ಆರ್‌ಆರ್‌ಬಿ ಪರೀಕ್ಷೆಗೆ ಹಾಜರಾಗುವವರಿಗೆ ಗುಡ್ ನ್ಯೂಸ್: ಈ ಮಾರ್ಗಗಳಲ್ಲಿ 4 ಟ್ರಿಪ್ ವಿಶೇಷ ರೈಲು

ಆರ್‌ಆರ್‌ಬಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಕರ್ನಾಟಕದ ಒಂದು ಮಾರ್ಗದಲ್ಲಿ ನಾಲ್ಕು ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಘೋಷಿಸಿದೆ. ನವೆಂಬರ್ 24 ರಿಂದ 28 ರವರೆಗೆ ಈ ರೈಲುಗಳು ಸಂಚರಿಸಲಿವೆ. ರೈಲುಗಳು ಸಂಚರಿಸುವ ಮಾರ್ಗ, ವೇಳಾಪಟ್ಟಿ ಮತ್ತು ನಿಲುಗಡೆಗಳ ಮಾಹಿತಿ ಇಲ್ಲಿದೆ.

ಆರ್‌ಆರ್‌ಬಿ ಪರೀಕ್ಷೆಗೆ ಹಾಜರಾಗುವವರಿಗೆ ಗುಡ್ ನ್ಯೂಸ್: ಈ ಮಾರ್ಗಗಳಲ್ಲಿ 4 ಟ್ರಿಪ್ ವಿಶೇಷ ರೈಲು
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Nov 22, 2024 | 9:05 AM

ಬೆಂಗಳೂರು, ನವೆಂಬರ್ 22: ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ 4 ಟ್ರಿಪ್ ವಿಶೇಷ ರೈಲುಗಳ ಘೋಷಣೆ ಮಾಡಿದೆ. ಹುಬ್ಬಳ್ಳಿ-ಕರ್ನೂಲ್ ಸಿಟಿ ನಡುವೆ ಈ ರೈಲುಗಳು ಸಂಚರಿಸಲಿವೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ರೈಲುಗಳ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.

ಆರ್‌ಆರ್‌ಬಿ (ರೈಲ್ವೆ ನೇಮಕಾತಿ ಮಂಡಳಿ) ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲಕ್ಕಾಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕರ್ನೂಲ್ ಸಿಟಿ ನಿಲ್ದಾಣಗಳ ನಡುವೆ 4 ಟ್ರಿಪ್ ವಿಶೇಷ ಕಾಯ್ದಿರಿಸದ ರೈಲು ಓಡಿಸಲು ರೈಲ್ವೆ ಮಂಡಳಿಯು ಸೂಚಿಸಿದೆ ಎಂದು ಎಕ್ಸ್​ ಸಂದೇಶದಲ್ಲಿ ನೈಋತ್ಯ ರೈಲ್ವೆ ತಿಳಿಸಿದೆ.

ಹುಬ್ಬಳ್ಳಿ-ಕರ್ನೂಲ್ ಸಿಟಿ ವಿಶೇಷ ರೈಲುಗಳ ವಿವರ

ರೈಲು ಸಂಖ್ಯೆ 07315 ಎಸ್ಎಸ್ಎಸ್ ಹುಬ್ಬಳಿ-ಕರ್ನೂಲ್ ಸಿಟಿ ಕಾಯ್ದಿರಿಸದ ವಿಶೇಷ ಎಕ್ಸ್​​ಪ್ರೆಸ್ ರೈಲು ನವೆಂಬರ್ 24, 25. 26 ಮತ್ತು 27 ರಂದು ರಾತ್ರಿ 8:15 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ಸಿಟಿ ಕರ್ನೂಲ್ ಸಿಟಿ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 07316 ಕರ್ನೂಲ್ ಸಿಟಿ-ಎಸ್‌ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ಎಕ್ಸ್​​ಪ್ರೆಸ್ ರೈಲು ನವೆಂಬರ್ 25, 26, 27 ಮತ್ತು 28 ರಂದು ಬೆಳಿಗ್ಗೆ 07:30 ಗಂಟೆಗೆ ಕರ್ನೂಲ್ ಸಿಟಿ ನಿಲ್ದಾಣದಿಂದ ಹೊರಟು, ಅದೇ ದಿನ ಸಂಜೆ 4:15 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ರೈಲು ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ಗುಂತಕಲ್ ಮತ್ತು ಡೋನ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ನೈಋತ್ಯ ರೈಲ್ವೆ ಎಕ್ಸ್​ ಸಂದೇಶ

ಈ ರೈಲು ಸಾಮಾನ ದಿತೀಯ ದರ್ಜೆ (8) ಮತ್ತು ಅಂಗವಿಕಲರಿಗೆ ಮೀಸಲಾದ ಬೋಗಿಗಳೊಂದಿಗೆ ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ (2) ಸೇರಿದಂತೆ 10 ಬೋಗಿಗಳನ್ನು ಹೊಂದಿರುತ್ತದೆ.

ಪ್ರಯಾಣಕರು ಭಾರತೀಯ ರೈಲ್ವೆ ಅಧಿಕೃತ ವೆಬ್​ಸೈಟ್ (www.enquiry.indianrail.gov.in) ಗೆ ಭೇಟಿ ನೀಡುವ ಮೂಲಕ NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ಪರಿಶೀಲಿಸಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ