೈಲುಗಳನ್ನು ಪ್ರಾರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೇ ವಲಯ ತಿಳಿಸಿದೆ. ಈ ರೈಲುಗಳ ಪ್ರಯಾಣ ದರ ಸಾಮಾನ್ಯ ರೈಲುಗಳ ದರಕ್ಕಿಂತ ಶೇ 1.3ರಷ್ಟು ಹೆಚ್ಚಿದೆ.  ಇತರ ರೈಲುಗಳಿಗಿಂತ ಹೆಚ್ಚು ಸೌಲಭ್ಯವನ್ನೂ ಒದಗಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಏಪ್ರಿಲ್ 13ರಂದು ಯುಗಾದಿ ಹಬ್ಬವಿದ್ದು , ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ರೈಲು ಮುಷ್ಕರವೂ ನಡೆಯುತ್ತಿದೆ. ಬೆಂಗಳೂರಿನಿಂದ ತಮ್ಮ ಊರುಗಳಿಗೆ ಸಾಮಾನ್ಯ ದಿನಗಳಿಗಿಂತ ಹೆಚ್ಚು ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ.

20 ವಿಶೇಷ ರೈಲುಗಳ ಪೈಕಿ 8 ರೈಲುಗಳು ಬೆಂಗಳೂರಿನ ಯಶವಂತಪುರದಿಂದ ಮೂರು ರೈಲುಗಳು ಪ್ರಯಾಣ ಬೆಳೆಸಲಿವೆ. ಎರಡು ರೈಲುಗಳು ಬೆಳಗಾವಿ, ಬೀದರ್ಗಳಿಂದ ಹೊರಡಲಿವೆ. ತಲಾ ಒಂದೊಂದು ರೈಲುಗಳು ಕೆಎಸ್ಆರ್ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಕಾರವಾರ ಮತ್ತು ವಿಜಯಪುರಗಳಿಂದ ಹೊರಡಲಿವೆ. ಏಪ್ರಿಲ್ 8ರಿಂದ ಈ ವಿಶೇಷ ರೈಲುಗಳು ಆರಂಭವಾಗಲಿದ್ದು, ಯುಗಾದಿ ಹಬ್ಬಕ್ಕೆ ಪ್ರಯಾಣಿಕರಿಗೆ ಭರ್ಜರಿ ಕೊಡುಗೆ ನೀಡಿದಂತಾಗಿದೆ.

ಭಾರತೀಯ ರೈಲ್ವೇ

ಈ ವೇಳಾಪಟ್ಟಿಯಲ್ಲಿ ಇರುವ ರೈಲುಗಳನ್ನು ಹೊರತುಪಡಿಸಿ ಇನ್ನೂ ಎರಡು ವಿಶೇಷ  ರೈಲುಗಳನ್ನು ಓಡಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. ಏಪ್ರಿಲ್ 14ರಂದು ವಿಯಪುರದಿಂದ ಯಶವಂತಪುರಕ್ಕೆ ಮತ್ತು  ಏಪ್ರಿಲ್ 15ರಂದು ಯಶವಂತಪುರದಿಂದ ಹುಬ್ಬಳ್ಳಿಗೆ ವಿಶೇಷ ರೈಲುಗಳು ಹೊರಡಲಿವೆ.

ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಏಪ್ರಿಲ್ 7ರಿಂದ ರಾಜ್ಯದಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ ಕೈಗೊಂಡಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ತಪ್ಪಿಲು ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವಂತೆ ಭಾರತೀಯ ರೈಲ್ವೇ ಇಲಾಖೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದರು. ಅದರಂತೆ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೇ ಇಲಾಖೆಯು ಬೀದರ್, ವಿಜಯಪುರ, ಮೈಸೂರು, ಬಾಗಲಕೋಟೆ, ಕಾರವಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಶೇಷ ರೈಲು ವ್ಯವಸ್ಥೆ ಮಾಡಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ಯುಗಾದಿ ಹಬ್ಬ ಸಹ ಬರುತ್ತಿದ್ದ ಜನರಿಗೆ ತೊಂದರೆ ಆಗಬಾರದೆಂದು ಅವರ ಪ್ರಯಾಣಕ್ಕೆ ಅನುಕೂಲವಾಗಲೆಂದು ನೈಋತ್ಯ ರೈಲ್ವೇ ಗುರುವಾರದಿಂದ ಏಪ್ರಿಲ್ 14ರ ವರೆಗೆ ಹೆಚ್ಚಿನ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಹೊಸ ವರ್ಷದ ಸಂಭ್ರಮದಲ್ಲಿ ಆಚರಿಸುವ ಯುಗಾದಿ ಹಬ್ಬಕ್ಕೆ ಜನ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು ಹೆಚ್ಚಾಗಿರುತ್ತೆ. ಆದ್ರೆ ಸಾರಿಗೆ ನೌಕರರ ಮುಷ್ಕರದಿಂದ ಜನರಿಗೆ ಸಮಸ್ಯೆಯಾಗಬಾರದೆಂದು ರೈಲು ಸೇವೆಯನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಇನ್ನು ಮುಂದೆ ರೈಲುಗಳಲ್ಲಿ ರಾತ್ರಿ ಪ್ರಯಾಣದ ವೇಳೆ ಮೊಬೈಲ್, ಲ್ಯಾಪ್​ಟಾಪ್​ ಚಾರ್ಜ್​ ಮಾಡಲು ಅವಕಾಶ ಸಿಗದು?

ಮುಂಬೈನಲ್ಲಿ ಕೊವಿಡ್ ನಿರ್ಬಂಧ: ರೈಲು ಸಂಚಾರ ಸ್ಥಗಿತಗೊಳ್ಳುವ ಭಯದಿಂದ ಊರಿನತ್ತ ಹೆಜ್ಜೆ ಹಾಕಿದ ವಲಸೆ ಕಾರ್ಮಿಕರು

(South Western railway operates 20 special trains to avoid rush by Ugadi and Karnataka bus strike)

Published On - 9:09 am, Sat, 10 April 21