
ಬೆಂಗಳೂರು, ಜೂನ್ 14: ಎಸ್ಎಂವಿಟಿ ಬೆಂಗಳೂರು ಮತ್ತು ಬೀದರ್ ನಡುವೆ ನೈಋತ್ಯ ರೈಲ್ವೆ (SWR) ವಿಶೇಷ ರೈಲುಗಳನ್ನು (Special Train) ಘೋಷಿಸಿದೆ. ರೈಲು ಸಂಖ್ಯೆ 06539 ಎಸ್ಎಂವಿಟಿ ಬೆಂಗಳೂರು-ಬೀದರ್ ಎಕ್ಸ್ಪ್ರೆಸ್ ವಿಶೇಷ ರೈಲು ಜೂನ್ 15 ರಿಂದ 29 ರವರೆಗೆ ಶುಕ್ರವಾರ ಮತ್ತು ಭಾನುವಾರಗಳಂದು ಒಟ್ಟು ಐದು ಟ್ರಿಪ್ ಸಂಚಾರ ಮಾಡಲಿದೆ. ಹಾಗೆಯೇ ರೈಲು ಸಂಖ್ಯೆ 06540 ಬೀದರ್-ಎಸ್ಎಂವಿಟಿ ಬೆಂಗಳೂರು ಕೂಡ ಶನಿವಾರ ಮತ್ತು ಸೋಮವಾರ ಒಟ್ಟು ಐದು ಟ್ರಿಪ್ ಸಂಚಾರ ಮಾಡಲಿದೆ.
ಎಸ್ಎಂವಿಟಿ ಬೆಂಗಳೂರು-ಬೀದರ್ ಎಕ್ಸ್ಪ್ರೆಸ್ ವಿಶೇಷ ರೈಲು ಬೆಂಗಳೂರಿನಿಂದ ರಾತ್ರಿ 9.15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 11.30 ಕ್ಕೆ ಬೀದರ್ ತಲುಪಲಿದೆ. ಬೀದರ್-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು ಬೀದರ್ನಿಂದ ತಡರಾತ್ರಿ 1 ಗಂಟೆಗೆ ಹೊರಟು ಮರುದಿನ ಬೆಳಗಿನ ಜಾವ 4 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಬೆಂಗಳೂರು ಬೀದರ್ ವಿಶೇಷ ಎಕ್ಸ್ಪ್ರೆಸ್ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಮತ್ತು ಹುಮನಾಬಾದ್ನಲ್ಲಿ ನಿಲುಗಡೆಯಾಗಲಿದೆ.
ಇದನ್ನೂ ಓದಿ: South Western Railway: ಎಕ್ಸ್ಪ್ರೆಸ್ ರೈಲುಗಳ ಸಮಯಲ್ಲಿ ಬದಲಾವಣೆ ಮಾಡಿದ ನೈಋತ್ಯ ರೈಲ್ವೆ
Published On - 7:49 am, Sat, 14 June 25