ಆರೋಗ್ಯ ಸಚಿವ ರಾಮುಲು ಅವರೆ.. ಯಾವ ಯುದ್ಧದಲ್ಲಿ ಗೆದ್ದಿರಿ! ಯಾವ ಪುರುಷಾರ್ಥಕ್ಕೆ ಇದು?

|

Updated on: Jun 02, 2020 | 4:22 PM

ಚಿತ್ರದುರ್ಗ: ಕೊರೊನಾ ಸಮಯದಲ್ಲಿ ಆರೋಗ್ಯ ಸಚಿವರೇ ಸಾಮಾಜಿಕ ಅಂತರ ಮರೆತು ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾಗಿರುವ ಘಟನೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಇಂದು ವೇದಾವತಿ ನದಿಗೆ ಬಾಗಿನ ಅರ್ಪಣೆಗೆ ಎಂದು ಪರಶುರಾಂಪುರಕ್ಕೆ ಆಗಮಿಸಿದ್ದರು. ಈ ವೇಳೆ ಜೆಸಿಬಿ ಮೂಲಕ ಸೇಬಿನ ಹಾರ, ಹೂವು ಹಾಕಿ ಅದ್ಧೂರಿ ಸ್ವಾಗತ ಮಾಡಲಾಗಿದೆ. ಈ ಸ್ವಾಗತ ಸಮಾರಂಭದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸಂಸದ ನಾರಾಯಣಸ್ವಾಮಿ ಭಾಗಿಯಾಗಿದ್ರು. ನೂರಾರು ಮಂದಿ ಜಮಾಹಿಸಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತು […]

ಆರೋಗ್ಯ ಸಚಿವ ರಾಮುಲು ಅವರೆ.. ಯಾವ ಯುದ್ಧದಲ್ಲಿ ಗೆದ್ದಿರಿ! ಯಾವ ಪುರುಷಾರ್ಥಕ್ಕೆ ಇದು?
Follow us on

ಚಿತ್ರದುರ್ಗ: ಕೊರೊನಾ ಸಮಯದಲ್ಲಿ ಆರೋಗ್ಯ ಸಚಿವರೇ ಸಾಮಾಜಿಕ ಅಂತರ ಮರೆತು ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾಗಿರುವ ಘಟನೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಇಂದು ವೇದಾವತಿ ನದಿಗೆ ಬಾಗಿನ ಅರ್ಪಣೆಗೆ ಎಂದು ಪರಶುರಾಂಪುರಕ್ಕೆ ಆಗಮಿಸಿದ್ದರು.

ಈ ವೇಳೆ ಜೆಸಿಬಿ ಮೂಲಕ ಸೇಬಿನ ಹಾರ, ಹೂವು ಹಾಕಿ ಅದ್ಧೂರಿ ಸ್ವಾಗತ ಮಾಡಲಾಗಿದೆ. ಈ ಸ್ವಾಗತ ಸಮಾರಂಭದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸಂಸದ ನಾರಾಯಣಸ್ವಾಮಿ ಭಾಗಿಯಾಗಿದ್ರು. ನೂರಾರು ಮಂದಿ ಜಮಾಹಿಸಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತು ಎತ್ತಿನ ಗಾಡಿ ಏರಿ ಶ್ರೀರಾಮುಲು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.

ಅಲ್ಲದೆ ಮೆರವಣಿಗೆಯಲ್ಲಿ ಭಾಗಿಯಾದ ಜನ ಸಹ ಮಾಸ್ಕ್‌ ಧರಿಸಿಲ್ಲ. ಆರೋಗ್ಯ ಸಚಿವರ ಸಮ್ಮುಖದಲ್ಲೇ ಕೊರೊನಾ ಜಾಗೃತಿ ನಿಯಮಗಳು ಮಣ್ಣುಪಾಲಾಗಿವೆ. ದೇಶ ಕೊರೊನಾ ಎಂಬ ಮಹಾಮಾರಿಯನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಆಚರಿಸಲಾಗುತ್ತಿರುವ ಈ ರೀತಿಯ ಅದ್ದೂರಿ ಮೆರವಣಿಗೆ ಬೇಕಿತ್ತ ಎಂಬ ಪ್ರಶ್ನೆ ಉಂಟಾಗಿದೆ.

Published On - 1:38 pm, Tue, 2 June 20