ಕಲಬುರಗಿ: ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಅಕ್ರಮಕ್ಕೆ ಯತ್ನ; 3 ಅಭ್ಯರ್ಥಿಗಳು ಸೇರಿ 11 ಜನರ ಬಂಧನ
ಅಭ್ಯರ್ಥಿಗಳು ಬ್ಲೂಟೂತ್ ಮೂಲಕ ಉತ್ತರ ಬರೆಯಲು ಪ್ಲ್ಯಾನ್ ಮಾಡಿದ್ದರು. ಈ ಸಂಬಂಧ ಅಭ್ಯರ್ಥಿಗಳಾದ ರಾಜಕುಮಾರ್, ಪೀರಪ್ಪ, ಮಾಳಪ್ಪ ಬಂಧಿತರಾಗಿದ್ದಾರೆ. ಬಂಧಿತರು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಿವಾಸಿಗಳು ಎಂದು ತಿಳಿದುಬಂದಿದೆ.
ಕಲಬುರಗಿ: ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಅಕ್ರಮಕ್ಕೆ ಮುಂದಾಗಿದ್ದ ಮೂವರು ಅಭ್ಯರ್ಥಿಗಳು ಸೇರಿ ಒಟ್ಟು 11 ಜನರನ್ನು ಬಂಧಿಸಲಾಗಿದೆ. ಕಲಬುರಗಿಯಲ್ಲಿ ಮೂವರು ಅಭ್ಯರ್ಥಿಗಳು ಸೇರಿ 11 ಜನರು ಸೆರೆಯಾಗಿದ್ದಾರೆ. ಅಭ್ಯರ್ಥಿಗಳು ಬ್ಲೂಟೂತ್ ಮೂಲಕ ಉತ್ತರ ಬರೆಯಲು ಪ್ಲ್ಯಾನ್ ಮಾಡಿದ್ದರು. ಈ ಸಂಬಂಧ ಅಭ್ಯರ್ಥಿಗಳಾದ ರಾಜಕುಮಾರ್, ಪೀರಪ್ಪ, ಮಾಳಪ್ಪ ಬಂಧಿತರಾಗಿದ್ದಾರೆ. ಬಂಧಿತರು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಿವಾಸಿಗಳು ಎಂದು ತಿಳಿದುಬಂದಿದೆ.
ಅಭ್ಯರ್ಥಿಗಳು ಬನಿಯನ್ನಲ್ಲಿ ಡಿವೈಸ್ ಇಟ್ಕೊಂಡು ಪರೀಕ್ಷೆಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು. ನಗರದ ಲಾಡ್ಜ್ನಲ್ಲಿ ಕುಳಿತು ಸ್ಕೆಚ್ ಹಾಕುತ್ತಿದ್ದ ಗ್ಯಾಂಗ್ ಇದೀಗ ಸೆರೆ ಸಿಕ್ಕಿದೆ. ಒಂದು ಅಭ್ಯರ್ಥಿಯ ಡಿವೈಸ್ ಬನಿಯನ್‌ಗೆ 5 ಲಕ್ಷ ರೂಪಾಯಿ ನಿಗದಿಪಡಿಸಲಾಗಿತ್ತು. ಕಲಬುರಗಿ ಅಪರಾಧ ಪತ್ತೆ ವಿಭಾಗದ ಪೊಲೀಸರಿಂದ ಬಂಧನವಾಗಿದೆ. ದಂಧೆಯ ಕಿಂಗ್‌ಪಿನ್‌ಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಅಕ್ಟೋಬರ್ 24 ರಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ಪರೀಕ್ಷೆಗೂ ಮುನ್ನ, ಅಂದರೆ ಅಕ್ಟೋಬರ್ 23 ರಂದು ಪೊಲೀಸರು ದಾಳಿ ನಡೆಸಿ ದಂಧೆ ಬಯಲು ಮಾಡಿದ್ದಾರೆ.
ಬೆಳಗಾವಿ: ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನ; ಅಭ್ಯರ್ಥಿಗಳು ಇಬ್ಬರು ಸೇರಿ 14 ಜನ ಸೆರೆ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ ಘಟನೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅಭ್ಯರ್ಥಿಗಳಿಬ್ಬರು ಸೇರಿ 14 ಜನ ಸೆರೆಯಾಗಿದ್ದರು. ರಾಮತೀರ್ಥ ನಗರದ ಎಸ್.ಎಸ್. ಡೆಕೋರೆಟರ್ ಹಾಗೂ ಇವೆಂಟ್ ಪ್ಲ್ಯಾನರ್ ಕಚೇರಿ ಮೇಲೆ ದಾಳಿ ನಡೆಸಿ ಬಂಧಿಸಲಾಗಿತ್ತು. ಬ್ಲ್ಯೂಟೂತ್ ಮೂಲಕ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ್ದರು ಎಂದು ತಿಳಿದುಬಂದಿತ್ತು.
ಈ ಸಂಬಂಧ 33 ಮೊಬೈಲ್, 9 ಮಾಸ್ಟರ್ ಕಾರ್ಡ್, 19 ಬ್ಲ್ಯೂಟೂತ್, 1 ಟ್ಯಾಬ್, ಲ್ಯಾಪ್ ಟಾಪ್, ಪ್ರಿಂಟರ್, ಕಾರು ಹಾಗೂ 3 ಬೈಕ್ ಜಪ್ತಿ ಮಾಡಲಾಗಿತ್ತು. ವನಿತಾ ವಿದ್ಯಾಲಯದಲ್ಲಿ ಓರ್ವ ಮಹಿಳಾ ಅಭ್ಯರ್ಥಿ ಬಂಧನವಾಗಿತ್ತು. ಸರ್ದಾರ್ ಪಿಯು ಕಾಲೇಜಿನಲ್ಲಿ ಓರ್ವ ಅಭ್ಯರ್ಥಿ ಬಂಧನವಾಗಿತ್ತು. ಖಚಿತ ಮಾಹಿತಿ ಮೇರೆಗೆ ಸಿಇಎನ್ ಪೊಲೀಸರು ಅಭ್ಯರ್ಥಿಗಳನ್ನು ಬಂಧಿಸಿದ್ದರು. ಬೆಳಗಾವಿ ನಗರದ ಮಾಳಮಾರುತಿ, ಖಡೇಬಜಾರ್ ಠಾಣೆ ಕ್ಯಾಂಪ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ: ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನ; ಅಭ್ಯರ್ಥಿಗಳು ಇಬ್ಬರು ಸೇರಿ 14 ಜನ ಸೆರೆ
ಇದನ್ನೂ ಓದಿ: ಇಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ; ಪೊಲೀಸ್ ಇಲಾಖೆಯಿಂದ ಬಯೋಮೆಟ್ರಿಕ್ ಬಳಕೆ