ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ: ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಿದ ಅನ್ನದಾನಿ

ನಿರ್ಣಯವನ್ನೂ ಮಹಾರಾಷ್ಟ್ರ ಸರ್ಕಾರಕ್ಕೆ ಕಳಿಸಿಕೊಡುತ್ತೇವೆ ಎಂದು ಸದನದಲ್ಲಿ ಸಚಿವ ಅಶೋಕ್ ಸರ್ಕಾರದ ಪರವಾಗಿ ಉತ್ತರಿಸಿದರು.

ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ: ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಿದ ಅನ್ನದಾನಿ
ಮಳವಳ್ಳಿ ಶಾಸಕ ಅನ್ನದಾನಿ (ಎಡಚಿತ್ರ) ಮತ್ತು ಬೆಳಗಾವಿ ಸುವರ್ಣ ಸೌಧ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 16, 2021 | 4:07 PM

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣ ಇಂದು ವಿಧಾನಸಭೆಯಲ್ಲಿ ಮಾರ್ದನಿಸಿತು. ವಿಧಾನಸಭೆಯ ಬಾವಿಗಿಳಿದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿಧಾನಸಭೆಯಲ್ಲಿ ಖಂಡನಾ ನಿರ್ಣಯವನ್ನೂ ಮಂಡಿಸಲಾಯಿತು. ಪ್ರಕರಣದ ಬಗ್ಗೆ ಸದನದಲ್ಲಿದ್ದ ಬೆಳಗಾವಿ ಭಾಗದ ಕಾಂಗ್ರೆಸ್ ‌ಮತ್ತು ಬಿಜೆಪಿ ಶಾಸಕರು ಮೌನ ವಹಿಸಿದ್ದು ಕಂಡು ಬಂತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಳವಳ್ಳಿ ಶಾಸಕ ಡಾ.ಅನ್ನದಾನಿ, ಕನ್ನಡ ಧ್ವಜ ಸುಟ್ಟ ಪ್ರಕರಣ ಖಂಡಿಸಿ ಖಂಡನಾ ನಿರ್ಣಯ ಮಂಡಿಸಿದರು. ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ, ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಸಿಗುವಂತೆ ಮಾಡಲು ಗಮನ ಸೆಳೆಯಲಾಗುವುದು. ನಿರ್ಣಯವನ್ನೂ ಮಹಾರಾಷ್ಟ್ರ ಸರ್ಕಾರಕ್ಕೆ ಕಳಿಸಿಕೊಡುತ್ತೇವೆ ಎಂದು ಸದನದಲ್ಲಿ ಸಚಿವ ಅಶೋಕ್ ಸರ್ಕಾರದ ಪರವಾಗಿ ಉತ್ತರಿಸಿದರು.

ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದ ನಮಗೆ ನೋವಾಗಿದೆ. ಮಹಾರಾಷ್ಟ್ರ ಸರ್ಕಾರ ಏನು ಮಾಡುತ್ತಿದೆ. ಇದು ಕನ್ನಡಿಗರನ್ನು ಕೆಣಕು ಕೆಲಸ. ಇಂಥ ಬೆಳವಣಿಗೆಗಳನ್ನು ಸಹಿಸಲು ಆಗುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ವಿಚಾರವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ಸರ್ಕಾರವೇ ಖಂಡನಾ ನಿರ್ಣಯ ಮಂಡಿಸಬೇಕು ಎಂದು ಸಲಹೆ ಮಾಡಿದರು. ನೀವು ಖಂಡನಾ ನಿರ್ಣಯ ಮಂಡಿಸಿ, ನಾವೂ ಬೆಂಬಲಿಸುತ್ತೇವೆ. ಖಂಡನಾ ನಿರ್ಣಯವನ್ನು ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಕಳಿಸೋಣ ಎಂದು ಸಲಹೆ ಮಾಡಿದರು.

ಕನ್ನಡ ಧ್ವಜ ಸುಟ್ಟ ವಿಚಾರ ಚರ್ಚೆಗೆ ಅವಕಾಶ ನೀಡಬೇಕೆಂದು ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಆಗ್ರಹಿಸಿದರು. ಶೂನ್ಯವೇಳೆಯಲ್ಲಿ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ಪ್ರತಿಕ್ರಿಯಿಸಿದರು. ಮಾತನಾಡಲು ನಿಂತ ಅಶೋಕ್ ಅವರಿಗೆ ನನ್ನ ಕಡೆ ನೋಡಿ, ಸರ್ಕಾರದ ಉತ್ತರ ಕೊಡಿ ಎಂದು ಸೂಚನೆ ನೀಡಿದರು. ನನಗೆ ಮಾತಾಡಲು ಬಿಡುತ್ತಿಲ್ಲ ಎಂದು ಅಶೋಕ್ ಸುಮ್ಮನೆ ಕುಳಿತರು.

ಇದನ್ನೂ ಓದಿ: ಅಧಿವೇಶನದಲ್ಲಿ ಕಾಂಗ್ರೆಸ್ ಒತ್ತಾಯದ ಬೆನ್ನಲ್ಲೇ ಸಂಡೂರು ತಹಶಿಲ್ದಾರ್ ರಶ್ಮಿ ಬೆಂಗಳೂರಿಗೆ ಎತ್ತಂಗಡಿ ಇದನ್ನೂ ಓದಿ: ಕರ್ನಾಟಕ ಸರ್ಕಾರದ ಮೇಲೆ ಶೇ 40ರ ಕಮಿಷನ್ ಆರೋಪ: ಬೆಳಗಾವಿ ಅಧಿವೇಶನದಲ್ಲಿ ಗೋವಿಂದ ಕಾರಜೋಳ ಪ್ರತಿಕ್ರಿಯೆ