ಶಬರಿಮಲೆ ಭಕ್ತರಿಗಾಗಿ ಹುಬ್ಬಳ್ಳಿ-ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲು ಸಂಚಾರ

|

Updated on: Nov 27, 2024 | 7:54 PM

ಈ ರೈಲುಗಳು ಖಾನಾಪುರ, ಲೋಂಡಾ, ಧಾರವಾಡ, ಎಸ್​ಎಸ್​ಎಸ್​ ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ತುಮಕೂರು, ಎಎಸ್​ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ, ಕೊಟ್ಟಾಯಂ, ಚಂಗನಾಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.

ಶಬರಿಮಲೆ ಭಕ್ತರಿಗಾಗಿ ಹುಬ್ಬಳ್ಳಿ-ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲು ಸಂಚಾರ
ರೈಲು
Follow us on

ಬೆಂಗಳೂರು: ಕರ್ನಾಟಕದಿಂದ ಕೇರಳದ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಇಲಾಖೆ ಹುಬ್ಬಳ್ಳಿ-ಕೊಲ್ಲಂ ಮತ್ತು ಬೆಳಗಾವಿ-ಕೊಲ್ಲಂ ನಿಲ್ದಾಣಗಳ ನಡುವೆ 6 ವಿಶೇಷ ರೈಲುಗಳ ಸೇವೆಯನ್ನು ವ್ಯವಸ್ಥೆ ಮಾಡಿದೆ. ರೈಲು ಸಂಖ್ಯೆ 07313 ಎಸ್​ಎಸ್​ಎಸ್​ ಹುಬ್ಬಳ್ಳಿ-ಕೊಲ್ಲಂ-ಎಸ್​ಎಸ್​ಎಸ್​ ಹುಬ್ಬಳ್ಳಿ ವಿಶೇಷ ಎಕ್ಸ್​ಪ್ರೆಸ್​ 6 ಟ್ರಿಪ್ ಸಂಚರಿಸಲಿದೆ. ಡಿಸೆಂಬರ್ 5ರಿಂದ ಜನವರಿ 9ರವರೆಗೆ ಹುಬ್ಬಳ್ಳಿಯಿಂದ ಪ್ರತಿ ಗುರುವಾರ ಸಂಜೆ 5.30ಕ್ಕೆ ಹೊರಡಲಿದೆ. ಮರುದಿನ ಸಂಜೆ 4.30ಕ್ಕೆ ಕೊಲ್ಲಂ ತಲುಪಲಿದೆ.

ಡಿಸೆಂಬರ್ 6ರಿಂದ ಜನವರಿ 10ರವರೆಗೆ ರೈಲು ಸಂಖ್ಯೆ 07314 ಕೊಲ್ಲಂನಿಂದ ಪ್ರತಿ ಶುಕ್ರವಾರ ಸಂಜೆ 6.30ಕ್ಕೆ ಹೊರಡಲಿದ್ದು, ಮರುದಿನ ಸಂಜೆ 7.35ಕ್ಕೆ ಎಸ್​ಎಸ್​ಎಸ್​ ಹುಬ್ಬಳ್ಳಿ ತಲುಪಲಿದೆ. ಈ ಎರಡೂ ರೈಲು ಮಾರ್ಗಗಳಲ್ಲಿ ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ತುಮಕೂರು, ಎಸ್​ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಅಲುವಾ, ಎರ್ನಾಕುಲಂ, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ್, ಕಾಯಂಕುಲಂ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.

ಇದನ್ನೂ ಓದಿ: ಆರ್‌ಆರ್‌ಬಿ ಪರೀಕ್ಷೆಗೆ ಹಾಜರಾಗುವವರಿಗೆ ಗುಡ್ ನ್ಯೂಸ್: ಈ ಮಾರ್ಗಗಳಲ್ಲಿ 4 ಟ್ರಿಪ್ ವಿಶೇಷ ರೈಲು

ಹಾಗೇ, ಡಿಸೆಂಬರ್ 9ರಿಂದ ಜನವರಿ 13ರವರೆಗೆ ರೈಲು ಸಂಖ್ಯೆ 07317 ಬೆಳಗಾವಿಯಿಂದ ಪ್ರತಿ ಸೋಮವಾರ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ಮರುದಿನ ಸಂಜೆ 4.30ಕ್ಕೆ ಕೊಲ್ಲಂ ತಲುಪಲಿದೆ.

ಡಿಸೆಂಬರ್ 10ರಿಂದ ಜನವರಿ 14ರವರೆಗೆ ರೈಲು ಸಂಖ್ಯೆ 07318 ಕೊಲ್ಲಂನಿಂದ ಪ್ರತಿ ಮಂಗಳವಾರ ಸಂಜೆ 6.30ಕ್ಕೆ ಹೊರಡಲಿದೆ. ಮರುದಿನ ರಾತ್ರಿ 10 ಗಂಟೆಗೆ ಬೆಳಗಾವಿ ತಲುಪಲಿದೆ.

ಇದನ್ನೂ ಓದಿ: ಕರ್ನಾಟಕದ ಈ ರೈಲುಗಳು ಎರಡು ದಿನ ರದ್ದು ಮತ್ತು ಮಾರ್ಗ ಬದಲಾವಣೆ

ಈ ರೈಲುಗಳು ಖಾನಾಪುರ, ಲೋಂಡಾ, ಧಾರವಾಡ, ಎಸ್​ಎಸ್​ಎಸ್​ ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ತುಮಕೂರು, ಎಎಸ್​ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ, ಕೊಟ್ಟಾಯಂ, ಚಂಗನಾಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ