SSLC ಪರೀಕ್ಷೆ ನಾಡಹಬ್ಬದಂತಿತ್ತು! ವಿದ್ಯಾರ್ಥಿಗಳಿಗೆಲ್ಲ ಒಳಿತಾಗಲಿ -ಸುರೇಶ್ ಕುಮಾರ್ ಹಾರೈಕೆ
ಬೆಂಗಳೂರು: ಅಂತೂ ಮಹಾಮಾರಿ ಕೊರೊನಾ ಸಂಕಷ್ಟದ ಸಂದರ್ಭದಲ್ಲೂ 2019-2020ನೇ ಸಾಲಿನ SSLC ಪರೀಕ್ಷೆ ಪೂರ್ಣಗೊಂಡಿದೆ. ಹಾಗಾಗಿ SSLC ಪರೀಕ್ಷೆ ಕುರಿತ ಸಾಕ್ಷ್ಯ ಚಿತ್ರವನ್ನು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ಇಂದು 7,76,251 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. 7,61,506 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶೇಕಡಾ 98.10ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಕಳದೆ ವರ್ಷ ಇದೇ ವಿಷಯಕ್ಕೆ ಶೇ.98.06 ರಷ್ಟು ವಿದ್ಯಾರ್ಥಿಗಳು ಭಾಗಿಯಾಗಿದ್ರು. ವಿಶೇಷ ಅಂದ್ರೆ ಒಂದೇ ಒಂದು ಕೇಂದ್ರದಿಂದ ಕೊರೊನಾ ಸೋಂಕು ಹರಡಿಲ್ಲ. ಯಾವ ಯಾವ ವಿದ್ಯಾರ್ಥಿಗಳು […]
ಬೆಂಗಳೂರು: ಅಂತೂ ಮಹಾಮಾರಿ ಕೊರೊನಾ ಸಂಕಷ್ಟದ ಸಂದರ್ಭದಲ್ಲೂ 2019-2020ನೇ ಸಾಲಿನ SSLC ಪರೀಕ್ಷೆ ಪೂರ್ಣಗೊಂಡಿದೆ. ಹಾಗಾಗಿ SSLC ಪರೀಕ್ಷೆ ಕುರಿತ ಸಾಕ್ಷ್ಯ ಚಿತ್ರವನ್ನು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
ಇಂದು 7,76,251 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. 7,61,506 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶೇಕಡಾ 98.10ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಕಳದೆ ವರ್ಷ ಇದೇ ವಿಷಯಕ್ಕೆ ಶೇ.98.06 ರಷ್ಟು ವಿದ್ಯಾರ್ಥಿಗಳು ಭಾಗಿಯಾಗಿದ್ರು. ವಿಶೇಷ ಅಂದ್ರೆ ಒಂದೇ ಒಂದು ಕೇಂದ್ರದಿಂದ ಕೊರೊನಾ ಸೋಂಕು ಹರಡಿಲ್ಲ. ಯಾವ ಯಾವ ವಿದ್ಯಾರ್ಥಿಗಳು ಪರೀಕ್ಷೆಗೆ ಭಾಗವಹಿಸಿದ್ರೋ ಆ ವಿದ್ಯಾರ್ಥಿಗಳಿಗೆ ಒಳಿತಾಗಲಿ ಎಂದು ಸಚಿವ ಸುರೇಶ್ ಕುಮಾರ್ ಶುಭಹಾರೈಸಿದರು.
SSLC ಪರೀಕ್ಷೆ ಈ ಬಾರಿಯ ನಾಡಹಬ್ಬ ಕೊರೊನಾ ಆತಂಕದಿಂದ ಅನೇಕ ರಾಜ್ಯಗಳು ಪರೀಕ್ಷೆ ರದ್ದು ಮಾಡಿದ್ರು. ಕೇರಳ ರಾಜ್ಯದಲ್ಲಿ ಉತ್ತಮವಾಗಿ ಪರೀಕ್ಷೆ ನಡೆಸಿದ್ದಾರೆ. ಆರಂಭದಲ್ಲಿ ಅಳುಕಿತ್ತು, ಆದ್ರೆ ಪರೀಕ್ಷೆ ಮುಗಿಸಿದ ಬಳಿಕ ವಿಶ್ವಾಸ ಹೆಚ್ಚಿಸಿದೆ. ರಾಜ್ಯದ ವಿದ್ಯಾರ್ಥಿಗಳು ಇಂದು ಮಾದರಿ ತೋರಿಸಿದ್ದಾರೆ. ಪರೀಕ್ಷೆ ಮುಗಿದ ಮೇಲೂ ಕೊರೊನಾ ವಿರುದ್ಧ ಸೂತ್ರ ಪಾಲಿಸಬೇಕು. ಮುಖ್ಯಮಂತ್ರಿಗಳು ಬೆನ್ನೆಲುಬಾಗಿ ನಿಂತಿದ್ದಾರೆ. ವಿರೋಧ ಪಕ್ಷದ ನಾಯಕರು ಕೂಡ ಬೆಂಬಲ ನೀಡಿದ್ದಾರೆ. ಎಲ್ಲರು ಕೂಡ ಸಮನ್ವಯ ಸಾಧಿಸಿದ್ರೆ ಅಸಾಧ್ಯವನ್ನೂ ಸಾಧಿಸಬಹುದು ಅನ್ನೋದು ತಿಳಿಯುತ್ತೆ. SSLC ಪರೀಕ್ಷೆ ಈ ಬಾರಿಯ ನಾಡಹಬ್ಬ ಆಗಿದೆ ಎಂದರು.
ಜುಲೈ 13ರಿಂದ SSLC ಮೌಲ್ಯಮಾಪನ ಜುಲೈ 13ರಿಂದ SSLC ಮೌಲ್ಯಮಾಪನ ನಡೆಯಲಿದೆ. ಜುಲೈ 30ಕ್ಕೆ ಮೌಲ್ಯಮಾಪನ ಅಂತ್ಯವಾಗಲಿದೆ. ಮೌಲ್ಯಮಾಪನ ಕೇಂದ್ರಕ್ಕೂ ಎಸ್ಒಪಿ ಇರಲಿದೆ. ಮೌಲ್ಯಮಾಪಕರು ನಿರ್ಭೀತಿಯಿಂದ ಮೌಲ್ಯಮಾಪನ ಮಾಡಬಹುದು. 55 ವರ್ಷ ಮೀರಿದ ಶಿಕ್ಷಕರಿಗೆ ಮೌಲ್ಯ ಮಾಪನದಿಂದ ವಿನಾಯಿತಿ ಕೊಡಲಾಗುವುದು.
Published On - 5:17 pm, Fri, 3 July 20