ಬಜೆಟ್ ಬೆನ್ನಲ್ಲೇ.. ಟ್ಯಾಕ್ಸಿ ಪ್ರಯಾಣಿಕರಿಗೆ ದರದ ಬರೆ: ರಾಜ್ಯ ಸರ್ಕಾರದಿಂದ ನೂತನ ದರ ಪರಿಷ್ಕರಣೆ
ಟ್ಯಾಕ್ಸಿಗಳ ವಿವಿಧ ದರಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರದಿಂದ ಆದೇಶ ಪ್ರಕಟವಾಗಿದೆ. ಎಲ್ಲಾ ಬಗೆಯ ಟ್ಯಾಕ್ಸಿಗಳ ಲಗೇಜ್, ಕಾಯುವಿಕೆ ಮತ್ತು ಇನ್ನಿತರೆ ದರಗಳನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.
ಬೆಂಗಳೂರು: ಟ್ಯಾಕ್ಸಿಗಳ ವಿವಿಧ ದರಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರದಿಂದ ಆದೇಶ ಪ್ರಕಟವಾಗಿದೆ. ಎಲ್ಲಾ ಬಗೆಯ ಟ್ಯಾಕ್ಸಿಗಳ ಲಗೇಜ್, ಕಾಯುವಿಕೆ ಮತ್ತು ಇನ್ನಿತರೆ ದರಗಳನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.
ಅದರಂತೆ, ಹವಾನಿಯಂತ್ರಿತ ಟ್ಯಾಕ್ಸಿಗಳಿಗೆ ಕನಿಷ್ಠ 4 ಕಿ.ಮೀ ವರೆಗೆ 100 ರೂ. ಮತ್ತು ನಂತರ ಪ್ರತಿ ಕಿ.ಮೀಗೆ 24 ರೂ. ನಿಗದಿಯಾಗಿದೆ. ಜೊತೆಗೆ, ಹವಾನಿಯಂತ್ರಣ ರಹಿತ ಟ್ಯಾಕ್ಸಿಗಳಿಗೆ ಕನಿಷ್ಠ 4 ಕಿ.ಮೀವರೆಗೆ 75 ರೂ. ಮತ್ತು ನಂತರ ಪ್ರತಿ ಕಿ.ಮೀಗೆ 18 ರೂ. ದರ ನಿಗದಿಯಾಗಿದೆ.
ಜೊತೆಗೆ, ಎಲ್ಲಾ ಶ್ರೇಣಿಯ ಟ್ಯಾಕ್ಸಿಗಳ ಕಾಯುವಿಕೆ ದರ, ಲಗೇಜ್ ದರ ಮತ್ತು ರಾತ್ರಿ ದರಗಳನ್ನು ಸಹ ನಿಗದಿಪಡಿಸಲಾಗಿದೆ. ಈ ಕುರಿತು, ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ. ಅಂದ ಹಾಗೆ, ನೂತನ ದರ ಪರಿಷ್ಕರಣೆ ಇಂದಿನಿಂದಲೇ ಜಾರಿಯಾಗಲಿದೆ.
ಟ್ಯಾಕ್ಸಿ ದರ ಪರಿಷ್ಕರಣೆ ಮಾಡುವಂತೆ ಇಂದು ಫ್ರೀಡಂಪಾರ್ಕ್ನಲ್ಲಿ ಚಾಲಕರು ಅರೆಬೆತ್ತಲೆ ಹೋರಾಟ ಮಾಡಿದ್ದರು. ತೈಲ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮಾಡುವಂತೆ ಪ್ರತಿಭಟಿಸಿದ್ದರು. ಹೀಗಾಗಿ, ರಾಜ್ಯ ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಿ ತತಕ್ಷಣದಿಂದ ದರ ಪರಿಷ್ಕರಣೆ ಮಾಡಿ ಆದೇಶ ಪ್ರಕಟಿಸಿದೆ.