ಕೊರೊನಾ ವಾರಿಯರ್ಸ್​ಗಾಗಿಯೇ ಸಿದ್ಧವಾಯ್ತು ವಿಶೇಷ ರೋಬೋ!

|

Updated on: Apr 19, 2020 | 1:40 PM

ಬೆಂಗಳೂರು: ಕಿಲ್ಲರ್ ಕೊರೊನಾ ವಿರುದ್ಧ ಸೆಣಸಾಡುತ್ತಿರುವ ವೈದ್ಯರಿಗಾಗಿಯೇ ವಿಪ್ರೋ ಸಂಸ್ಥೆ ವಿಶೇಷವಾಗಿ ರೋಬೋ ಪರಿಚಯಿಸಿದೆ. ರೋಗಿಗಳ ಸ್ಯಾಂಪಲ್, ಆಹಾರ, ಔಷಧ ನೀಡಲು ರೋಬೋ ಸಾಥ್ ನೀಡಲಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರೋಬೋಗಳನ್ನು ಸರ್ಕಾರ ಅಖಾಡಕ್ಕಿಳಿಸಿದೆ. ಮೊಬೈಲ್ ರಿಮೋಟ್​ಗಳಿಂದ ಈ ರೋಬೋಗಳನ್ನು ಕಂಟ್ರೋಲ್ ಮಾಡಬಹುದಾಗಿದೆ. ಎರಡು ಮೂರು ಬಗೆಯ ರೋಬೋಗಳನ್ನು ಸರ್ಕಾರ ಪರಿಚಯಿಸಿದ್ದು, ಈ ರೋಬೋ ಟ್ರಾಲಿಗಳು ವೈದ್ಯಕೀಯ ಸಿಬ್ಬಂದಿಗೆ ಮಹಾಶಕ್ತಿ ನೀಡಲಿವೆ. ಬೆಂಗಳೂರು ಮೆಡಿಕಲ್ ಕಾಲೇಜು ಅಂಡ್ ರೀಸರ್ಚ್ ಇನ್ಸಿಟ್ಯೂಟ್​ನಲ್ಲಿ ರೋಬೋ ಆಟ ಶುರುವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ […]

ಕೊರೊನಾ ವಾರಿಯರ್ಸ್​ಗಾಗಿಯೇ ಸಿದ್ಧವಾಯ್ತು ವಿಶೇಷ ರೋಬೋ!
Follow us on

ಬೆಂಗಳೂರು: ಕಿಲ್ಲರ್ ಕೊರೊನಾ ವಿರುದ್ಧ ಸೆಣಸಾಡುತ್ತಿರುವ ವೈದ್ಯರಿಗಾಗಿಯೇ ವಿಪ್ರೋ ಸಂಸ್ಥೆ ವಿಶೇಷವಾಗಿ ರೋಬೋ ಪರಿಚಯಿಸಿದೆ. ರೋಗಿಗಳ ಸ್ಯಾಂಪಲ್, ಆಹಾರ, ಔಷಧ ನೀಡಲು ರೋಬೋ ಸಾಥ್ ನೀಡಲಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರೋಬೋಗಳನ್ನು ಸರ್ಕಾರ ಅಖಾಡಕ್ಕಿಳಿಸಿದೆ. ಮೊಬೈಲ್ ರಿಮೋಟ್​ಗಳಿಂದ ಈ ರೋಬೋಗಳನ್ನು ಕಂಟ್ರೋಲ್ ಮಾಡಬಹುದಾಗಿದೆ.

ಎರಡು ಮೂರು ಬಗೆಯ ರೋಬೋಗಳನ್ನು ಸರ್ಕಾರ ಪರಿಚಯಿಸಿದ್ದು, ಈ ರೋಬೋ ಟ್ರಾಲಿಗಳು ವೈದ್ಯಕೀಯ ಸಿಬ್ಬಂದಿಗೆ ಮಹಾಶಕ್ತಿ ನೀಡಲಿವೆ. ಬೆಂಗಳೂರು ಮೆಡಿಕಲ್ ಕಾಲೇಜು ಅಂಡ್ ರೀಸರ್ಚ್ ಇನ್ಸಿಟ್ಯೂಟ್​ನಲ್ಲಿ ರೋಬೋ ಆಟ ಶುರುವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ ರೋಬೋ ಪ್ರಯೋಗ ಮಾಡಲಿದ್ದು, ಪರೀಕ್ಷೆ ಸಕ್ಸಸ್ ಆದ್ರೆ ರೋಬೋಗಳಿಂದಲೇ ಕೊರೊನಾ ಸೋಂಕಿತರ ಆರೈಕೆ ಮಾಡಲಾಗುವುದು.