TikTok 30 ಕೋಟಿ ರೂ ನೀಡಿದೆ.. ಕೇಂದ್ರ ಮೊದ್ಲು ಅದನ್ನು ವಾಪಸ್ ನೀಡಲಿ -ಖಾದರ್
ಮಂಗಳೂರು: ಭಾರತ ಸರ್ಕಾರ ಚೀನಾ ಮೂಲದ 59 ಌಪ್‌ಗಳನ್ನು ಬ್ಯಾನ್ ಮಾಡಿರುವುದಕ್ಕೆ ಕಾಂಗ್ರೆಸ್‌ನ ಶಾಸಕ ಯು ಟಿ ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಖಾದರ್ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಈ ಸಂಬಂಧ ಮಂಗಳೂರಿನಲ್ಲಿ ಮಾತನಾಡಿದ ಖಾದರ್, ಭಾರತದಲ್ಲಿ ಚೀನಾದ 59 ಆ್ಯಪ್‌ಗಳನ್ನು ಬ್ಯಾನ್ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಚೀನಾ ಆ್ಯಪ್ ಬ್ಯಾನ್‌ನಿಂದ ಭಾರತಕ್ಕೆ ಲಾಭವಿಲ್ಲ ಅದರ ಬದಲು ಪಿಎಂ ಕೇರ್ ಫಂಡ್‌ಗೆ ಟಿಕ್‌ಟಾಕ್‌ನಿಂದ 30 ಕೋಟಿ ರೂ. ಬಂದಿದೆ. ಕೇಂದ್ರ […]
ಮಂಗಳೂರು: ಭಾರತ ಸರ್ಕಾರ ಚೀನಾ ಮೂಲದ 59 ಌಪ್‌ಗಳನ್ನು ಬ್ಯಾನ್ ಮಾಡಿರುವುದಕ್ಕೆ ಕಾಂಗ್ರೆಸ್‌ನ ಶಾಸಕ ಯು ಟಿ ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಖಾದರ್ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಈ ಸಂಬಂಧ ಮಂಗಳೂರಿನಲ್ಲಿ ಮಾತನಾಡಿದ ಖಾದರ್, ಭಾರತದಲ್ಲಿ ಚೀನಾದ 59 ಆ್ಯಪ್‌ಗಳನ್ನು ಬ್ಯಾನ್ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಚೀನಾ ಆ್ಯಪ್ ಬ್ಯಾನ್‌ನಿಂದ ಭಾರತಕ್ಕೆ ಲಾಭವಿಲ್ಲ ಅದರ ಬದಲು ಪಿಎಂ ಕೇರ್ ಫಂಡ್‌ಗೆ ಟಿಕ್‌ಟಾಕ್‌ನಿಂದ 30 ಕೋಟಿ ರೂ. ಬಂದಿದೆ. ಕೇಂದ್ರ ಸರ್ಕಾರ ಮೊದಲು ಅದನ್ನು ವಾಪಸ್ ನೀಡಲಿ. ಅವರ ಹಣ ತೆಗೆದುಕೊಳ್ಳಲು ನಾಚಿಕೆ ಆಗೋದಿಲ್ಲವಾ? ಎಂದು ಮೋದಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಪ್ರಚಾರಕ್ಕಾಗಿ ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ. ಇದರಿಂದ ಚೀನಾಗೆ ಯಾವುದೇ ನಷ್ಟವಿಲ್ಲ. ಬದಲು ಚೀನಾ ಆ್ಯಪ್ ಕಂಪನಿಯಲ್ಲಿ ಕೆಲಸಕ್ಕಿದ್ದ ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ. ಕೆಲ ಭಾರತೀಯರು ಆ್ಯಪ್ ಮೂಲಕ ಆದಾಯ ಪಡೆಯುತ್ತಿದ್ದರು. ಆದ್ರೆ ಕೇಂದ್ರದ ನಿರ್ಧಾರದಿಂದ ಅವರ ಆದಾಯ ನಿಂತುಹೋಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ಖಾದರ್ ಹರಿಹಾಯ್ದಿದ್ದಾರೆ.
Published On - 4:22 pm, Fri, 3 July 20