ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್-​ ಬಿಜೆಪಿ ಜಟಾಪಟಿ: ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ಕಾಂಗ್ರೆಸ್​ ಸದಸ್ಯರು.

| Updated By: Pavitra Bhat Jigalemane

Updated on: Dec 16, 2021 | 4:17 PM

ಪೊಲೀಸರು ನಮ್ಮನ್ನು ಸುವರ್ಣಸೌಧ ಬಳಿ ತಡೆದಿದ್ದಾರೆ. ನಮ್ಮನ್ನು ಸುಮಾರು 3 ಗಂಟೆಗಳ ಕಾಲ ತಡೆದು ನಿಲ್ಲಿಸಿದ್ದಾರೆ. ನಮಗೆ ಅವಮಾನವಾಗಿದೆ, ನಾವು ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಪರಿಷತ್‌ನಲ್ಲಿ ವಿಪಕ್ಷ ನಾಯಕ S.R.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್-​ ಬಿಜೆಪಿ ಜಟಾಪಟಿ: ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ಕಾಂಗ್ರೆಸ್​ ಸದಸ್ಯರು.
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು:  ವಿಧಾನಪರಿಷತ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಜಟಾಪಟಿ ಮುಂದುವರೆದಿತ್ತು. ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲಿ ಇಳಿದು ಪ್ರತಿಭಟನೆ ನಡೆಸಿದರು. ಪೊಲೀಸರು ನಮ್ಮನ್ನು ಸುವರ್ಣಸೌಧ ಬಳಿ ತಡೆದಿದ್ದಾರೆ. ನಮ್ಮನ್ನು ಸುಮಾರು 3 ಗಂಟೆಗಳ ಕಾಲ ತಡೆದು ನಿಲ್ಲಿಸಿದ್ದಾರೆ. ನಮಗೆ ಅವಮಾನವಾಗಿದೆ, ನಾವು ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಪರಿಷತ್‌ನಲ್ಲಿ ವಿಪಕ್ಷ ನಾಯಕ S.R.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುವರ್ಣ ಸೌಧಕ್ಕೆ ಕಾಂಗ್ರೆಸ್ ನಾಯಕರನ್ನು ತಡೆದಿದ್ದನ್ನು ಖಂಡಿಸಿದ ಎಸ್ ಆರ್ ಪಾಟೀಲ್ ನಮ್ಮನ್ನು ಪೊಲೀಸರು ಮೂರು ಗಂಟೆ ಸುವರ್ಣ ಸೌಧದ ಮುಂದೆ ತಡೆದರು. ನಾವು ಪೋಲೀಸರ ವಾಹನದಲ್ಲಿ ಸುವರ್ಣಸೌಧಕ್ಕೆ ಬರಲು ನಾವು ಆರೋಪಿಗಳೇನು? ಪೋಲೀಸರ ಮೇಲೆ ಪ್ರೀವಿಲೇಜ್ ಮೂವ್ ಮಾಡುತ್ತೇವೆ ಎಂದಿದ್ದಾರೆ.  

ನಮಗೆ ಅವಮಾನ ಆಗಿದೆ. ನಮ್ಮನ್ನು ತಡೆದಿದ್ದು ಸಭಾಪತಿಗಳಿಗೆ ಅವಮಾನ ಮಾಡಿದ ಹಾಗೆ. ಸಭಾಪತಿಗಳಿಗೆ ಅಪಮಾನ ಮಾಡಿ ನಮ್ಮನ್ನು ಮೂರು ಗಂಟೆ ಹೊರಗೆ ಇಟ್ಟಿದ್ದೀರಾ? ಇದು ಸರ್ಕಾರಕ್ಕೆ ಸಂಬಂದಿಸಿದ ವಿಷಯ ಹೀಗಾಗಿ ತಕ್ಷಣ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು. ಇದು ಪ್ರಜಾಪ್ರಭುತ್ವ ಕಗ್ಗೊಲೆ. ನನ್ನ ಗಮನಕ್ಕೆ ಬಂದ ಕೂಡಲೇ ಸರ್ಕಾರದ ಸಚಿವರಿಗೆ ಹೇಳಿದ್ದೇನೆ. ಅದೂ ಅಲ್ಲದೆ ಸದನ ನಡೆಸುವವರು ಸಭಾಪತಿಗಳೇ ಅಥವಾ ಸಭಾಪತಿಗಳ ಕಾನೂನು ಸಚಿವರೇ? ಎಂದು ವಿಧಾನಪರಿಷತ್‌ನಲ್ಲಿ ಕೋಪಗೊಂಡ ಎಸ್​ ಆರ್​ ಪಾಟೀಲ್​ ಪ್ರಶ್ನಿಸಿದ್ದಾರೆ. ಇದರ ಜತೆಗೆ ಬೆಂಗಳೂರಿನ ಕೆ.ಆರ್.ಪುರಂ ಬಳಿಯ ಕಲ್ಕೆರೆ ಗ್ರಾಮದಲ್ಲಿ 35 ಎಕರೆ ಭೂಕಬಳಿಕೆ ಮಾಡಿರುವ ಆರೋಪದ ಬಗ್ಗೆ ಪ್ರತಿಪಕ್ಷ ಪ್ರಶ್ನಿಸಿದೆ. ಈ ನಡುವೆ ಭೈರತಿ ಬಸವರಾಜ್ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಧರಣಿ ನಡೆಸಿತು.

 ಇದನ್ನೂ ಓದಿ:

Metro Man Sreedharan ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ ಕೇರಳದ ಮೆಟ್ರೊಮ್ಯಾನ್ ಇ ಶ್ರೀಧರನ್

ದೆಹಲಿಯಲ್ಲಿ ಒಮಿಕ್ರಾನ್ ಸೋಂಕಿನ ನಾಲ್ಕು ಪ್ರಕರಣ ಪತ್ತೆ, ದೇಶದಲ್ಲಿ ಸೋಂಕಿತರ ಸಂಖ್ಯೆ 77ಕ್ಕೆ ಏರಿಕೆ