ಕೊರೊನಾ ತಂದ ಗೋಳು, ಹಬ್ಬಗಳ ಆಚರಣೆಗೆ ಬ್ರೇಕ್ ಹಾಕುತ್ತಾ ರಾಜ್ಯ ಸರ್ಕಾರ?
[lazy-load-videos-and-sticky-control id=”xPnpkXzB5wM”] ಬೆಂಗಳೂರು: ಕೊರೊನಾ ಮಾಹಾಮಾರಿಯಿಂದಾಗಿ ಈಗ ಹಬ್ಬ ಹರಿದಿನಗಳಿಗೆ ಬೀಳುತ್ತಿದೆ ಬ್ರೇಕ್. ಯಾಕಂದ್ರೆ ರಾಜ್ಯ ಸರ್ಕಾರ ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಹಬ್ಬಗಳ ಆಚರಣೆಯಲ್ಲಿ ಕೆಲವೊಂದಿಷ್ಟು ಮಾರ್ಪಾಡುಗಳನ್ನು ಮಾಡಲು ಮಂದಾಗಿದೆ. ಹೌದು ಕೊರೊನಾದಿಂದಾಗಿ ರಾಜ್ಯ ಸರ್ಕಾರ ಹಬ್ಬಗಳ ದುಂದು ಆಚರಣೆಗೆ ಕಡಿವಾಣ ಹಾಕಲು ಚಿಂತನೆ ನಡೆಸಿದೆ. ಈ ಸಂಬಂಧ ಮನೆಯಲ್ಲೇ ಹಬ್ಬಗಳನ್ನು ಆಚರಿಸುವಂತೆ ಮಾರ್ಗಸೂಚಿ ತರುವ ಸಾಧ್ಯತೆ ಇದೆ. ಗಣೇಶೋತ್ಸವ, ಶಾರದೋತ್ಸವ, ದೀಪಾವಳಿ ಸೇರಿ ಇತರ ಹಬ್ಬಗಳ ಅದ್ದೂರಿ ಆಚರಣೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. […]
[lazy-load-videos-and-sticky-control id=”xPnpkXzB5wM”]
ಬೆಂಗಳೂರು: ಕೊರೊನಾ ಮಾಹಾಮಾರಿಯಿಂದಾಗಿ ಈಗ ಹಬ್ಬ ಹರಿದಿನಗಳಿಗೆ ಬೀಳುತ್ತಿದೆ ಬ್ರೇಕ್. ಯಾಕಂದ್ರೆ ರಾಜ್ಯ ಸರ್ಕಾರ ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಹಬ್ಬಗಳ ಆಚರಣೆಯಲ್ಲಿ ಕೆಲವೊಂದಿಷ್ಟು ಮಾರ್ಪಾಡುಗಳನ್ನು ಮಾಡಲು ಮಂದಾಗಿದೆ.
ಹೌದು ಕೊರೊನಾದಿಂದಾಗಿ ರಾಜ್ಯ ಸರ್ಕಾರ ಹಬ್ಬಗಳ ದುಂದು ಆಚರಣೆಗೆ ಕಡಿವಾಣ ಹಾಕಲು ಚಿಂತನೆ ನಡೆಸಿದೆ. ಈ ಸಂಬಂಧ ಮನೆಯಲ್ಲೇ ಹಬ್ಬಗಳನ್ನು ಆಚರಿಸುವಂತೆ ಮಾರ್ಗಸೂಚಿ ತರುವ ಸಾಧ್ಯತೆ ಇದೆ. ಗಣೇಶೋತ್ಸವ, ಶಾರದೋತ್ಸವ, ದೀಪಾವಳಿ ಸೇರಿ ಇತರ ಹಬ್ಬಗಳ ಅದ್ದೂರಿ ಆಚರಣೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಹೀಗಾಗಿ ಈ ವರ್ಷ ಸಾರ್ವಜನಿಕ ಹಬ್ಬಗಳನ್ನು ಸರಳವಾಗಿ ಆಚರಿಸುವಂತೆ ಮಾರ್ಗಸೂಚಿಯನ್ನು ಹೊರಡಿಸುವ ಸಾಧ್ಯತೆ ಇದೆ.
ಈ ಮಾರ್ಗಸೂಚಿ ಕೇಂದ್ರ ಸರ್ಕಾರದ ಸಲಹೆಯಂತೆ ಇನ್ನೆರಡು ದಿನಗಳಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ಈ ಸಂಬಂಧ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಮುಜರಾಯಿ ಇಲಾಖೆಯಿಂದ ಶೀಘ್ರದಲ್ಲೇ ಮಾರ್ಗಸೂಚಿ ರೆಡಿಯಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಬರುವ ಸಲಹೆಗಾಗಿ ಕಾಯುತ್ತಿದೆ. ಜೊತೆಗೆ ಮಾರ್ಗಸೂಚಿ ಪ್ರಕಟಿಸುವ ಮುನ್ನ ಧಾರ್ಮಿಕ ಮುಖಂಡರೊಂದಿಗೂ ಸಹ ಚರ್ಚೆ ನಡೆಸಿ ಬಳಿಕವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ಶ್ರಾವಣ ಮಾಸದಲ್ಲಿ ನಾಗರಪಂಚಮಿ, ವರಲಕ್ಷ್ಮೀ ವ್ರತ, ಕೃಷ್ಣಾಷ್ಟಮಿ ಸೇರಿದಂತೆ ಅತಿ ಹೆಚ್ಚು ಹಬ್ಬಗಳು ಬರುತ್ತವೆ ಹೀಗಾಗಿ ಈ ಮಾರ್ಗಸೂಚಿ ಬೇಗ ಬರುವ ಸಾಧ್ಯತೆ ಇದೆ. ಇದರನ್ವಯ ಮಠ, ದೇವಾಲಯಗಳಲ್ಲಿ ಆಚರಿಸಲ್ಪಡುವ ಹಬ್ಬಗಳ ಆಚರಣೆಯಲ್ಲಿ ಕೆಲ ಮಟ್ಟಿನ ವ್ಯತ್ಯಯವಾಗುವ ಸಾಧ್ಯತೆ ಇದೆ. ಆದ್ರೆ ಜನರ ಗುಂಪು ಸೇರುವಿಕೆಗೆ ಕಡಿವಾಣ ಹಾಕಲು ಇಂಥ ಕ್ರಮ ಅನಿವಾರ್ಯ ಅಂತಿದೆ ರಾಜ್ಯ ಸರ್ಕಾರ.
Published On - 5:54 pm, Sat, 18 July 20