Spice jet: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ವಿಮಾನ ದುರಂತ

| Updated By: ಸಾಧು ಶ್ರೀನಾಥ್​

Updated on: Oct 25, 2021 | 2:18 PM

Sambra airport in Belagavi: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನವೊಂದು ದುರಂತದಿಂದ ಪಾರಾಗಿದ್ದು, ನಿನ್ನೆ ಸಂಜೆ ಈ ಆಕಸ್ಮಿಕ ಘಟನೆ ನಡೆದಿದೆ. ಖಾಸಗಿ ರಂಗದ ಸ್ಪೈಸ್​ ಜೆಟ್ ವಿಮಾನ ನಿನ್ನೆ ರಾಂಗ್​ ರನ್​ವೇನಲ್ಲಿ ಲ್ಯಾಂಡ್​ ಆಗಿದೆ. ಸದರಿ ವಿಮಾನವು ಬೆಳಗಾವಿ-ಹೈದರಾಬಾದ್​ ನಡುವೆ ಸಂಚರಿಸುತ್ತಿತ್ತು.

Spice jet: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ವಿಮಾನ ದುರಂತ
Spice jet: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ
Follow us on

ಬೆಳಗಾವಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನವೊಂದು ದುರಂತದಿಂದ ಪಾರಾಗಿದ್ದು, ನಿನ್ನೆ ಸಂಜೆ ಈ ಆಕಸ್ಮಿಕ ಘಟನೆ ನಡೆದಿದೆ. ಖಾಸಗಿ ರಂಗದ ಸ್ಪೈಸ್​ ಜೆಟ್ ವಿಮಾನವು (SpiceJet) ನಿನ್ನೆ ಭಾನುವಾರ ರಾಂಗ್​ ರನ್​ವೇನಲ್ಲಿ ಲ್ಯಾಂಡ್​ ಆಗಿದೆ. ಸದರಿ ವಿಮಾನವು ಹೈದರಾಬಾದ್​ನಿಂದ ಬೆಳಗಾವಿಗೆ ಬಂದಿತ್ತು.

26ನೇ ರನ್​ವೇನಲ್ಲಿ ಲ್ಯಾಂಡಿಂಗ್ ಆಗಬೇಕಿದ್ದ ವಿಮಾನವು (SpiceJet DASH8 Q400 aircraft) 26ರ ಬದಲು 8ನೇ ರನ್​ವೇನಲ್ಲಿ (RWY08- runway 8)) ಲ್ಯಾಂಡಿಂಗ್ ಆಗಿದೆ. 8ನೇ ರನ್​ವೇನಲ್ಲಿ ಯಾವುದೇ ವಿಮಾನ ಇಲ್ಲದಿದ್ದರಿಂದ ಸೇಫ್ ಆಗಿರುವುದು ಸ್ಪಷ್ಟವಾಗಿದೆ. ವಿಮಾನ ಅಪಘಾತ ತನಿಖಾ ದಳವು ತನಿಖೆ ಆರಂಭಿಸಿದೆ. ಅಪಘಾತ ತನಿಖಾ ದಳವು ಪೈಲಟ್​ಗಳನ್ನು ತನಿಖೆಗೆ ಒಳಪಡಿಸಿದೆ.

Directorate General of Civil Aviation (DGCA) ಮತ್ತು Aircraft Accident Investigation Bureau (AAIB ) ಮಾಹಿತಿಯನ್ನಾಧರಿಸಿ, ತನಿಖೆಯನ್ನು ಕಾಯ್ದಿರಿ ಇಬ್ಬರೂ ಪೈಲಟ್​​ಗಳನ್ನು ಸೇವೆಯಿಂದ ವಾಪಸ್​ (rostered) ಪಡೆಯಲಾಗಿದೆ ಎಂದು ಸ್ಪೈಸ್​ ಜೆಟ್ ವಿಮಾನ ಕಂಪನಿಯ ವಕ್ತಾರರು (SpiceJet spokesperson) ತಿಳಿಸಿದ್ದಾರೆ.

ಇದನ್ನೂ ಓದಿ:

Air India: ಕೇಂದ್ರ ಸಚಿವರಿದ್ದ ಏರ್ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಪಕ್ಷಿ; ತಪ್ಪಿದ ಭಾರೀ ದುರಂತ

ಪ್ರಾಥಮಿಕ ಶಾಲೆ ಆರಂಭದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸಂತಸ|School Open Students, Teachers Opinion

(Spice jet flight lands on wrong runway in sambra airport in belagavi)

Published On - 2:06 pm, Mon, 25 October 21